ಶಿವಮೊಗ್ಗ, ಸೆ.12: ಜಿಲ್ಲೆಯಲ್ಲಿ ಮಂಗಾರು ಮಳೆ ಕೈಕೊಟ್ಟಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಬೆಳೆ ಹಾನಿ ಸಮೀಕ್ಷೆ ಮತ್ತು ಬೆಳೆ ವಿಮೆ, ಬೆಳೆ ಪರಿಹಾರ ಇದ್ಯಾವುದೇ ಪ್ರಕ್ರಿಯೆಗಳು ಸರಕಾರ ನಡೆಸಲು ಮುಂದಾಗಿಲ್ಲ. ಇನ್ನೂ ಮಳೆ ಬರಬಹದು ಎನ್ನುವ ಲೆಕ್ಕಾಚಾರದಲ್ಲಿ ಸರಕಾರವಿದೆ. ಮುಂದಿನ ಕ್ಯಾಬಿನೆಟ್ನಲ್ಲಿ ಬರ ಪೀಡಿತ ತಾಲೂಕು ಘೋಷಣೆ ಮಾಡುವುದಾಗಿ ಸಿಎಂ ಸ್ಪಷ್ಟಪಡಿಸಿದ್ದಾರೆ. ಬರ ಪೀಡಿತ ಘೋಷಣೆ ಮತ್ತು ರೈತ ಆತ್ಮಹತ್ಯೆಗೆ ಪರಿಹಾರ ನೀಡಲು ಸರ್ಕಾರ ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ (Shivamogga)ದಲ್ಲಿ ಸರಕಾರದ ವೈಫಲ್ಯದ ವಿರುದ್ಧ ಬಿಜೆಪಿ ರೈತ ಮೋರ್ಚಾದಿಂದ ಡಿಸಿ ಕಚೇರಿ ಎದುರು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮತ್ತು ಮಾಜಿ ಸಂಸದ ಬಿ. ವೈ ರಾಘವೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯಲ್ಲಿ ಮಳೆ ಇಲ್ಲದೆ ರೈತರು ಪರದಾಡುತ್ತಿದ್ದಾರೆ. ಬರ ಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಬೇಕಿದೆ. ಸಚಿವರು ಮತ್ತು ಸಿಎಂ ಕೇವಲ ಗ್ಯಾರಂಟಿಗಳಲ್ಲೆ ಮುಳುಗಿದ್ದಾರೆ. ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಇದರ ಪರಿಣಾಮ ಸರಕಾರದ ಮತ್ತು ಜಿಲ್ಲಾಡಳಿತದ ವಿರುದ್ಧ ಬಿಜೆಪಿ ನಾಯಕರು ತಮ್ಮ ಅಕ್ರೋಶ ಹೊರಹಾಕಿದ್ದಾರೆ. ಸಿಎಂ ಸಿದ್ದು ಬರ ಪೀಡಿತ ತಾಲೂಕು ಘೋಷಣೆಗೆ ಮೀನಾಮೇಷ ಮಾಡುತ್ತಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರದ ಬಣ್ಣ ಬಯಲಾಗಿದೆ; ಬರ ಪೀಡಿತ ತಾಲೂಕುಗಳ ಘೋಷಣೆ ಮಾಡದ್ದಕ್ಕೆ ಬಸವರಾಜ ಬೊಮ್ಮಾಯಿ ವಾಗ್ದಾಳಿ
ಈ ನಡುವೆ ಆತ್ಮಹತ್ಯೆ ಮಾಡಿಕೊಂಡ ರೈತರ ಬಗ್ಗೆ ಸಚಿವ ಶಿವಾನಂದ ಪಾಟೀಲ್ ಹಗುರವಾಗಿ ಮಾತನಾಡಿದ್ದಾರೆ. ಹೆಚ್ಚು ಪರಿಹಾರ ಕೊಟ್ಟಿದ್ದಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ಸಚಿವರು ಟೀಕೆ ಮಾಡಿದ್ದಾರೆ. ಈ ಸರಕಾರಕ್ಕೆ ರೈತರ ಶಾಪ ತಟ್ಟುತ್ತದೆ. ರೈತರ ಬಗ್ಗೆ ಕಾಳಜಿ ಇಲ್ಲದ ಸಿಎಂ ಮತ್ತು ಡಿಸಿಎಂ ಮತ್ತು ಅವರ ಸಚಿವರು. ಜಿಲ್ಲೆಗೆ ಸಚಿವರು ಭೇಟಿ ನೀಡಿ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲವೆಂದು ತಮ್ಮ ಅಕ್ರೋಶ ಬಿಜೆಪಿಯ ನಾಯಕರು ಹೊರಹಾಕಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ 2023-23 ನೇ ಸಾವಿನಲ್ಲಿ ಒಟ್ಟು 20 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಕುಟುಂಬಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಮೃತರು ರೈತರು ಸಾಲದ ಬಾಧೆಯಿಂದಲೇ ಮೃತಪಟ್ಟಿದ್ದಾರೆ ಎನ್ನುವ ಪರಿಶೀಲನೆ ಮತ್ತು ಮೃತರ ಎಫ್ಎಸ್ಎಲ್ ವರದಿ ಬಂದ ಬಳಿಕವಷ್ಟೆ ಅಂತಿಮವಾಗಲಿದೆ. ಈ ಹಿನ್ನಲೆಯಲ್ಲಿ ಮೃತರಿಗೆ ಪರಿಹಾರ ನೀಡುವುದು ವಿಳಂಬಗಾಗುತ್ತಿದೆ. ಜಿಲ್ಲಾಡಳಿತವು ತ್ವರಿತವಾಗಿ ಪರಿಹಾರಕ್ಕೆ ಗಮನ ಹರಿಸುತ್ತಿಲ್ಲ ಎನ್ನುವುದು ರೈತ ನಾಯಕರ ಆರೋಪವಾಗಿದೆ.
ಇದನ್ನೂ ಓದಿ:ಬರ ಪೀಡಿತ ಜಿಲ್ಲೆಯಲ್ಲಿ ಮಲೆನಾಡಿನಂತಿದ್ದ ಜಮಾಪುರ! ಗ್ರಾಮಸ್ಥರ ನೆಮ್ಮದಿಗೆ ಈಗ ಭಂಗ ಬಂದಿದೆ! ಏನಿದರ ಒಳಸುಳಿ?
ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಶೇ 40 ರಷ್ಟು ಕಡಿಮೆಯಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ 46 ಪಾಲಿಕೆ, ನಗರ ಸಭೆ, ಪುರಸಭೆಯ 46 ವಾರ್ಡ್ಗಳಲ್ಲಿ ಒಂದು ದಿನ ಬಿಟ್ಟು ಒಂದು ನೀರಿನ ಪೂರೈಕೆ ಆಗುತ್ತಿದೆ. ಜೊತೆಗೆ ಗ್ರಾಮೀಣ ಪ್ರದೇಶದಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೊರುವ ಸಾಧ್ಯತೆಯಿದೆ. ಈಗಾಗಲೇ ಎಲ್ಲ ಮುಂಜಾಗೃತ ಕ್ರಮಕ್ಕೆ ಜಿಲ್ಲಾಡಳಿತವು ಮುಂದಾಗಿದೆ. ಇನ್ನೂ ತುಂಗಾ, ಭದ್ರಾ, ಲಿಂಗನಮಕ್ಕಿ ಡ್ಯಾಂಗಳಲ್ಲಿ ನೀರಿನ ಪ್ರಮಾಣ ಕುಸಿಸಿದೆ. ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತ ಎನ್ನುವ ಘೋಷಣೆಯನ್ನು ಸರಕಾರ ಮಾಡಬೆಕಿದೆ ಎಂದರು.
ಧಾರಕಾರ ಮಳೆ ಸುರಿಯಬೇಕಿದ್ದ ಸಮಯದಲ್ಲಿ ಮಲೆನಾಡಿನಲ್ಲಿ ಸುಡು ಬಿಸಿಲು ಬೇಸಿಗೆ ಆರಂಭವಾಗಿ ಬಿಟ್ಟಿದೆ. ಇದರಿಂದ ಮೆಕ್ಕೆಜೋಳ ಬೆಳೆದ ರೈತರು ಈಗಾಗಲೇ ಕೈ ಸುಟ್ಟುಕೊಂಡು ಬೆಳೆ ಪರಿಹಾರದತ್ತ ಮುಖ ಮಾಡಿದ್ದಾರೆ. ಇನ್ನು ಭತ್ತ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕೊಂಡಿದ್ದಾರೆ. ಮಳೆ ಆಥವಾ ಡ್ಯಾಂ ನೀರು ಸಿಕ್ಕರೆ ಮಾತ್ರ ಭತ್ತ ಬೆಳೆ ಬಚಾವ ಆಗಲು ಸಾಧ್ಯ. ಅದರಂತೆ ಇದೀಗ ಶಿವಮೊಗ್ಗ ಜಿಲ್ಲೆಯನ್ನು ಬರ ಪೀಡಿತ ಎನ್ನುವ ಘೋಷಣೆ ಮಾಡಬೇಕೆಂದು ಬಿಜೆಪಿಯು ಬೀದಿಗೆ ಇಳಿದು ಹೋರಾಟಕ್ಕೆ ಮುಂದಾಗಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ