ಶಿವಮೊಗ್ಗದಲ್ಲಿ ನಿಷೇಧಿತ ಚೀನಾ ಬೆಳ್ಳುಳ್ಳಿ ಮಾರಾಟ; ದೇಶಿ ಬೆಳ್ಳುಳ್ಳಿ ಮಾರಾಟಗಾರರಿಗೆ ಶಾಕ್

| Updated By: Ganapathi Sharma

Updated on: Oct 01, 2024 | 8:21 AM

ಶಿವಮೊಗ್ಗ ನಗರದ ತರಕಾರಿ ಮಾರುಕಟ್ಟೆಗೆ ಈಗ ಚೀನಾ ಬೆಳ್ಳುಳ್ಳಿ ಎಂಟ್ರಿಕೊಟ್ಟಿದೆ. ಈಗಾಗಲೇ ದೇಶಿ ಬೆಳ್ಳುಳ್ಳಿ ದರ ಗಗನಕ್ಕೇರಿದೆ. ಈ ನಡುವೆ ಗ್ರಾಹಕರಿಗೆ ಕಡಿಮೆ ಬೆಲೆಯ ನಿಷೇಧಿತ ಚೀನಾ ಬೆಳ್ಳುಳ್ಳಿ ಮಾರಾಟ ಮಾಡುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಪರಿಣಾಮವಾಗಿ ದೇಶಿ ಬೆಳ್ಳುಳ್ಳಿ ಮಾರಾಟಗಾರರಿಗೆ ತೊಂದರೆಯಾಗಿದೆ.

ಶಿವಮೊಗ್ಗದಲ್ಲಿ ನಿಷೇಧಿತ ಚೀನಾ ಬೆಳ್ಳುಳ್ಳಿ ಮಾರಾಟ; ದೇಶಿ ಬೆಳ್ಳುಳ್ಳಿ ಮಾರಾಟಗಾರರಿಗೆ ಶಾಕ್
ಸಾಂದರ್ಭಿಕ ಚಿತ್ರ
Follow us on

ಶಿವಮೊಗ್ಗ, ಅಕ್ಟೋಬರ್ 1: ಸದ್ಯ ಬೆಳ್ಳುಳ್ಳಿ ದರ 300 ರಿಂದ 350 ರೂ. ತಲುಪಿದೆ. ಇಷ್ಟೊಂದು ದುಬಾರಿಯಾಗಿರುವ ಬೆಳ್ಳುಳ್ಳಿ ಖರೀದಿ ಮಾಡುವುದೇ ಗ್ರಾಹಕರಿಗೆ ಕಷ್ಟವಾಗಿದೆ. ಇದೇ ಬೆಳ್ಳುಳ್ಳಿ ದರ ಜಾಸ್ತಿ ಆಗಿರುವುದನ್ನು ಗಮನಿಸಿದ ಕೆಲ ಬೆಳ್ಳುಳ್ಳಿ ಸಗಟು ವ್ಯಾಪಾರಸ್ಥರು ನಿಷೇಧಿತ ಚೀನಾ ಬೆಳ್ಳುಳ್ಳಿಯನ್ನು ಕಡಿಮೆ ದರದಲ್ಲಿ ಮಾರುಕಟ್ಟೆಗೆ ಬಿಟ್ಟು ಮಾರಾಟ ಮಾಡುತ್ತಿದ್ದಾರೆ. ಆರೋಗ್ಯಕ್ಕೆ ಹಾನಿಕಾರಕ ಎನ್ನಲಾದ ಈ ಚೀನಾದ ಬೆಳ್ಳುಳ್ಳಿಯ ಮಾರಾಟ ಶಿವಮೊಗ್ಗದ ಗಾಂಧಿಬಜಾರ್ ಮಾರುಕಟ್ಟೆ ಸೇರಿದಂತೆ ವಿವಿಧ ಬಡಾವಣೆಯಲ್ಲಿ ಗಪ್ ಚುಪ್ ಆಗಿ ನಡೆಯುತ್ತಿದೆ.

ದೇಶಿ ಬೆಳ್ಳುಳ್ಳಿಗೆ ಕಡಿಮೆಯಾದ ಬೇಡಿಕೆ

ಶಿವಮೊಗ್ಗ ಮಾರುಕಟ್ಟೆಗೆ ಯಾವಾಗ ಚೀನಾ ಬೆಳ್ಳುಳ್ಳಿ ಎಂಟ್ರಕೊಟ್ಟಿತೋ ಅಲ್ಲಿಗೆ ದೇಶಿ ಬೆಳ್ಳುಳ್ಳಿಗೆ ಬೇಡಿಕೆ ಕಡಿಮೆ ಆಯಿತು. ನಿಷೇಧಿತ ಬೆಳ್ಳುಳ್ಳಿ ಎನ್ನುವುದು ಗೊತ್ತಿಲ್ಲದೇ ಗ್ರಾಹಕರು ಕಡಿಮೆ ದರದಲ್ಲಿ ಸಿಗುವ ಚೀನಾ ಬೆಳ್ಳುಳ್ಳಿ ಖರೀದಿ ಮಾಡುತ್ತಿದ್ದಾರೆ.

10 ವರ್ಷಗಳ ಹಿಂದೆಯೇ ನಿಷೇಧ

ಈಗಾಗಲೇ ಸರಕಾರವು ಚೀನಾ ದೇಶ ಮತ್ತು ರಾಜ್ಯದಲ್ಲಿ ಚೀನಾ ಬೆಳ್ಳುಳ್ಳಿ ಬಳಕೆಗೆ ನಿಷೇಧ ಹೇರಿದೆ. ಚೀನಾದಲ್ಲಿ ಬೆಳ್ಳುಳ್ಳಿಗೆ ದೊಡ್ಡ ಪ್ರಮಾಣದಲ್ಲಿ ರಾಸಾಯನಿಕ ಬಳಕೆ ಮಾಡುತ್ತಾರೆ. ಬೆಳ್ಳುಳ್ಳಿ ಸಂಸ್ಕರಣೆಗೂ ಬಳಷ್ಟು ರಾಸಾಯನಿಕ ಉಪಯೋಗಿಸುತ್ತಾರೆ. ಅವುಗಳ ಸೇವನೆಯಿಂದ ಹೊಟ್ಟೆ ಹುಣ್ಣು, ಸೋಂಕು ಇತ್ಯಾದಿ ಸಮಸ್ಯೆಗಳೂ ಸೃಷ್ಟಿಯಾಗುತ್ತವೆ. ಮೂತ್ರಪಿಂಡಗಳ ಆರೋಗ್ಯದ ಮೇಲೂ ಚೀನಾ ಬೆಳ್ಳುಳ್ಳಿ ಅಡ್ಡ ಪರಿಣಾಮ ಬೀರುತ್ತದೆ. ಈ ಹಿನ್ನಲೆಯಲ್ಲಿ 10 ವರ್ಷಗಳ ಹಿಂದೆಯೇ ಚೀನಾ ಬೆಳ್ಳುಳ್ಳಿ ನಿಷೇಧಿಸಲಾಗಿದೆ.

ಎಲ್ಲೆಲ್ಲಿ ಚೀನಾ ಬೆಳ್ಳುಳ್ಳಿ ಕಳ್ಳಸಾಗಣೆ?

ನೇಪಾಳ, ಮ್ಯಾನ್ಮಾರ್, ಭೂತಾನ್ ಕಳ್ಳ ಮಾರ್ಗವಾಗಿ ದೇಶ ಮತ್ತು ರಾಜ್ಯಕ್ಕೆ ಚೀನಾ ಬೆಳ್ಳುಳ್ಳಿ ಎಂಟ್ರಿಕೊಡುತ್ತಿದೆ. ಸದ್ಯ ಆರೋಗ್ಯಕ್ಕೆ ಹಾನಿಕಾರವಾಗಿರುವ ಚೀನಾ ಬೆಳ್ಳುಳ್ಳಿ ಶಿವಮೊಗ್ಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕದ್ದು ಮುಚ್ಚಿ ಚೀನಾ ಬೆಳ್ಳುಳ್ಳಿ ಮಾರಾಟ ನಡೆಯುತ್ತಿದೆ. ಈಗಾಗಲೇ ಹೊಟೇಲ್​ಗಳಲ್ಲಿ ಈ ಚೀನಾ ಬೆಳ್ಳುಳ್ಳಿ ಬಳಕೆ ಆಗುತ್ತಿದೆ. ಇದರಿಂದ ಆಹಾರ ಸೇವನೆ ಮಾಡಿದ ಗ್ರಾಹಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನಲೆಯಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರಿಗಳ ಅಧಿಕಾರಿಗಳು ಈ ನಿಷೇಧಿತ ಚೀನಾ ಬೆಳ್ಳುಳ್ಳಿ ಅಕ್ರಮ ಮಾರಾಟ ದಂಧೆಗೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:16 am, Tue, 1 October 24