ಶಿವಮೊಗ್ಗದಲ್ಲಿ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ: ಮಾಜಿ ಪೊಲೀಸರ ಮನೆಯೇ ಈ ಕಳ್ಳರಿಗೆ ಟಾರ್ಗೆಟ್

Shivamogga Gold Heist: ಶಿವಮೊಗ್ಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ವಿಜಯಲಕ್ಷ್ಮಿ ಅವರ ಮನೆಯಲ್ಲಿ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 70 ಸಾವಿರ ರೂ. ನಗದು ದೋಚಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಾಸ್ಕ್‌ಧಾರಿ ಕಳ್ಳರು ಸೆರೆಯಾಗಿದ್ದಾರೆ. ಇತರೆ ಮನೆಗಳಲ್ಲೂ ಕಳ್ಳತನ ಯತ್ನ ನಡೆದಿದ್ದು, ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ನಡೆಸುತ್ತಿದ್ದಾರೆ.

ಶಿವಮೊಗ್ಗದಲ್ಲಿ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ: ಮಾಜಿ ಪೊಲೀಸರ ಮನೆಯೇ ಈ ಕಳ್ಳರಿಗೆ ಟಾರ್ಗೆಟ್
ಕಳ್ಳತನ ಮಾಡಿದ ದೃಶ್ಯ
Edited By:

Updated on: Jan 17, 2026 | 8:47 PM

ಶಿವಮೊಗ್ಗ, ಜ.17: ಜಿಲ್ಲೆಯಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ಶಿವಮೊಗ್ಗ ಜನರನ್ನು ಬೆಚ್ಚಿ ಬೀಳಿಸುವ ಘಟನೆಗಳು ನಡೆಯುತ್ತಿದೆ. ಒಂದು ಕಡೆ ಬಂಗಾರ ಬೆಲೆ ಏರುತ್ತಲೇ ಇದೆ. ಇನ್ನೊಂದು ಕಡೆ ಈ ಕಳ್ಳರು ಚಿನ್ನ ಕದ್ದಿಯುತ್ತಿದ್ದಾರೆ. ಇದೀಗ ರಾಜ್ಯದಲ್ಲಿ ಕಳ್ಳರ ಕಾಟ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.  ಶಿವಮೊಗ್ಗದ (Shivamogga theft) ಹಲವು ಕಡೆ ಕಳ್ಳತನ ಆಗಿರುವ ಘಟನೆಗಳು ಪತ್ತೆಯಾಗಿದೆ. ಜಿಲ್ಲೆಯ ಸ್ವಾಮಿ ವಿವೇಕಾನಂದ ಬಡಾವಣೆಯ ವಿಜಯಲಕ್ಷ್ಮಿ ಎಂಬುವವರ ಮನೆಗೆ ಕಳ್ಳರು ನುಗ್ಗಿ ಸುಮಾರು 15 ಲಕ್ಷದ ಚಿನ್ನಾಭಾರಣ ಹಾಗೂ 70 ಸಾವಿರ ರೂಪಾಯಿ ನಗದು ದೋಚಿ ಎಸ್ಕೇಪ್ ಆಗಿದ್ದಾರೆ. ಇಂದು (ಜ.17) ಬೆಳಗಿನ ಜಾವ ಸುಮಾರು 1 ರಿಂದ 3 ಗಂಟೆ ವೇಳೆ ಮೂವರು ಕಳ್ಳರು ಮನೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಮನೆ ಬಾಗಿಲಿನ ಲಾಕ್ ಮುರಿದು ಒಳಗೆ ನುಗ್ಗಿ ಬಿರು ಲಾಕರ್ ಮುರಿದು  ಎಲ್ಲ ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಿದ್ದಾರೆ. ಇನ್ನು ಈ ಕಳ್ಳರು ಬಂದಿರುವ ಮತ್ತು ಬೈಕ್​​ನಲ್ಲಿ ಓಡಾಡುವ ದೃಶ್ಯ ಸಿಸಿ ಕ್ಯಾಮರ್​​ದಲ್ಲಿ ಸೆರೆಯಾಗಿದೆ.

ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋದ ಪ್ರಕಾರ, ಕಳ್ಳರು ಮುಖಕ್ಕೆ ಮಾಸ್ಕ್, ಕೈಯಲ್ಲಿ ಮಚ್ಚು ಲಾಂಗ್ ಹಾಗೂ ಕಲ್ಲು ಹಿಡಿದುಕೊಂಡಿರುವುದನ್ನು ತೋರಿಸಲಾಗಿದೆ. ಒಂದೇ ಬೈಕ್​​ನಲ್ಲಿ ಈ ಮೂವರು ಕಳ್ಳರು ಬಂದಿದ್ದಾರೆ. ಮನೆ ಯಜಮಾನಿ ವಿಜಯಲಕ್ಷ್ಮೀ ಅವರು ಮನೆಗೆ ಬೀಗ ಹಾಕಿ ಬಾಂಬೆಯಲ್ಲಿರುವ ತಮ್ಮ ಸಂಬಂಧಿಕರ ಮನೆ ಹೋಗಿದ್ದಾರೆ. ಎರಡು ಮೂರು ದಿನಗಳಿಂದ ಈ ಮನೆಗೆ ಹೊಂಚು ಹಾಕಲು ಈ ಕಳ್ಳರು ಕಾಯುತ್ತಿದ್ದರು. ವಿಜಯಲಕ್ಷ್ಮಿ ಅವರು ಬಾಂಬೆಗೆ ಹೋಗುತ್ತಿದ್ದಂತೆ ಕಳ್ಳರು ಅವರ ಮನೆಗೆ ದಾಳಿ ಮಾಡಿದ್ದಾರೆ. ವಿಜಯಲಕ್ಷ್ಮಿ ಅವರ ಮನೆಯಲ್ಲಿ ಕಳ್ಳತನ ಆಗಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ ಪಕ್ಕದ ಮನೆಯವರು ಬಾಂಬೆಯಲ್ಲಿದ್ದ ವಿಜಯಲಕ್ಷ್ಮಿ ಅವರಿಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ವಿಜಯಲಕ್ಷ್ಮಿ ಅವರು ಭದ್ರಾವತಿಯಲ್ಲಿರುವ ಅವರ ಸಹೋದರ ಚಂದ್ರಶೇಖರ್ ಅವರಿಗೆ ಕರೆ ಮಾಡಿ ಮನೆಯ ಬಳಿ ಹೋಗಿ ಪರಿಶೀಲಿಸುವಂತೆ ಹೇಳಿದ್ದಾರೆ. ಚಂದ್ರಶೇಖರ್ ಅವರು ಬಂದು ನೋಡಿದಾಗ ಕಳ್ಳತನ ಆಗಿರುವುದು ಬಹಿರಂಗವಾಗಿದೆ. ಇನ್ನು ವಿಜಯಲಕ್ಷ್ಮಿ ಅವರ ಮನೆಯಲ್ಲಿ ಮಾತ್ರವಲ್ಲದೆ, ಅವರ ಬಡವಾಣೆಯ ಸಾಲಿನಲ್ಲೇ ಬರುವ ಇನ್ನೊಂದು ಮನೆಯ ಬೈಕ್​​ ಕೂಡ ಕಳ್ಳತನ ಆಗಿದೆ. ನಂತರ ಈ ಬಡವಾಣೆಯ ಮುಂದೆ ಪೊಲೀಸ್​​​​ ಬಡವಾಣೆ ಇದೆ. ಅಲ್ಲಿಯೂ ಕೂಡ ಎರಡು ಮನೆಯ ಕಿಟಕಿ ಮುರಿದು ಕಳ್ಳತನ ಮಾಡಲು ಮುಂದಾಗಿದ್ದಾರೆ. ಆದರೆ ಅಲ್ಲಿ ಕಳ್ಳತನ ಮಾಡಲು ಸಾಧ್ಯವಾಗಿಲ್ಲ. ವಿಜಯಲಕ್ಷ್ಮಿ ಅವರ ಮನೆಯಲ್ಲಿ ಕಳ್ಳತನ ಮಾಡುವ ಮೊದಲು ಈ ಎರಡು ಕಡೆ ಕಳ್ಳತನ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ವಿಜಯಲಕ್ಷ್ಮಿ ಅವರ ಮನೆಯಲ್ಲಿ ಕಳ್ಳತನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ತುಂಗಾ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಜನ್ಮ ಕೊಟ್ಟ ತಂದೆಯನ್ನೇ ಕೊಂದು ಮೃತ ದೇಹವನ್ನು ಆ್ಯಂಬುಲೆನ್ಸ್​​​ನಲ್ಲಿ ಕಳಿಸಿದ ಮಗಳು

ಹೆಚ್ಚುವರಿ ಎಸ್ಪಿ ಕಾರಿಯಪ್ಪ ಅವರು ಕಳ್ಳತವಾಗಿರುವ ವಿಜಯಲಕ್ಷ್ಮಿ ಮನೆಗೆ ಭೇಟಿ ನೀಡಿದ್ದರು. ಕಳ್ಳತನ ಮತ್ತು ಕಳ್ಳರ ಬಗ್ಗೆ ಒಂದಿಷ್ಟು ಮಾಹಿತಿ ಕಲೆಹಾಕಿದ್ದಾರೆ. ಕಳ್ಳರ ಬಲೆಗೆ ಈಗಾಗಲೇ ಒಂದು ವಿಶೇಷ ತಂಡ ರಚನೆ ಮಾಡಿದ್ದಾರೆ. ಪೊಲೀಸ್ ಬಡಾವಣೆಗೆ ಕಳ್ಳರ ಗ್ಯಾಂಗ್ ಕಳ್ಳತನಕ್ಕೆ ಯತ್ನಿಸಿದರುವುದು ಬಡಾವಣೆಯ ಜನರಿಗೆ ದೊಡ್ಡ ಆತಂಕ ಸೃಷ್ಟಿ ಮಾಡಿದೆ. ಇಲ್ಲಿ ಎಲ್ಲ ನಿವೃತ್ತ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ಮನೆಗಳಿವೆ. ಇಂತಹ ಮನೆಗಳಿಗೆ ಕಳ್ಳರು ಕಳ್ಳತನಕ್ಕೆ ಬಂದಿರುವುದು ಸ್ಥಳೀಯರಿಗೆ ಅಚ್ಚರಿ ಮೂಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 8:36 pm, Sat, 17 January 26