Suspected Terrorists: ಶಿವಮೊಗ್ಗದ ಶಂಕಿತ ಉಗ್ರರಿಂದ ತುಂಗಾ ತೀರದಲ್ಲಿ ಬಾಂಬ್ ಸ್ಟೋಟ ಪರೀಕ್ಷೆ ಶಂಕೆ: ಪೊಲೀಸರಿಂದ ವಿಚಾರಣೆ

| Updated By: ವಿವೇಕ ಬಿರಾದಾರ

Updated on: Sep 21, 2022 | 11:22 AM

ತೀರ್ಥಹಳ್ಳಿಯಲ್ಲಿ ಶಂಕಿತ ಉಗ್ರರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರರರು ಜೊತೆಗೆ ಪ್ರಯೋಗಾರ್ಥವಾಗಿ ರಾಜ್ಯದ ವಿವಿಧೆಡೆಯ ನಿರ್ಜನ ಪ್ರದೇಶಗಳಲ್ಲಿ ಬಾಂಬ್​ ಸ್ಫೋಟ ನಡೆಸಿರುವ ಶಂಕೆ ವ್ಯಕ್ತವಾಗಿದೆ.

Suspected Terrorists: ಶಿವಮೊಗ್ಗದ ಶಂಕಿತ ಉಗ್ರರಿಂದ ತುಂಗಾ ತೀರದಲ್ಲಿ ಬಾಂಬ್ ಸ್ಟೋಟ ಪರೀಕ್ಷೆ ಶಂಕೆ: ಪೊಲೀಸರಿಂದ ವಿಚಾರಣೆ
ಶಿವಮೊಗ್ಗ
Follow us on

ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ಶಂಕಿತ ಉಗ್ರರರ (Suspected Terrorists) ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಕೆ ಚುರುಕುಗೊಂಡಿದ್ದು, ತನಿಕೆ ವೇಳೆ ಹಲವು ಅಚ್ಚರಿ ವಿಷಯಗಳು ಬಯಲಾಗುತ್ತವೆ. ಬಂಧಿತ ಮೂವರು ಶಂಕಿತ ಉಗ್ರರರು ತಮ್ಮ ಮೊಬೈಲ್​ನಲ್ಲಿ (Mobile) ಒಂದೇ ತರಹದ ಆ್ಯಪ್ (App) ಉಪಯೋಗಿಸುತ್ತಿದ್ದರು. ಶಂಕಿತ ಉಗ್ರರ ಗುಂಪು ಭಯೋತ್ಪಾದಕ ಕೃತ್ಯ ಎಸಗಲು ವೈರ್​​ಆ್ಯಪ್ ಎಂಬ ಹೆಸರಿನ ಆ್ಯಪ್​ ಬಳಕೆ ಮಾಡುತ್ತಿದ್ದರು. ಶಂಕಿತ ಉಗ್ರರು ವೈರ್​​ಆ್ಯಪ್​ ಮೂಲಕ ಉಗ್ರ ಕೃತ್ಯದ ಸಂಚು ರೂಪಿಸುತ್ತಿದ್ದು, ಬಂಧಿತ ಆರೋಪಿಗಳ ಮೊಬೈಲ್​​ ಪರಿಶೀಲನೆ ವೇಳೆ​​ ಆ್ಯಪ್ ಬಳಕೆ​ ಮಾಡುತ್ತಿರುವುದು ಪತ್ತೆಯಾಗಿದೆ.

ವಿವಿಧೆಡೆ ನೂರಕ್ಕೂ ಹೆಚ್ಚು ಜನ ವೈರ್​​ಆ್ಯಪ್ ಬಳಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ವೈರ್​ಆ್ಯಪ್​ ಮೂಲಕ ಇತರೆ ಸಹಚರರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದರು. ವೈರ್​​ಆ್ಯಪ್​​ ಮೂಲಕ ಶಂಕಿತ ಉಗ್ರರು ಟಾಕಿಂಗ್​, ಚಾಟಿಂಗ್​ ಮಾಡುತ್ತಿದ್ದು, ಬಾಂಬ್​ ತಯಾರಿಕೆ, ಬಾಂಬ್​ ಬ್ಲಾಸ್ಟ್, ಜಿಹಾದಿ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದರು.

ಶಂಕಿತ ಉಗ್ರರಿಂದ ರಾಜ್ಯ ಹಾಗೂ ದೇಶದ ವಿವಿಧೆಡೆ ಬಾಂಬ್ ಬ್ಲಾಸ್ಟ್ ಮಾಡಲು ಮಾಸ್ಟರ್ ಪ್ಲಾನ್ ನಡೆದಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ. ಬಂಧಿತ ಶಂಕಿತ ಉಗ್ರ ಯಾಸಿನ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್​​ನಲ್ಲಿ ಇಂಜಿನಿಯರಿಂಗ್ ಓದಿದ್ದ ಆದರೆ ಇಂಜಿನಿಯರಿಂಗ್ ಪದವಿ ಉತ್ತೀರ್ಣಗೊಂಡಿರಲಿಲ್ಲ. ಅಷ್ಟರಲ್ಲಾಗಲೇ ಯಾಸಿನ್ ಶಾರಿಖ್ ಹಾಗೂ ಮಾಜ್ ಮೂಲಕ ಉಗ್ರರ ಸಂಪರ್ಕಕ್ಕೆ ಬಂದಿದ್ದನು.

ಯಾಸಿನ್ ಹಾಗೂ ಮಾಜ್ ಸೇರಿ ಬಾಂಬ್ ತಯಾರಿಸಲಾರಂಭಿಸಿದ್ದರು. ಜೊತೆಗೆ ಪ್ರಯೋಗಾರ್ಥವಾಗಿ ರಾಜ್ಯದ ವಿವಿಧೆಡೆಯ ನಿರ್ಜನ ಪ್ರದೇಶಗಳಲ್ಲಿ ಬಾಂಬ್​ ಸ್ಫೋಟವನ್ನೂ ಮಾಡಿದ್ದರು. ಅಲ್ಲದೇ ರಾಜ್ಯದ ವಿವಿಧೆಡೆ ಹಲವರಿಗೆ ಯಾಸಿನ್ ಹಾಗೂ ಮಾಜ್ ಸೇರಿ ಬಾಂಬ್ ತಯಾರಿಕೆ ತರಬೇತಿ ನೀಡಿರುವ ಶಂಖೆ ವ್ಯಕ್ತವಾಗಿದೆ. ಈ ಎಲ್ಲ ಮಾಹಿತಿ ಆರೋಪಿಗಳ ಮೊಬೈಲ್​ನಲ್ಲಿತ್ತು ಎನ್ನಲಾಗುತ್ತಿದೆ. ಕೇವಲ ರಾಜ್ಯ ಮಾತ್ರವಲ್ಲದೆ ದೇಶದ ವಿವಿಧೆಡೆ ಬಾಂಬ್ ಬ್ಲಾಸ್ಟ್​​ಗೆ ಸಂಚು ರೂಪಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಬಂಧಿತ ಶಂಕಿತ ಉಗ್ರ ಸೈಯದ್ ಯಾಸೀನ್ ಶಿವಮೊಗ್ಗ ನಗರದ ಹಳೇ ಗುರುಪುರ ಪ್ರದೇಶದ ಅಡಿಕೆ ತೋಟದ ಬಳಿ ತುಂಗಾ ನದಿ ದಡದಲ್ಲಿ 10-17 ಸಲ ಬಾಂಬ್ ಸ್ಟೋಟ್ ಟ್ರಾಯಲ್ ಮಾಡಿದ್ದಾನೆ ಎಂದು ಟಿವಿ9ಗೆ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.

ಸೈಯದ್ ಯಾಸೀನ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿದ್ಯಾರ್ಥಿಯಾದ ಹಿನ್ನೆಲೆ ಕೆಲ ಸ್ಪೋಟಕ ವಸ್ತುಗಳನ್ನ ತಂದು ಇಲ್ಲಿ ಟ್ರಾಯಲ್ ಮಾಡುತ್ತಿದ್ದ. ಇದಕ್ಕೆ ಪೂರಕವಾದ ಸಾಕ್ಷಿಗಳು ಪೊಲೀಸರಿಗೆ ಲಭ್ಯ ಆಗಿರುವ ಸಾಧ್ಯತೆ ಇದೆ. ಘಟನಾ ಸ್ಥಳದಲ್ಲಿ ಕರ್ಪೂರ, ಹಸಿರು ಬಟ್ಟೆ ಜೊತೆಗೆ ಸ್ಥಳಕ್ಕೆ ಬರಲು ಕಾಲು ದಾರಿ ಸಹ ಇರುವುದು ಪತ್ತೆಯಾಗಿದೆ.

ಘಟನೆ ಹಿನ್ನೆಲೆ

ಆಗಸ್ಟ್​ 15 ಸ್ವಾತಂತ್ರ್ಯ ದಿನಾಚರಣೆಯಂದು ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ವೀರ್ ಸಾವರ್ಕರ್ ಮತ್ತು ಟಿಪ್ಪು ಸುಲ್ತಾನ್​ ಫ್ಲೆಕ್ಸ್ ವಿಚಾರವಾಗಿ ಭಾರೀ ಗಲಾಟೆಯಾಗಿ ಲಾಠಿ ಪ್ರಹಾರವಾಗಿತ್ತು. ಈ ವೇಳೆ ನಗರದ ಉಪ್ಪಾರಕೇರಿ ಬಡಾವಣೆಯಲ್ಲಿ ಪ್ರೇಮ್​​ ಸಿಂಗ್​ ಎಂಬುವರಿಗೆ ಅನ್ಯಕೋಮಿನ ಯುವಕರು ಚಾಕುವಿನಿಂದ ಇರಿದಿದ್ದರು. ಹಾಗೇ ಅಶೋಕನಗರದಲ್ಲಿ ಪ್ರವೀಣ್ (27) ಎಂಬುವರಿಗೂ ಕೂಡ ಚೂರಿ ಇರಿಯಲಾಗಿತ್ತು.

ಪ್ರಕರಣ ಸಂಬಂಧ ಪೊಲೀಸರು ಜೆಸಿ ನಗರದ ನದೀಮ್ (25) ಹಾಗೂ ಬುದ್ಧ ನಗರದ ಅಬ್ದುಲ್ ರೆಹಮಾನ್ (25) ಎಂಬುವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದರು. ನಂತರ ಪ್ರಕರಣದ ಪ್ರಮುಖ ಆರೋಪಿಗಾಗಿ ಶೋಧ ಮುಂದುವರಿಸಿದ್ದರು. ಅದರಂತೆ ತೀರ್ಥಹಳ್ಳಿ ರಸ್ತೆಯ ನಮೋ ಶಂಕರ ಲೇಔಟ್​ನಲ್ಲಿ ಆರೋಪಿ ಇರುವ ಸುಳಿವು ಪಡೆದ ಪೊಲೀಸರು ಬಂಧಿಸಲು ಮುಂದಾದಾಗ ಆರೋಪಿ ಜಬೀವುಲ್ಲಾ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.

ಈ ವೇಳೆ ಪೊಲೀಸರ ಆತ್ಮರಕ್ಷಣೆಗಾಗಿ ವಿನೋಬನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಕುರಿ ಅವರು ಸಬೀವುಲ್ಲಾನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಜಬಿ ಪ್ರಮುಖ ಆರೋಪಿ ಎಂದು ತಿಳಿದು ಬಂದಿದೆ. ಪೊಲೀಸರು ಮೊದಲು ಜಬಿ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ಬಳಿಕ ಜಬಿ ಪತ್ನಿಯ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು.

ಆದರೆ ಯಾವುದೆ ಮಹತ್ವದ ದಾಖಲೆಗಳು ಎರಡು ಮೊಬೈಲ್ ನಲ್ಲಿಯೂ ಸಿಕ್ಕಿರಲಿಲ್ಲ. ಹೀಗಾಗಿ ಜಬಿ ಮನೆ ಶೋಧನೆ ಮಾಡಿದಾಗ ಬೆಡ್ ಕೆಳಗೆ ಇನ್ನೊಂದು ಮೊಬೈಲ್ ಪತ್ತೆಯಾಗಿತ್ತು. ಇದೇ ಮೊಬೈಲ್ ಮಲೆನಾಡಿನ ಉಗ್ರ ಸಂಘಟನೆಯ ಜಾಡನ್ನು ಬಿಚ್ಚಿಟ್ಟಿತ್ತು. ಈ ಮೊಬೈಲ್ ಪರಿಶೀಲನೆಗೊಳಪಡಿಸುತಿದ್ದಂತೆ ಕೆಲ ಆಪ್​ಗಳ ಮೂಲಕ ಮಾಡಿಕೊಂಡಿದ್ದ ಗ್ರೂಪ್​ಗಳು ಪತ್ತೆಯಾಗಿದ್ದವು. ಪೊಲೀಸರ ಕೈಗೆ ಈ ಮೊಬೈಲ್ ಸಿಗುತಿದ್ದಂತೆ ಎಲ್ಲರೂ ಗ್ರೂಪ್​ಗಳಿಂದ ಎಕ್ಸಿಟ್ ಆಗಿದ್ದರು‌.

ಆಗಲೇ ಪೊಲೀಸರಿಗೆ ದೊಡ್ಡ ಅನುಮಾನ ಶುರುವಾಗಿತ್ತು. ಎಕ್ಸಿಟ್ ಆದವರ ಮಾಹಿತಿ ಕಲೆ ಹಾಕಲಾರಂಭಿಸಿದಾಗ ಮಾಜ್ ಹಾಗೂ ಯಾಸಿನ್ ಶಿವಮೊಗ್ಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಉಗ್ರಸಂಘಟನೆಯೊಂದಿಗೆ ಗುರುತಿಸಿಕೊಂಡ ಮೂವರೂ ತೀರ್ಥಹಳ್ಳಿ ಮೂಲದವರಾಗಿದ್ದಾರೆ. ಮತೀನ್, ಶಾರೀಖ್, ಮಾಜ್ ಮೂವರೂ ತೀರ್ಥಹಳ್ಳಿ ಮೂಲದವರು. ಇನ್ನೊಬ್ಬ ಆರೋಪಿ ಯಾಸಿನ್ ಶಿವಮೊಗ್ಗದ ಸಿದ್ದೇಶ್ವರ ನಗರದವನು.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ