Kidnap Case: 20 ಲಕ್ಷಕ್ಕೆ ಡಿಮ್ಯಾಂಡ್, ಸಿಕ್ಕಿಬದ್ದ ಯುವತಿ ಹಿಂದೆ ಇತ್ತು ಮತಾಂತರ ಕೈವಾಡ

|

Updated on: May 17, 2023 | 9:35 AM

ಶಿವಮೊಗ್ಗ ನಗರದಲ್ಲಿ ನರ್ಸಿಂಗ್ ಓದುತ್ತಿದ್ದ ಯುವತಿಯು ಕಿಡ್ನಾಪ್ ಆಗಿದ್ದು, ಪ್ರಕರಣ ಬೇಧಿಸಿದ ಶಿವಮೊಗ್ಗ ಪೊಲೀಸರ ತನಿಖೆಯಲ್ಲಿ ಮತಾಂದರ ಕೈವಾಡ ಇರುವುದು ಪತ್ತೆಯಾಗಿದೆ.

Kidnap Case: 20 ಲಕ್ಷಕ್ಕೆ ಡಿಮ್ಯಾಂಡ್, ಸಿಕ್ಕಿಬದ್ದ ಯುವತಿ ಹಿಂದೆ ಇತ್ತು ಮತಾಂತರ ಕೈವಾಡ
ಸಾಂದರ್ಭಿಕ ಚಿತ್ರ
Follow us on

ಶಿವಮೊಗ್ಗ: ಮಲೆನಾಡಿನಲ್ಲಿ ಮತಾಂತರಗಳು (conversion) ಸದ್ದಿಲ್ಲದೆ ನಡೆಯುತ್ತಿರುತ್ತವೆ. ಶಿವಮೊಗ್ಗ (Shivamogga) ಭದ್ರಾವತಿಯಲ್ಲಿ (Bhadravati) ಈಗಾಗಲೇ ಅನೇಕ ಮತಾಂತರ ಪ್ರಕರಣಗಳು ನಡೆದಿವೆ. ಈ ನಡುವೆ ಶಿವಮೊಗ್ಗ ನಗರದಲ್ಲಿ ನರ್ಸಿಂಗ್ (Nursing) ಓದುತ್ತಿದ್ದ ಯುವತಿಯು ಕಿಡ್ನಾಪ್ ಆಗಿದ್ದು, ಪ್ರಕರಣ ಬೇಧಿಸಿದ ಶಿವಮೊಗ್ಗ ಪೊಲೀಸರ ತನಿಖೆಯಲ್ಲಿ ಮತಾಂದರ ಕೈವಾಡ ಇರುವುದು ಪತ್ತೆಯಾಗಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ರಂಜಿತಾ (20) ಎಂಬ ಯುವತಿ ನರ್ಸಿಂಗ್ ವಿದ್ಯಾಬ್ಯಾಸಕ್ಕೆಂದು ಶಿವಮೊಗ್ಗಕ್ಕೆ ಬಂದಿದ್ದಳು. ನಗರದ ನಂಜಪ್ಪ ಕಾಲೇಜ್​ನಲ್ಲಿ ನರ್ಸಿಂಗ್ ಓದುತ್ತಿದ್ದ ಯುವತಿ ರಂಜಿತಾ ಭಾನುವಾರ (ಮೇ.14) ಸವಳಂಗ ರಸ್ತೆಯಲ್ಲಿರುವ ಜೆಎನ್​​​​ಸ್ಟಡಿ ಹೋಂ ಅಂಡ್ ಹಾಸ್ಟೇಲ್​ನಿಂದ ಕಾಣೆಯಾಗಿದ್ದಳು. ಯುವತಿ ನಾಪತ್ತೆಯಾಗಿದ್ದ ವಿಷಯ ತಿಳಿದ ಸ್ನೇಹಿತರಿಗೆ ಬಿಗ್ ಶಾಕ್ ಆಗಿತ್ತು. ಕಿಡ್ನಾಪ್​ ಆದ ನಂತರ ರಂಜಿತಾ ಮೊಬೈಲನಿಂದ ತಂದೆ ಬಸವರಾಜ್​ ಮೊಬೈಲಗೆ ನಾನು ಕಿಡ್ನಾಪ್ ಆಗಿದ್ದೇನೆ, ಕೂಡಲೇ ನನಗೆ 20 ಲಕ್ಷ ಹಣ ಹಾಕಿ ಎಂದು ಸಂದೇಶ ರವಾನೆಯಾಗಿತ್ತು.

ಮಗಳ ಈ ಮೆಸೇಜ್​ ಕಂಡು ಪೋಷಕರು ಗಾಬರಿಯಾಗಿ, ಕೂಡಲೇ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಅವರು ಎರಡು ತಂಡ ರಚನೆ ಮಾಡಿ ರಂಜಿತಾ ಪತ್ತೆಗೆ ಮುಂದಾಗುತ್ತಾರೆ. ಯುವತಿಯನ್ನು ಹುಡುಕುತ್ತಾ ಸಾಗಿದ ಪೊಲೀಸರಿಗೆ ರಂಜಿತಾ ಸಿಕ್ಕಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ.

ಇದನ್ನೂ ಓದಿ: ಐದು ವರ್ಷ ಹಿಂದಿನ ಸೇಡು ತೀರಿಸಿಕೊಳ್ಳಲು ಆಡಿ ಕಾರ್​ನಲ್ಲಿ ಬಂದು ಉದ್ಯಮಿ ಮೇಲೆ ಮನ ಬಂದಂತೆ ಹಲ್ಲೆ

ರಂಜಿತಾಳನ್ನು ಪೊಲೀಸರು ಶಿವಮೊಗ್ಗಕ್ಕೆ ಕರೆ ತಂದು ವಿಚಾರಣೆ ನಡೆಸಿದಾಗ, ರಂಜಿತಾ ಶಿವಮೊಗ್ಗದಿಂದ ಬೆಂಗಳೂರು, ಬೆಂಗಳೂರಿನಿಂದ ಹುಬ್ಬಳ್ಳಿಗೆ ಪಯಣ ಬೆಳೆಸಿದ್ದಳು ಎಂದು ತಿಳಿದುಬಂದಿದೆ. ಅಲ್ಲದೆ ಖರ್ಚು ವೆಚ್ಚಕ್ಕೆಂದು ಕಿಡ್ನಾಪ್ ಡ್ರಾಮಾ ಆಡಿ ತಂದೆಯಿಂದಲೇ 20 ಲಕ್ಷ ಹಣ ಪಡೆಯಲು ಮುಂದಾಗಿದ್ದೆ ಎಂದು ಬಾಯಿಬಿಟ್ಟಿದ್ದಾಳೆ.

ಕಿಡ್ನಾಪ್​ ಡ್ರಾಮಾ ಹಿಂದೆ ಇತ್ತು ಮತಾಂದರ ಕೈವಾಡ

ಹೌದು ಓರ್ವ ಕ್ರೈಸ್ತ ಯುವತಿಯು ರಂಜಿತಾಗೆ ಪರಿಚಯವಾಗಿದ್ದಳು. ಆ ಯುವತಿಯು ಇವಳ ಬ್ರೇನ್ ವಾಶ್ ಮಾಡಿದ್ದಾಳೆ. ಹೀಗೆ ಬ್ರೇನ್ ವಾಶ್ ಆಗಿದ್ದ ರಂಜಿತಾಳನ್ನು ಮುಂಬಯಿಯ ಕ್ಯಾಥೊಲಿಕ್ ಚರ್ಚ್​ಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ರಂಜಿತಾಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಪ್ಲ್ಯಾನ್ ಮಾಡಿದ್ದರಂತೆ. ರಂಜಿತಾ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿ ಕ್ರೈಸ್ತ ಸನ್ಯಾಸಿ ಆಗಲು ಮುಂದಾಗಿದ್ದಳ್ಳಂತೆ. ಈ ಸಂಬಂಧ ಮುಂಬೈ ಅಥವಾ ಹೈದ್ರಾಬಾಬ್​ಗೆ ಬರುವುದಕ್ಕೆ ಇವಳಿಗೆ ಸೂಚಿಸಲಾಗಿತ್ತು. ಹೀಗಾಗಿ ಖರ್ಚು ವೆಚ್ಚಕ್ಕೆಂದು ಯುವತಿಯು ಕಿಡ್ನಾಪ್ ಡ್ರಾಮಾ ಮಾಡಿ ತಂದೆಯಿಂದಲೇ 20 ಲಕ್ಷ ಹಣ ಪಡೆಯಲು ಮುಂದಾಗಿದ್ದಳು.

ಕಿಡ್ನಾಪ್ ಪ್ರಕರಣವನ್ನು ಬೇಧಿಸಿದ ಪೊಲೀಸರಿಗೆ ಇದೊಂದು ಮತಾಂತರ ಕೇಸ್ ಎನ್ನುವುದು ತಿಳಿದು ಬಂದಿದೆ. ಈ ಮತಾಂತರ ಕೇಸ್ ಗಮನಕ್ಕೆ ಬರುತ್ತಿದ್ದಂತೆ ಹಿಂದೂಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರು ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಸಿದ್ದಾರೆ. ಹಿಂದೂ ಧರ್ಮಕ್ಕೆ ಸೇರಿದ ಯುವತಿಯು ಮತಾಂತಕ್ಕೆ ಮುಂದಾಗಿದ್ದು ಪೋಷಕರಿಗೆ ದೊಡ್ಡ ಆಘಾತ ತಂದಿದೆ. ಆದರೆ ಅವಳ ಅದೃಷ್ಟ ಚೆನ್ನಾಗಿತ್ತು. ಜಯನಗರ ಪೊಲೀಸರು ರಂಜಿತಾಳನ್ನು ಪತ್ತೆ ಮಾಡಿ ರಕ್ಷಿಸಿದ್ದಾರೆ.

ರಂಜಿತಾಳನ್ನ ಪೋಷಕರು ನರ್ಸಿಂಗ್ ಕೋರ್ಸ್ ಕಲಿಯುವುದಕ್ಕೆ ಕಳುಹಿಸಿದ್ರೆ, ಮಗಳು ಯಾರದೋ ಮಾತು ಕೇಳಿಕೊಂಡು ಕ್ರೈಸ್ತಧರ್ಮಕ್ಕೆ ಮತಾಂತರ ಆಗಲು ಮುಂದಾಗಿದ್ದಳು. ತನ್ನ ಖರ್ಚು ವೆಚ್ಚಕ್ಕಾಗಿ ತಂದೆ 20 ಲಕ್ಷ ರೂಪಾಯಿ ಕಿಡ್ನಾರ್ಪ್ ಹೆಸರಿನಲ್ಲಿ ಬೇಡಿಕೆಯಿಟ್ಟಿದ್ದು ಮಾತ್ರ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ಕಿಡ್ನಾಪ್ ಕೇಸ್ ತನಿಖೆಯಿಂದ ಮತಾಂತರ ಪ್ರಕರಣ ಸದ್ಯ ಬಯಲಾಗಿದೆ. ಮಲೆನಾಡಿನಲ್ಲಿ ಸದ್ದಿಲ್ಲದೇ ನಡೆಯುತ್ತಿರುವ ಮತಾಂತರ ಕುರಿತು ಸದ್ಯ ಪೊಲೀಸರು ಕಟ್ಟೆಚ್ಚರ ವಹಿಸಬೇಕಿದೆ.

ಬಸವರಾಜ್ ಯರಗಣವಿ ಟಿವಿ 9 ಶಿವಮೊಗ್ಗ

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ