AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಐದು ವರ್ಷ ಹಿಂದಿನ ಸೇಡು ತೀರಿಸಿಕೊಳ್ಳಲು ಆಡಿ ಕಾರ್​ನಲ್ಲಿ ಬಂದು ಉದ್ಯಮಿ ಮೇಲೆ ಮನ ಬಂದಂತೆ ಹಲ್ಲೆ

ಕಾರುಗಳ ವ್ಯವಹಾರ ನಡೆಸುವ ಉದ್ಯಮಿ ಅಖಿಲ್ ಎಂಬುವವರು ಐದು ವರ್ಷಗಳ ಹಿಂದೆ ಮೋಸ ಮಾಡಿದ್ದಾರೆಂದು ಕೆಲವರ ವಿರುದ್ಧ ದೂರು ನೀಡಿದ್ದರು. ಆದ್ರೆ ಈಗ ಆ ಕಿರಾತಕರು ಅಖಿಲ್ ಮೇಲೆ ಹಲ್ಲೆ ನಡೆಸಿದ್ದಾರೆ.

ಬೆಂಗಳೂರು: ಐದು ವರ್ಷ ಹಿಂದಿನ ಸೇಡು ತೀರಿಸಿಕೊಳ್ಳಲು ಆಡಿ ಕಾರ್​ನಲ್ಲಿ ಬಂದು ಉದ್ಯಮಿ ಮೇಲೆ ಮನ ಬಂದಂತೆ ಹಲ್ಲೆ
ಕಾರು ಅಡ್ಡಗಟ್ಟಿ ಹಲ್ಲೆ
ಆಯೇಷಾ ಬಾನು
|

Updated on: May 17, 2023 | 9:06 AM

Share

ಬೆಂಗಳೂರು: ಐದು ವರ್ಷಗಳ ಹಿಂದೆ ನಡೆದ ಘಟನೆಗೆ ಸೇಡು ಇಟ್ಟುಕೊಂಡಿದ್ದ ಕಿರಾತಕರು ಸಮಯ ಸಾಧಿಸಿ ಈಗ ಉದ್ಯಮಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ. ಕಾರುಗಳ ವ್ಯವಹಾರ ನಡೆಸುವ ಉದ್ಯಮಿ ಅಖಿಲ್ ಎಂಬುವವರು ಐದು ವರ್ಷಗಳ ಹಿಂದೆ ಮೋಸ ಮಾಡಿದ್ದಾರೆಂದು ಕೆಲವರ ವಿರುದ್ಧ ದೂರು ನೀಡಿದ್ದರು. ಆದ್ರೆ ಈಗ ಆ ಕಿರಾತಕರು ಅಖಿಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಮನ ಬಂದಂತೆ ಥಳಿಸಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಐದು ವರ್ಷಗಳ ಹಿಂದೆ ಮೋಸ ಮಾಡಿದ್ದಾರೆ ಎಂದು ಯಲಹಂಕ ಪೊಲೀಸ್ ಠಾಣೆಯತಲ್ಲಿ ರೋನಿತ್ ಮೇಲೆ ದೂರು ದಾಖಲಿಸಲಾಗಿತ್ತು. ಇದಾದ ಬಳಿಕ ರೋನಿತ್​ನನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ನಂತರ ರೋನಿತ್ ಆಗಾಗ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದನಂತೆ. ಈಗ ನನ್ನ ಮೇಲೆ ದೂರು ನೀಡಿದ್ದೇಕೆ ಎಂದು ಪ್ರಶ್ನಿಸಿ ಉದ್ಯಮಿ ಅಖಿಲ್ ಮೇಲೆ ಹಲ್ಲೆ ಮಾಡಿರುವ ಆರೋಪ‌ ಕೇಳಿ ಬಂದಿದೆ. ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಆಡಿ ಕಾರಿನಲ್ಲಿ ಫಾಲೋ ಮಾಡಿದ್ದಾರೆ. ಅಪಾರ್ಟ್ಮೆಂಟ್ ಬಳಿ ಬಂದಿದ್ದ ಅಖಿಲ್ ಮಿನಿ ಕೂಪರ್ ಕಾರನ್ನು ತಡೆದು ಗಲಾಟೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಆನೇಕಲ್​: ವಾಹನ‌ ಸವಾರರಿಗೆ ಯಮ ಸ್ವರೂಪಿಯಾದ ಬೆಂಗಳೂರು ಹೊಸೂರು ಹೈವೇ

ಮೈಸೂರಿನಲ್ಲಿ ಅಕ್ರಮ ಮರಳು ಸಾಗಾಣೆ ಕಾರ್ಯಾಚರಣೆ

ಇನ್ನು ಅಕ್ರಮ ಮರಳು ಸಾಗಾಣೆ ವಿರುದ್ಧ ಹುಣಸೂರು ಪೊಲೀಸರು ಕಾರ್ಯಾಚರಣೆ ನಡೆಸಿ 20 ಟ್ರ್ಯಾಕ್ಟರ್ ಮರಳು, 2 ಟ್ರ್ಯಾಕ್ಟರ್, 1 ಜೆಸಿಬಿ ವಶಕ್ಕೆ ಪಡೆದಿದ್ದಾರೆ. ಲಕ್ಷ್ಮಣತೀರ್ಥ ನದಿಯಲ್ಲಿ ಅಕ್ರಮ ಮರಳು ಸಂಗ್ರಹಣೆ ಮಾಡಲಾಗುತ್ತಿತ್ತು. ಸದ್ಯ ಪೊಲೀಸರು ಕಾರ್ಯಚರಣೆ ನಡೆಸಿ ಮರಳು ಸಂಗ್ರಹಕ್ಕೆ ಬಳಸಿದ್ದ ಒಂದು ಜೆಸಿಬಿ ಮತ್ತು ಎರಡು ಟ್ರ್ಯಾಕ್ಟರ್ ವಶಕ್ಕೆ ಪಡೆದಿದ್ದಾರೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ