ಶಿವಮೊಗ್ಗ: ಕಡಜದ ಹುಳು ಕಚ್ಚಿ ಇಬ್ಬರು ಮೃತ

| Updated By: guruganesh bhat

Updated on: Oct 03, 2021 | 2:53 PM

ಕಡಜದ ಗೂಡಿಗೆ ಪೆಟ್ಟು ಬಿದ್ದಿದ್ದರಿಂದ ಕಡಜ ಹುಳುಗಳು ದಾಳಿ ಮಾಡಿವೆ. ಈ ವೇಳೆ ನಂಜಪ್ಪರ ಸಹಾಯಕ್ಕೆ ಬಂದ ಮಲ್ಲಿಕಾರ್ಜುನ್ ಮೇಲೂ ಕಡಜ ಹುಳಗಳು ದಾಳಿ ನಡೆಸಿವೆ. ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಭದ್ರಾವತಿ ಗ್ರಾಮಾಂತರ ಪೋಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ಕಡಜದ ಹುಳು ಕಚ್ಚಿ ಇಬ್ಬರು ಮೃತ
ಮೃತಪಟ್ಟ ದುರ್ದೈವಿ ಮಂಜಪ್ಪ
Follow us on

ಶಿವಮೊಗ್ಗ: ಟ್ರ್ಯಾಕ್ಟರ್​ಗೆ ಕಟ್ಟಿದ್ದ ಅಡಿಕೆ ಕೊಯ್ಯುವ ಕೋಲು ಕಡಜದ ಗೂಡಿಗೆ ಬಡಿದು ಕಡಜದ ಹುಳಗಳು ಕಚ್ಚಿ ಇಬ್ಬರು ಮೃತಪಟ್ಟ ದುರ್ಘಟನೆ ಭದ್ರಾವತಿಯ ಆನೆಕೊಪ್ಪದ ಎಂಪಿಎಂ ಬಡಾವಣೆ ಬಳಿ ನಡೆದಿದೆ. ಸಿಎನ್ ನಂಜಪ್ಪ (50) ಹಾಗೂ ಮಲ್ಲಿಕಾರ್ಜುನ್ (55) ಮೃತಪಟ್ಟ ದುರ್ದೈವಿಗಳು. ಟ್ರ್ಯಾಕ್ಟರ್​ಗೆ ಕಟ್ಟಿದ್ದ ಕೋಲು, ಬದಿಯಲ್ಲಿದ್ದ ಮರದ ಕಡಜದ ಗೂಡಿಗೆ ತಾಗಿದೆ. ಇದರ ಪರಿಣಾಮ ಟ್ರ್ಯಾಕ್ಟರ್ ಹಿಂದೆ ಬರುತ್ತಿದ್ದ ಬೈಕ್​ನಲ್ಲಿದ್ದ ನಂಜಪ್ಪ ಅವರ ಮೇಲೆ ಗೂಡು ಬಿದ್ದಿದೆ.

ಕಡಜದ ಗೂಡಿಗೆ ಪೆಟ್ಟು ಬಿದ್ದಿದ್ದರಿಂದ ಕಡಜ ಹುಳುಗಳು ದಾಳಿ ಮಾಡಿವೆ. ಈ ವೇಳೆ ನಂಜಪ್ಪರ ಸಹಾಯಕ್ಕೆ ಬಂದ ಮಲ್ಲಿಕಾರ್ಜುನ್ ಮೇಲೂ ಕಡಜ ಹುಳಗಳು ದಾಳಿ ನಡೆಸಿವೆ. ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಭದ್ರಾವತಿ ಗ್ರಾಮಾಂತರ ಪೋಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಕರೆಂಟ್ ಶಾಕ್; ಅಜ್ಜಿ, ಮೊಮ್ಮಗ ಸಾವು
ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ವಿದ್ಯುತ್ ಪ್ರವಹಿಸಿ ಅಜ್ಜಿ, ಮೊಮ್ಮಗ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಶಾಂತವ್ವ ಬಸ್ತವಾಡೆ (75), ಸಿದ್ದಾರ್ಥ ಬಸ್ತವಾಡೆ (25) ಸಾವನ್ನಪ್ಪಿದ ದುರ್ದೈವಿಗಳು. ಮನೆ ಹಿತ್ತಲಲ್ಲಿ ಬಟ್ಟೆ ಒಣಹಾಕುವಾಗ ಅಜ್ಜಿಗೆ ಕರೆಂಟ್ ಶಾಕ್ ಹೊಡೆದಿದೆ. ಅಜ್ಜಿಯನ್ನು ರಕ್ಷಿಸಲು ಮುಂದಾದ ಮೊಮ್ಮಗನೂ ಸಾವನ್ನಪ್ಪಿದ್ದಾನೆ. ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 

Nomads Education : ಅಪರಾಧ ಜಗತ್ತಿನೊಳಗೆ ಅಲೆಮಾರಿ ಮಕ್ಕಳ ಮುಖಗಳನ್ನು ಎದುರುಗೊಳ್ಳುವುದು ಬೇಡ ಅಲ್ಲವೆ?

ನಾಲ್ಕು ವ್ಯಕ್ತಿಗಳು, 20 ಜಾನುವಾರುಗಳನ್ನು ಕೊಂದ ನರಭಕ್ಷಕ ಹುಲಿಯ ಬೇಟೆಗೆ ಅರಣ್ಯ ಇಲಾಖೆ ಆದೇಶ