ಶಿವಮೊಗ್ಗ: ಜಿಲ್ಲೆಯ ನವುಲೆ ಗ್ರಾಮದಲ್ಲಿ ಫೆಬ್ರವರಿ 1ರ ಸಂಜೆ ಯಶವಂತ ಎನ್ನುವ 29 ವರ್ಷದ ವ್ಯಕ್ತಿಯು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮೊದಲು ಯಶವಂತ ಡೆತ್ನೋಟ್ ಬರೆದಿಟ್ಟಿದ್ದು, ಸದ್ಯ ಆ ಡೆತ್ ನೋಟ್ನಿಂದ ಆತನ ಸಾವಿನ ಗುಟ್ಟು ರಟ್ಟಾಗಿದೆ. ಕಳೆದ ಕೆಲವು ದಿನಗಳಿಂದ ಆತ ಕೆಲಸ ಮಾಡುವ (ಶ್ರೀರಾಮ್) ಖಾಸಗಿ ಪೈನಾನ್ಸ್ನ ಮ್ಯಾನೇಜರ್ ರಘು ಮತ್ತು ಪ್ರಶಾಂತ್, ಗೋಪಿ, ನರಸಿಂಹ ಸೇರಿಕೊಂಡು ಹಣಕಾಸಿನ ವಿಚಾರವಾಗಿ ಯಶವಂತಗೆ ಟಾರ್ಚರ್ ಕೊಡುತ್ತಿದ್ದರಂತೆ. ಗ್ರಾಹಕರಿಂದ ಸಂಗ್ರಹಿಸಿದ ಹಣವನ್ನು ಮ್ಯಾನೇಜರ್ ರಘುಗೆ ಕೊಟ್ಟಿರುವೆ. ಆದ್ರೆ ಅವರು ಹಣ ಕಟ್ಟಿಲ್ಲವೆಂದು ನನ್ನ ಮೇಲೆ ಆರೋಪ ಹೊರಿಸಿ ಕೆಲಸದಿಂದ ತೆಗೆದು ಹಾಕಿದರು. ಅದರ ಬಳಿಕ ಪೈನಾನ್ಸ್ಗೆ ಹಣ ಕಟ್ಟಬೇಕೆಂದು ನಿತ್ಯ ಟಾರ್ಚರ್ ಕೊಡುತ್ತಿದ್ದರು. ಇವರ ಕಾಟ ತಾಳಲಾರೆದೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆನೆಂದು ಯಶವಂತ ಡೆತ್ ನೋಟ್ ಬರೆದಿದ್ದಾನೆ. ಜೊತೆಗೆ ತನ್ನ ಹೆಂಡತಿಗೆ ಒಂದೂವರೆ ವರ್ಷದ ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ, ಪೈನಾನ್ಸ್ಗೆ ಯಾವುದೇ ಹಣ ಕಟ್ಟಬೇಡಿ ಎಂದು ಯಶವಂತ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾನೆ.
ಕುಟುಂಬಸ್ಥರು ಸಂಬಂಧಿಕರ ತಿಥಿ ಕಾರ್ಯಕ್ಕೆ ನಿನ್ನೆ ಹೋಗಿದ್ದರು. ಇದೇ ಚಾನ್ಸ್ ಮನೆಯಲ್ಲಿ ಯಾರು ಇಲ್ಲವೆಂದು ಯಶವಂತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತಿಗೆ ಪತ್ನಿಯು ನಿರಂತರವಾಗಿ ಕಾಲ್ ಮಾಡಿದ್ದಾಳೆ. ಆದ್ರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಗಾಬರಿಯಾದ ಕುಟುಂಬಸ್ಥರು ಅಕ್ಕಪಕ್ಕದವರಿಗೆ ಮನೆ ಬಳಿ ಹೋಗಿ ಪರಿಶೀಲನೆ ಮಾಡಲು ಹೇಳಿದ್ದಾರೆ. ಸ್ಥಳೀಯರು ಕಿಟಕಿ ಬಾಗಿಲು ತೆಗೆದು ನೋಡಿದಾಗ ಯಶವಂತ್ ನೇಣು ಹಾಕಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಸುಮಾರು ಎರಡು ಲಕ್ಷದ ವ್ಯವಹಾರದ ವಿಚಾರದಲ್ಲಿ ಪೈನಾನ್ಸ್ ಮ್ಯಾನೇಜರ್ ರಘು ಮತ್ತು ಅದೇ ಫೈನಾನ್ಸ್ನಲ್ಲಿ ಹಣವಸೂಲಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಯಶವಂತ ನಡುವೆ ವಿವಾದ ಶುರುವಾಗಿತ್ತು. ಯಶವಂತ ಮೇಲೆ ಮ್ಯಾನೇಜರ್ ವೈಯಕ್ತಿ ದ್ವೇಷದಿಂದ ಮೊದಲಿನಿಂದಲೂ ಟಾರ್ಚರ್ ಕೊಡುತ್ತಿದ್ದನು. ಕೆಲಸ ಬಿಟ್ಟ ಬಳಿಕವೂ ಹಣಕ್ಕಾಗಿ ಕಾಟ ಕೊಡುತ್ತಿದ್ದರು. ಕಳೆದ ವಾರ ಶ್ರೀರಾಮ ಫೈನಾನ್ಸ್ಗೆ ಯಶವಂತ್ ಮತ್ತು ಕುಟುಂಬಸ್ಥರು ಹೋಗಿ ಮ್ಯಾನೇಜರ್ ಭೇಟಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕುರಿತು ಮಾತುಕತೆ ಮಾಡಿದ್ದರು.
ಒಂದಿಷ್ಟು ಹಣ ಫೈನಾನ್ಸ್ಗೆ ಕಟ್ಟಿ, ಉಳಿದ ಬಾಕಿ ಹಣ ಸ್ವಲ್ಪ ದಿನದ ಬಳಿಕ ಕೊಡುವುದಾಗಿ ಮಾತುಕತೆ ಮಾಡಿಕೊಂಡು ಬಂದಿದ್ದರು. ಈ ನಡುವೆ ಮತ್ತೆ ಪೈನಾನ್ಸ್ ಮ್ಯಾನೇಜರ್ ರಘು ಮತ್ತು ಆತನ ಸಿಬ್ಬಂದಿಗಳು ಹಣಕ್ಕಾಗಿ ಪೀಡಿಸುತ್ತಿದ್ದರು. ಪೊಲೀಸ್ರಿಗೆ ದೂರು ಕೊಡುತ್ತೇವೆ. ಜೈಲಿಗೆ ಹಾಕಿಸುತ್ತೇವೆಂದು ಭಯ ಪಡಿಸುತ್ತಿದ್ದರಂತೆ. ಮಾಡದ ತಪ್ಪಿಗೆ ಫೈನಾನ್ಸ್ಗೆ ಹಣ ಕೊಟ್ಟು, ಉಳಿದ ಹಣ ಕೊಡುವುದಾಗಿ ಹೇಳಿದರು ಅವರಿಗೆ ತೃಪ್ತಿ ಆಗಿರಲಿಲ್ಲ. ವಿನಾಕಾರಣ ಮಾನಸಿಕ ಕಿರುಕುಳ ನೀಡುತ್ತಲೇ ಇದ್ದರೂ. ಇವರ ಟಾರ್ಚರ್ ಸಹಿಸಿಕೊಳ್ಳಲು ಆಗದೇ ಯಶವಂತ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಮ್ಯಾನೇಜರ್ ರಘು ಮತ್ತು ಸಿಬ್ಬಂದಿಗಳಾದ ಪ್ರಶಾಂತ್, ಗೋಪಿ ಹಾಗೂ ನರಸಿಂಹ ನಾಲ್ವರ ಮೇಲೆ ಎಫ್ ಐಆರ್ ದಾಖಲಾಗಿದೆ.
ಪರಿಶಿಷ್ಟ ಜಾತಿಗೆ ಸೇರಿದ ಯಶವಂತ ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿದ್ದನು. ಮದುವೆಯಾಗಿ ಒಂದೂವರೆ ವರ್ಷದ ಪುಟ್ಟ ಮಗು ಇತ್ತು. ಈ ನಡುವೆ ಫೈನಾನ್ಸ್ನಲ್ಲಿ ಕೆಲಸ ಹೋಗಿತ್ತು. ಅದೇ ಪೈನಾನ್ಸ್ ಮ್ಯಾನೇಜರ್ ಹಣಕ್ಕಾಗಿ ಕೊಟ್ಟ ಕಾಟ ತಾಳಲಾರದೇ ಯಶವಂತಹ ತನ್ನ ಜೀವವನ್ನೇ ಕಳೆದುಕೊಂಡಿದ್ದು ಮಾತ್ರ ವಿಪರ್ಯಾಸ.
ವರದಿ: ಬಸವರಾಜ್ ಯರಗಣವಿ ಟವಿ9 ಶಿವಮೊಗ್ಗ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ