Shivamogga Violence Live: ಸದ್ಗತಿ ಕೋರಿ ಹರ್ಷ ಅಸ್ಥಿ ವಿಸರ್ಜಿಸಿದ ಪ್ರಮೋದ್ ಮುತಾಲಿಕ್ ಹಾಗೂ ಕಾಳಿಸ್ವಾಮಿ
Shimoga Bajrang Dal Worker Harsha Murder Live Updates: ಹರ್ಷನ ಕೊಲೆ ಸಂಬಂಧ ಪೊಲೀಸರು ಆರು ಆರೋಪಿಗಳನ್ನ ಬಂಧಿಸಿದ್ದಾರೆ. ಇನ್ನು ಸುಮಾರು 6 ಸಾವಿರ ಮೊಬೈಲ್ ಕಾಲ್‌ಗಳ ಪರಿಶೀಲನೆ ನಡೆಸಲಾಗುತ್ತಿದೆ. ಹತ್ಯೆ ನಡೆದ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳ ಕರೆಗಳು, ಆರೋಪಿಗಳು ಸೇರಿ 6,000 ಮೊಬೈಲ್ ಕರೆ ಪರಿಶೀಲನೆ ನಡೆಸಲಾಗುತ್ತಿದೆ.
ಇಡೀ ದೇಶಾದ್ಯಂತ ಸದ್ದು ಮಾಡಿದ ಶಿವಮೊಗ್ಗದ ಹಿಂದೂ ಕಾರ್ಯಕರ್ತನ ಹತ್ಯೆಯ ಆರೋಪಿಗಳನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೊತ್ತಿ ಉರಿದ ಶಿವಮೊಗ್ಗದ ಸ್ಥಿತಿ ತಿಳಿಯಾಗಿದೆ. ಆದ್ರೆ, ಯಾವಾಗ ಏನ್ ಬೇಕಾದ್ರೂ ಆಗಬಹುದು ಅನ್ನೋ ಆತಂಕ ಇದೆ. ಶಿವಮೊಗ್ಗದ ಬಡ ಟೈಲರ್‌ನ ಏಕೈಕ ಪುತ್ರನಾಗಿದ್ದ ಹರ್ಷ ಹಿಂದೂಕಾರ್ಯಕರ್ತ ಅಂತಾನೇ ಗುರುತಿಸಿಕೊಂಡಿದ್ದ. ಹೀಗೆ ಹಿಂದೂಸಂಘಟನೆಯಲ್ಲಿ ತೊಡಗಿದ್ದ ಹರ್ಷಾ, ಭಾನುವಾರ ರಾತ್ರಿ ಹಂತಕರ ಏಟಿಗೆ ಉಸಿರು ಚೆಲ್ಲಿದ್ದ. ಇದೇ ಸಾವು ಇಡೀ ಶಿವಮೊಗ್ಗ ಹೊತ್ತಿ ಉರಿಯುವಂತೆ ಮಾಡಿತ್ತು. ಅದ್ರಲ್ಲೂ ನಿನ್ನೆ ಅಂತಿಮಯಾತ್ರೆ ವೇಳೆ ಕಲ್ಲುತೂರಾಟವಾಯ್ತು, ಹಿಂಸಾಚಾರ ನಡೆದಿತ್ತು. ಇದ್ರ ನಡುವೆ ಹರ್ಷನ ಕೊಲೆ ಸಂಬಂಧ ಪೊಲೀಸರು ಆರು ಆರೋಪಿಗಳನ್ನ ಬಂಧಿಸಿದ್ದಾರೆ. ಇನ್ನು ಸುಮಾರು 6 ಸಾವಿರ ಮೊಬೈಲ್ ಕಾಲ್‌ಗಳ ಪರಿಶೀಲನೆ ನಡೆಸಲಾಗುತ್ತಿದೆ. ಹತ್ಯೆ ನಡೆದ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳ ಕರೆಗಳು, ಆರೋಪಿಗಳು ಸೇರಿ 6,000 ಮೊಬೈಲ್ ಕರೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಪ್ರಕರಣದ ಲೇಟೆಸ್ಟ್ ಅಪ್ಡೇಟ್ಸ್ಗಳು ಇಲ್ಲಿವೆ.
LIVE NEWS & UPDATES
-
ನ್ಯಾಯಾಲಯಕ್ಕೆ ಆರೋಪಿಗಳು ಹಾಜರು
ಬಜರಂಗದಳ ಕಾರ್ಯಕರ್ತರ ಹರ್ಷಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾದ ಜಿಲಾನ್ ಮತ್ತು ಫರಾತ್ ಅವರನ್ನು ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹರ್ಷ ಕೊಲೆ ಪ್ರಕರಣದ ತನಿಖೆಗೆಂದು ರಚಿಸಿರುವ ವಿಶೇಷ ತಂಡವು ಈವರೆಗೆ ಒಟ್ಟು 8 ಜನರನ್ನು ಬಂಧಿಸಿದೆ. ಎಲ್ಲ ಆರೋಪಿಗಳೂ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಆರೋಪಿಗಳಾದ ಖಾಸಿಫ್, ನದೀಂ, ರಿಹಾನ್, ಆಸೀಫ್, ಅಬ್ದುಲ್ ಅಫಾನ್, ನಿಹಾನ್ ಈಗ ಜೈಲಿನಲ್ಲಿದ್ದಾರೆ.
-
ಶಿವಮೊಗ್ಗ ನಗರಕ್ಕೆ ಆಗಮಿಸಿದ ಗೃಹಸಚಿವ ಆರಗ ಜ್ಞಾನೇಂದ್ರ
ಶಿವಮೊಗ್ಗದ ಸರ್ಕ್ಯೂಟ್ ಹೌಸ್ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹಸಚಿವ ಆರಗ ಜ್ಞಾನೇಂದ್ರ ಚರ್ಚೆ ಮಾಡುತ್ತಿದ್ದಾರೆ. ಶಿವಮೊಗ್ಗದ ಸದ್ಯದ ಸ್ಥಿತಿಗತಿಗಳ ಬಗ್ಗೆ ಚರ್ಚೆ ಗೃಹಸಚಿವರು ನಡೆಸುತ್ತಿದ್ದಾರೆ. ಪೊಲೀಸರೊಂದಿಗೆ ಚರ್ಚೆ ಬಳಿಕ ಮೃತ ಹರ್ಷ ನಿವಾಸಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.
-
ಮುಸ್ಕಾನ್ಗೆ ಸಿಕ್ಕಿದ್ದಕ್ಕಿಂತ 10 ಪಟ್ಟು ಹೆಚ್ಚು ಆರ್ಥಿಕ ನೆರವು ಹರ್ಷನಿಗೆ ಸಿಕ್ಕಿದೆ: ಪ್ರಮೋದ್ ಮುತಾಲಿಕ್
ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಘೋಷಣೆ ಕೂಗಿದ್ದ ಮುಸ್ಕಾನ್ಗೆ ಸಿಕ್ಕಿದ್ದು 5 ರಿಂದ 10 ಲಕ್ಷ, ಹರ್ಷಗೆ ಸಿಕ್ಕಿದ್ದ ನೆರವು 60 ರಿಂದ 70 ಲಕ್ಷ ರೂಪಾಯಿ. ಮುಸ್ಕಾನ್ಗೆ ಸಿಕ್ಕಿದ್ದಕ್ಕಿಂತ 10 ಪಟ್ಟು ಹೆಚ್ಚು ಆರ್ಥಿಕ ನೆರವು ಹರ್ಷನಿಗೆ ಸಿಕ್ಕಿದೆ. ಅಲ್ಲಾಹು ಅಕ್ಬರ್ ಬದಲು ಭಾರತ್ ಮಾತಾಕೀ ಜೈ ಎನ್ನಬಹುದಿತ್ತು ಎಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.
ಅಸ್ಥಿ ತರಲು ಹರ್ಷ ಮನೆಯವರಿಗೆ ಇಷ್ಟ ಇಲ್ಲ ಎಂದು ಹೇಳಿದ್ದರು: ರಿಷಿಕುಮಾರ್ ಸ್ವಾಮೀಜಿ
ಅಸ್ಥಿ ತರಲು ಹರ್ಷ ಮನೆಯವರಿಗೆ ಇಷ್ಟ ಇಲ್ಲ ಎಂದು ಹೇಳಿದ್ದರು. ಆದರೆ ನನಗೆ ಅಸ್ಥಿ ಹೇಗೆ ಸಿಕ್ಕಿತ್ತು. ಪೊಲೀಸನವರು ಬೆದರಿಸಿ ಅಸ್ಥಿ ಕೊಡದಂತೆ ಹೇಳಿದ್ದರು. ಈ ರೀತಿಯ ಕೆಲಸವನ್ನ ಪೊಲೀಸರು ಮಾಡುತ್ತಿದ್ದಾರೆ ಎಂದು ಮಂಡ್ಯದ ಶ್ರೀರಂಗಪಟ್ಟಣ ರಿಷಿಕುಮಾರ್ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಒಬ್ಬರಿಗೆ 10 ಜನರನ್ನು ಹೊಡೆಯುತ್ತೇವೆ: ರಿಷಿಕುಮಾರ್ ಸ್ವಾಮೀಜಿ
ಅವರು ನಮ್ಮ ಒಬ್ಬನನ್ನು ಕೊಂದಿದ್ದಾರೆ. ನಾವು ಅವರ ಹತ್ತು ಜನರನ್ನು ಹೊಡೆಯುತ್ತೇವೆ. ಗಡಿಯ ವಿಚಾರದಲ್ಲಿ ಪ್ರಧಾನಿ ಮೋದಿ ನಮ್ಮ ಸೈನಿಕರಿಗೆ ಹೇಳಿದ್ದರು. ಗಡಿಯ ಒಳಗಿನ ವಿಚಾರಕ್ಕೆ ನಾವು ಇದನ್ನು ಅನ್ವಯಿಸಿಕೊಳ್ಳುತ್ತಿದ್ದೇವೆ. ಒಬ್ಬರಿಗೆ 10 ಜನರನ್ನು ಹೊಡಯುತ್ತೇವೆ. ನಾವು ಯಾಕೆ ಹೊಡಯಬಾರದು. ಇನ್ನೊಂದು ಇಂತಹ ಪ್ರಕರಣ ನಡೆದರು ಹಿಂದೂ ಗೋಪುರ ಬಿಟ್ಟು. ಇನ್ಯಾವ ಗೋಪುರ ಇರುವುದಿಲ್ಲ. ನಮ್ಮ ಕಪಿ ಸೈನ್ಯ ಎಲ್ಲವನ್ನು ಬೀಳುಲಿಸುತ್ತವೆ ನೆನಪಿರಲಿ. ನಮ್ಮ ಬಳಿಯು ವಾನರ ಸೈನ್ಯ ಇದೆ. ಆ ಸೈನ್ಯ ಏನು ಮಾಡುತ್ತದೆ ನೋಡಿ ಎಂದು ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಮತ್ತೆ ರಿಷಿಕುಮಾರ್ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮುಸ್ಲಿಂರ ಮನೆ ಹಾಗೂ ಮಸೀದಿಗಳನ್ನು ಶೋಧ ಮಾಡಿ: ಪ್ರಮೋದ್ ಮುತಾಲಿಕ್
ಶವಯಾತ್ರೆ ಸಂದರ್ಭದಲ್ಲಿ ಹಸಿರು ಬಾವುಟವನ್ನು ಹಾರಿಸಿದ್ದರು. ನಮ್ಮನ್ನ ಪ್ರಚೋದನೆ ಮಾಡಿದ್ರು. ನೋವಿನ ಸಂಧರ್ಭದಲ್ಲಿ ಹಸಿರುವ ಬಾವುಟ, ಖಡ್ಗ ಜಳಪಿಸುತ್ತಾರೆ. ಇವರುಗಳು ನಮ್ಮವರನ್ನ ಪ್ರಚೋದನೆ ಮಾಡುತ್ತಾರೆ. ಮುಸ್ಲಿಂರ ಮನೆ ಹಾಗೂ ಮಸೀದಿಗಳನ್ನ ಶೋಧ ಮಾಡಿ. ಅಲ್ಲಿ ಖಡ್ಗ ಮಾರಕಾಸ್ತ್ರಗಳು ಸಿಗುತ್ತದೆ ಎಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ನೀವು ಮಚ್ಚು ಹಿಡಿದ್ರೆ ನಮಗೂ ಎರಡು ಕೈಗಳಿದೆ: ಪ್ರಮೋದ್ ಮುತಾಲಿಕ್
ದುಷ್ಟ ಶಕ್ತಿಗಳು ಹಿಂದೂಗಳ ಕಡೆ ನೋಡಿದರೆ ಅವರ ಕಣ್ಣು ಕಿತ್ತು ಬಿಸಾಕುವ ಶಕ್ತಿ ಹಿಂದೂಗಳಿಗಿದೆ. ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಿ ತುರ್ತಾಗಿ ಕೊಲೆಗಾರನ್ನ ಗಲ್ಲಿಗೇರಿಸಬೇಕು. ತ್ಯಾಗ ಬಲಿದಾನ ಮಾಡಿದ ನಮ್ಮ ಕಾರ್ಯಕರ್ತರು ಹತ್ಯೆಯನ್ನು ಯಾರು ಮರೆಯಬೇಡ. ರಕ್ತ ಕುದಿಯುತ್ತಿದೆ ಇದನ್ನ ಹಿಂದೂಗಳು ಮರೆಯಬಾರದು. ನೀವು ಶಿಕ್ಷೆ ಕೊಡ್ತಿರಿ ಇಲ್ಲ ನಾವು ಶಿಕ್ಷೆ ಕೊಡಬೇಕಾ. ಎಸ್ಡಿಪಿ, ಪಿಎಫ್ಐ ಸಂಘಟನೆಯನ್ನ ಹದ್ದುಬಸ್ತಿನಲ್ಲಿ ಇಡಬೇಕು. ಇಲ್ಲ ನಾವು ಹದ್ದುಬಸ್ತಿನಲ್ಲಿ ಇಡುತ್ತೇವೆ. ಇದು ಪಾಕಿಸ್ತಾನದ ಅಥವ ಅಫ್ಘಾನಿಸ್ತಾನ ಅಲ್ಲ. ಮಚ್ಚು ಹಿಡಿದುಕೊಂದು ಓಡಾಡಲು ಅಫ್ಘಾನಿಸ್ತಾನ ಅಲ್ಲ. ನೀವು ಮಚ್ಚು ಹಿಡಿದ್ರೆ ನಮಗೂ ಎರಡು ಕೈಗಳಿದೆ ಎಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.
ಕೊಲೆಗಡುಕರ ಸಾವಿನ ನಂತರವೇ ಹರ್ಷನಿಗೆ ಶಾಂತಿ ದೊರೆಯುತ್ತದೆ: ಪ್ರಮೋದ್ ಮುತಾಲಿಕ್
ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳುವುದಿಲ್ಲ. ಮೋಸದಿಂದ ಹರ್ಷ ಕೊಲೆ ಮಾಡಿದ್ದಾರೆ. ಕೊಲೆಗಡುಕರ ಸಾವಿನ ನಂತರವೆ ಹರ್ಷನಿಗೆ ಶಾಂತಿ ದೊರೆಯುತ್ತದೆ. ಒಬ್ಬ ದೇಶಭಕ್ತ, ರಾಷ್ಟ್ರೀಯವಾದಿ ತನ್ನ ಕೆಲಸ ಅರ್ಧಕ್ಕೆ ನಿಲ್ಲಿಸಿದ್ದಾನೆ ಎಂಬ ನೋವಿದೆ. 30 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಇಸ್ಲಾಮಿಕ್ ಶಕ್ತಿಗಳು ಬಲಿ ತೆಗೆದುಕೊಂಡಿವೆ. ಹಿಂದುತ್ವ ನಾಶ ಮಾಡಲು ಕೊಲೆ ಮಾಡಿದ್ದಾರೆ. ಆದ್ರೆ ನಾವು ಹಿಂದುತ್ವ ಕಾರ್ಯವನ್ನ ಪೂರ್ಣ ಮಾಡುತ್ತೇವೆ. ಈ ಮೂಲಕ ಹರ್ಷ ಅರ್ಧಕ್ಕೆ ನಿಲ್ಲಿಸಿದ ಕೆಲಸವನ್ನ ಮುಂದುವರೆಸುತ್ತೇವೆ ಎಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಹರ್ಷನ ಅಸ್ಥಿ ವಿಸರ್ಜನೆ ವೇಳೆ ಜೈ ಶ್ರೀರಾಮ್, ಹರ್ಷ ಅಮರ್ ರಹೇ ಘೋಷಣೆ
ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಪ್ರಮೋದ್ ಮುತಾಲಿಕ್ ಹಾಗೂ ಕಾಳಿಸ್ವಾಮಿ ಸದ್ಗತಿ ಕೋರಿ ಹರ್ಷ ಅಸ್ಥಿ ವಿಸರ್ಜನೆ ಮಾಡಿದ್ದಾರೆ. ಅಸ್ಥಿ ವಿಸರ್ಜನೆ ವೇಳೆ ಜೈ ಶ್ರೀರಾಮ್, ಹರ್ಷ ಅಮರ್ ರಹೇ ಘೋಷಣೆ ಕೂಗಲಾಗಿದೆ. ಪ್ರಧಾನ ಅರ್ಚಕ ಸಂದೀಪ್ ನೇತೃತ್ವದಲ್ಲಿ ನಡೆದಿದ್ದ ವಿಧಿವಿಧಾನ ನಡೆದಿದೆ. ಮೃತರ ಕುಟುಂಬಸ್ಥರಾಗಿ ಕುಳಿತು ಮುತಾಲಿಕ್ ಅಂತಿಮ ವಿಧಿ ವಿಧಾನ ನೆರವೇರಿಸಿದ್ದಾರೆ.
ಹರ್ಷನ ಕೊಲೆ ಮಾಡಿದವರಿಗೆ ಪೊಲೀಸರು ಗುಂಡು ಹಾರಿಸಬೇಕು: ಶಾಸಕ ಹರತಾಳ ಹಾಲಪ್ಪ
ಹರ್ಷ ಎಂಬ ಯುವಕನು ಹುತಾತ್ಮ ಆಗಿದ್ದಾನೆ. ಆತನ ಸಾವು ವ್ಯರ್ಥ ಆಗಬಾರದು. ಇನ್ನೂ ಇಂತಹ ಘಟನೆ ನಡೆಯದಂತೆ ಕಠಿಣ ಕ್ರಮ ಅಗತ್ಯ. ಹರ್ಷನ ಕೊಲೆ ಮಾಡಿದವರಿಗೆ ಪೊಲೀಸರು ಗುಂಡು ಹಾರಿಸಬೇಕು. ಕಾನೂನು ಇದೆ. ಬಂಧನ ಬಳಿಕ ಬೇಲ್ ಆಗುತ್ತದೆ. ಆದರೆ ಮತ್ತೆ ಶಿವಮೊಗ್ಗದಲ್ಲಿ ಇಂತಹ ಘಟನೆ ನಡೆದಂತೆ ಸರಕಾರ ಕ್ರಮ ವಹಿಸುತ್ತದೆ ಎಂದು ಹರ್ಷನ ಸಾವಿಗೆ ಹರತಾಳ ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ವಾಹಿನಿಯ ಅರಳಿ ಕಟ್ಟೆ ಬಳಿ ಅಸ್ಥಿ ವಿಸರ್ಜನಾ ಕಾರ್ಯ ಆರಂಭ
ಪ್ರಧಾನ ಅರ್ಚಕರಾದ ಸಂದೀಪ್ ನೇತೃತ್ವದಲ್ಲಿ ಅಸ್ಥಿ ವಿಸರ್ಜನೆ ಕಾರ್ಯ ಆರಂಭವಾಗಿದ್ದು, ಧುರುಮತಿ ನಾರಾಯಣ ಹೋಮ, ಅಸ್ಥಿ ಸಂಚಯನ, ವಿಸರ್ಜನೆ, ಪಂಚಾಮೃತ ಅಭಿಷೇಕ, ದಶದಾನ, ಪುಣ್ಯಃ ಸೇರಿದಂತೆ ಹಲವು ಪೂಜಾ ವಿಧಿ ವಿಧಾನ ನಡೆಯುತ್ತಿದೆ. ಕಾವೇರಿ ನದಿಗೆ ಅಸ್ಥಿ ವಿಸರ್ಜನೆ ಮೂಲಕ ಹರ್ಷ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸಲಾಗುತ್ತದೆ. ಸದ್ಗತಿ ಪೂಜಾ ಕಾರ್ಯದಲ್ಲಿ ಮುತಾಲಿಕ್ ಭಾಗಿಯಾಗಿದ್ದಾರೆ. ಪೂಜೆ ಮುಗಿದ ಬಳಿಕ ಕಾವೇರಿ ನದಿಯಲ್ಲಿ ಮುತಾಲಿಕ್ ಅಸ್ಥಿ ವಿಸರ್ಜನೆ ಮಾಡಲಿದ್ದಾರೆ.
ಹರ್ಷನ ಕೊಲೆ ಪೂರ್ವಯೋಜಿತ ಕೃತ್ಯ: ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್
ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷನನ್ನು ಏಕಾಏಕಿ ಹತ್ಯೆಮಾಡಿಲ್ಲ. ಇದೊಂದು ಪೂರ್ವಯೋಜಿತ ಕೃತ್ಯ. ಕಾಂಗ್ರೆಸ್ನ 15 ನಾಯಕರು ದೆಹಲಿಗೆ ಹೋಗಿದ್ದಾರೆ. ಹರ್ಷನ ಮನೆಗೆ ಹೋಗಲು ಇವರಿಗೆ ಸಮಯವಿಲ್ಲ ಎಂದು ರಾಜ್ಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.
ಪಶ್ವಿಮ ವಾಹಿನಿಗೆ ಅಸ್ಥಿ ವಿಸರ್ಜನೆ ಮಾಡಲು ಆಗಮಿಸಿದ ಪ್ರಮೋದ್ ಮುತಾಲಿಕ್
ಹತ್ಯೆಯಾದ ಬಜರಂಗ ದಳದ ಕಾರ್ಯಕರ್ತ ಹರ್ಷನ ಅಸ್ಥಿ ವಿಸರ್ಜನೆ ಮಾಡಲು ಪ್ರಮೋದ್ ಮುತಾಲಿಕ್ ಆಗಮಿಸಿದ್ದಾರೆ. ಮಂಡ್ಯದ ಪಶ್ವಿಮ ವಾಹಿನಿಗೆ ಆಗಮಿಸಿದ್ದಾರೆ.
ಹತ್ಯೆಯಾದ ಹರ್ಷನ ಮನೆಗೆ ಬಿಜೆಪಿ ಹಾಗೂ ಹಿಂದೂ ಮುಖಂಡರು ಭೇಟಿ
ಪೋಸ್ಟ್ ಕಾರ್ಡ್ ಮಹೇಶ್ ವಿಕ್ರಂ ಹೆಗ್ಡೆ, ಬಿಬಿಎಂಪಿ ಕಾರ್ಪೋರೇಟರ್ ವೇಲು ನಾಯಕ್, ಎಂಎಲ್‌ಸಿ ಅರುಣ್ ಮೂಡುಬಿದ್ರೆ, ಶಾಸಕ ಉಮಾನಾಥ್ ಕೋಟ್ಯಾನ್ ಹತ್ಯೆಯಾದ ಹರ್ಷನ ಮನೆಗೆ ಭೇಟಿ ನೀಡಿದ್ದಾರೆ. ಶಿವಮೊಗ್ಗದ ಸೀಗೆಹಟ್ಟಿಯಲ್ಲಿರುವ ಹರ್ಷ ನಿವಾಸಕ್ಕೆ ಭೇಟಿ ನೀಡಿ, ಹರ್ಷನ ಕುಟುಂಭಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಶಿವಮೊಗ್ಗದಲ್ಲಿ ಹರ್ಷ ಹತ್ಯೆ ಬಳಿಕ ಬೆದರಿಕೆ ಆಡಿಯೋಗಳು ವೈರಲ್
ಹಿಂದೂ ಕಾರ್ಯಕರ್ತರ ಹತ್ಯೆಗೆ ಟಾರ್ಗೆಟ್ ಮಾಡಿ ಬೆದರಿಕೆ ಹಾಕಿದ ಆಡಿಯೋಗಳು ವೈರಲ್ ಆಗುತ್ತಿವೆ. ಹಿಂದೂ ಕಾರ್ಯಕರ್ತರಿಗೆ ಕಿಡಿಗೇಡಿಗಳು ನಿರಂತರ ಬೆದರಿಕೆ ಹಾಕುತ್ತಿದ್ದಾರೆ. ಅಜ್ಜಾತ ಸ್ಥಳದಲ್ಲಿ ಕೂತು ಕಿಡಿಗೇಡಿಗಳು ಬೆದರಿಕೆ ಹಾಕುತ್ತಿದ್ದಾರೆ. ಒಂದೇ ತಿಂಗಳಲ್ಲಿ ಹೆಣ ಬೀಳಲಿಲ್ಲ ಅಂದ್ರೆ ನೋಡು ಎಂದು ಪುನೀತ್ ಕೆರೆಹಳ್ಳಿ, ಭರತ್ ಶೆಟ್ಟಿ ಸೇರಿ ಹಲವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಇಂಟರ್ನೆಟ್ ಕಾಲ್ ಮುಖಾಂತರ ಹಿಂದೂ ಮುಖಂಡರಿಗೆ ಧಮ್ಕಿ ಹಾಕಲಾಗಿದೆ.
ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 8 ಜನರನ್ನು ಬಂಧಿಸಿದ್ದೇವೆ: ಎಸ್ಪಿ ಲಕ್ಷ್ಮಿ ಪ್ರಸಾದ್
ಹರ್ಷ ಕೊಲೆ ಪ್ರಕರಣದ ತನಿಖೆ ಮುಂದುವರೆದಿದೆ. ಈಗಾಗಲೇ ಪ್ರಕರಣದಲ್ಲಿ 8 ಜನರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಎಂಟು ಜನರ ಪಾತ್ರ ಏನಿದೆ ಎನ್ನುವುದರ ಕುರಿತು ಮೊದಲು ತನಿಖೆ ಮಾಡಲಾಗುತ್ತದೆ. ಹರ್ಷನ ಮೊಬೈಲ್ ಇನ್ನೂ ಪತ್ತೆ ಆಗಿಲ್ಲ. ಹರ್ಷ ಸ್ನೇಹಿತ ಯವತಿಯರ ವಿಡಿಯೋ ಕಾಲ್ ವಿಚಾರದ ಕುರಿತು ಮಾಹಿತಿ ಕಲೆ ಹಾಕಲಾಗುತ್ತದೆ. ಇನ್ನೂ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕೊಲೆ ಪ್ರಕರಣದಲ್ಲಿ ಮತ್ತೆ ಯಾರೆಲ್ಲ ಭಾಗಿ ಆಗಿದ್ದಾರೆ. ಈ ಕುರಿತು ಕೂಡಾ ತನಿಖೆ ಚುರುಕುಗೊಂಡಿದೆ ಎಂದು ಶಿವಮೊಗ್ಗ ಎಸ್ಪಿ ಲಕ್ಷ್ಮಿ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಇಂದು ಶ್ರೀರಂಗಪಟ್ಟಣದಲ್ಲಿ ಬಜರಂಗ ಕಾರ್ಯಕರ್ತ ಮೃತ ಹರ್ಷ ಅಸ್ಥಿ ವಿಸರ್ಜನೆ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಇಂದು ಬಜರಂಗ ಕಾರ್ಯಕರ್ತ ಮೃತ ಹರ್ಷ ಅಸ್ಥಿ ವಿಸರ್ಜನೆ ಮಾಡಲಾಗುತ್ತದೆ. ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಅಸ್ಥಿ ವಿಸರ್ಜನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಶ್ಚಿಮ ವಾಹಿನಿಗೆ ಹರ್ಷನ ಅಸ್ಥಿ ತೆಗೆದುಕೊಂಡು ಕಾಳಿ ಮಠದ ರಿಷಿಕುಮಾರ್ ಸ್ವಾಮೀಜಿ ಆಗಮಿಸಿದ್ದಾರೆ. ಅರ್ಚಕ ಸಂದೀಪ್ ನೇತೃತ್ವದಲ್ಲಿ ಅಸ್ಥಿ ವಿಸರ್ಜನೆ ನಡೆಯುತ್ತಿದೆ.
ಮೃತ ಹರ್ಷ ಕುಟುಂಬಕ್ಕೆ 1 ಲಕ್ಷ ರೂ. ವೈಯಕ್ತಿಕ ಪರಿಹಾರ ನೀಡಲು ಶಾಸಕ ನಾಗೇಂದ್ರ ನಿರ್ಧಾರ
ಹಿಂದೂ ಕಾರ್ಯಕರ್ತ ಮೃತ ಹರ್ಷ ಕುಟುಂಬಕ್ಕೆ 1 ಲಕ್ಷ ರೂಪಾಯಿ ವೈಯಕ್ತಿಕ ಪರಿಹಾರ ನೀಡಲು ಶಾಸಕ ನಾಗೇಂದ್ರ ನಿರ್ಧಾರ ಮಾಡಿದ್ದಾರೆ. 1 ಲಕ್ಷ ವೈಯಕ್ತಿಕ ಪರಿಹಾರ ನೀಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಟಿವಿ9ಗೆ ಮಾಹಿತಿ ನೀಡಿದ ಬಿಜೆಪಿ ಶಾಸಕ ಎಲ್. ನಾಗೇಂದ್ರ, ಸದ್ಯದಲ್ಲೇ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದೇನೆ. ಕಾರ್ಯಕರ್ತರು ಸಹ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಸಭೆ ನಡೆಸಿ ಕಾರ್ಯಕರ್ತರು ನೀಡುವುದನ್ನು ಕುಟುಂಬಸ್ಥರಿಗೆ ತಲುಪಿಸಲಾಗುವುದು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಈಗ ಪರಿಸ್ಥಿತಿ ಸಂಪೂರ್ಣ ಶಾಂತವಾಗಿದೆ: ಸಚಿವ ಆರಗ ಜ್ಞಾನೇಂದ್ರ
ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಈಗ ಪರಿಸ್ಥಿತಿ ಸಂಪೂರ್ಣ ಶಾಂತವಾಗಿದೆ. ಬಂಧಿತ ಆರೋಪಿಗಳ ಹಿನ್ನೆಲೆ ಬಗ್ಗೆ ತನಿಖೆ ಮುಂದುವರಿದಿದೆ. ಸಂಘಟನೆಗಳ ಜತೆ ಗುರುತಿಸಿಕೊಂಡಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಪ್ರಚೋದನಕಾರಿ ಹೇಳಿಕೆ ಪ್ರಚಾರ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಗತ್ಯ ಬಿದ್ದರೆ ಬಂಧಿಸುವ ನಿಟ್ಟಿನಲ್ಲಿ ಕೂಡ ಕ್ರಮ ಕೈಗೊಳ್ತೇವೆ ಎಂದು ತಿಳಿಸಿದ್ದಾರೆ.
ಗಾಯಗೊಂಡವರ ಆರೋಗ್ಯ ವಿಚಾರಿಸಿದ ಹರ್ಷ ಕುಟುಂಬ
ಮೃತ ಹರ್ಷ ಕುಟುಂಬ ಸದಸ್ಯರು, ಫೆ 21 ರಂದು ಹರ್ಷ ಶವಯಾತ್ರೆ ಮೆರವಣಿಗೆ ವೇಳೆ ಗಾಯಗೊಂಡವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ. ತಂದೆ, ತಾಯಿ ಮತ್ತು ಸಹೋದರಿಯರು ಗಾಯಾಳುಗಳನ್ನು ಭೇಟಿ ಮಾಡಿದ್ದಾರೆ.
5 ಲಕ್ಷ ಪರಿಹಾರ ನೀಡಿದ ಬಸವನಗೌಡ ಪಾಟೀಲ್ ಯತ್ನಾಳ್
ಸಿದ್ದಸಿರಿ ಸೌಹಾರ್ದ ಸಹಕಾರ ಸಂಸ್ಥೆಯಿಂದ ಹರ್ಷ ಮನೆಗೆ ಭೇಟಿ ನೀಡಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ 5 ಲಕ್ಷ ರೂಪಾಯಿ ಆರ್ಥಿಕ ಸಹಾಯ ಮಾಡಿದ್ದಾರೆ.
ಸರ್ಕಾರದ ಕ್ರಮ ಸಾಲದು ಆರೋಪಿಗಳನ್ನು ಗಲ್ಲಿಗೆ ಏರಿಸಬೇಕು -ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರದ ಕ್ರಮ ಸಾಲದು ಆರೋಪಿಗಳನ್ನು ಗಲ್ಲಿಗೆ ಏರಿಸಬೇಕು ಎಂದು ಶಿವಮೊಗ್ಗದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಹಿಂದೂಗಳ ಆತ್ಮಸ್ಥೈರ್ಯ ಕುಗ್ಗಿಸಲು ಇಂತಹ ಕೃತ್ಯ ನಡೆಸಲಾಗುತ್ತಿದೆ. ಒಂದು ದೊಡ್ಡ ಷಡ್ಯಂತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿದೆ. ಇವರು ಸ್ವಂತ ಶೂರರಲ್ಲ ಹೆಣ್ಣು ಮಕ್ಕಳ ಮುಂದಿಟ್ಟುಕೊಂಡು ಕೃತ್ಯ ನಡೆಸುತ್ತಿದ್ದಾರೆ. ನಮ್ಮ ದೇಶ, ಹಿಂದೂ ಸಮಾಜದ ಭವಿಷ್ಯದ ಬಗ್ಗೆ ಪ್ರಶ್ನೆ ಮೂಡಿದೆ. ಕಾಂಗ್ರೆಸ್ ಪಕ್ಷ ಇದ್ದಾಗ ಇಂತಹ ಕೃತ್ಯಕ್ಕೆ ಶಿಕ್ಷೆ ಆಗಿಲ್ಲ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕೇರಳದ ಗಡಿ ಭಾಗದಿಂದ ಶಸ್ತ್ರಾಸ್ತ್ರ ಪೂರೈಕೆಯಾಗುತ್ತಿದೆ. ಮಕ್ಕಳನ್ನು ಬಳಸಿಕೊಂಡು ಇಂತಹ ಕೃತ್ಯ ಮಾಡಲಾಗುತ್ತಿದೆ. ಹತ್ಯೆಯಾದರೂ ಒಬ್ಬ ಕಾಂಗ್ರೆಸ್ ನಾಯಕರು ಬಂದರಾ? ಮುಸ್ಲಿಂ ಆಗಿದ್ದರೆ ಸೋನಿಯಾ, ರಾಹುಲ್ ಬರುತ್ತಿದ್ದರು ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಶಾಸಕ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಗಲಭೆಯಲ್ಲಿ ಗಾಯಗೊಂಡವರಿಗೆ ಆರ್ಥಿಕ ಸಹಾಯ ಮಾಡಲು ಮುಂದಾದ ಹರ್ಷ ಕುಟುಂಬ
ಗಲಭೆಯಲ್ಲಿ ಹಿಂದೂ ಕಾರ್ಯಕರ್ತರ ಗಾಯಾಳುಗಳಿಗೆ ಆರ್ಥಿಕ ಸಹಾಯ ಮಾಡಲಾಗಿದೆ. ಹರ್ಷ ಅಂತಿಮ ಯಾತ್ರೆಯ ಸಂದರ್ಭದಲ್ಲಿ ಹಲವರು ಗಾಯಗೊಂಡಿದ್ದರು. ಸದ್ಯ ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಿಗೆ ಆರ್ಥಿಕ ಸಹಾಯ ನೀಡಲು ಹರ್ಷ ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.
ಹರ್ಷ ಕುಟುಂಬಕ್ಕೆ 50 ಸಾವಿರ ಚೆಕ್ ನೀಡಿದ ಉತ್ತರಾಧಿ ಮಠ
ಹಿಂದೂ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ಉತ್ತರಾಧಿ ಮಠದಿಂದ ಆರ್ಥಿಕ ಸಹಾಯ ಮಾಡಲಾಗಿದೆ. ಉತ್ತರಾಧಿ ಮಠದ ಅಡಳಿತ ಮಂಡಳಿ 50 ಸಾವಿರ ಚೆಕ್ ನೀಡಿ ಹರ್ಷ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.
ಎಲ್ಲ ಹಂತ, ಆಯಾಮದಲ್ಲೂ ತನಿಖೆ ಮಾಡಲಾಗುತ್ತಿದೆ -ಗೃಹಸಚಿವ ಆರಗ ಜ್ಞಾನೇಂದ್ರ
ಸಿಎಂ ಜೊತೆ ಶಿವಮೊಗ್ಗ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದೇನೆ. ವಿಚಾರಣೆ ಹಂತದಲ್ಲಿರುವ ಹಿನ್ನೆಲೆ ಮಾಹಿತಿ ನೀಡಲಾಗಲ್ಲ. ಎಲ್ಲ ಹಂತ, ಆಯಾಮದಲ್ಲೂ ತನಿಖೆ ಮಾಡಲಾಗುತ್ತಿದೆ. ಸದ್ಯಕ್ಕೆ ಬೇರೆ ಸಂಸ್ಥೆಗಳಿಗೆ ನೀಡುವ ಯೋಜನೆ ಇಲ್ಲ ಎಂದು ಬೆಂಗಳೂರಿನಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಹರ್ಷ ಮನೆಗೆ ಭೇಟಿ ನೀಡಿದ ಯತ್ನಾಳ್, ಈಶ್ವರಪ್ಪ
ಶಿವಮೊಗ್ಗದ ಸೀಗೆಹಟ್ಟಿ ಬಡಾವಣೆಯಲ್ಲಿರುವ ಹರ್ಷ ನಿವಾಸಕ್ಕೆ ಸಚಿವ ಈಶ್ವರಪ್ಪ, ಶಾಸಕ ಯತ್ನಾಳ್ ಭೇಟಿ ನೀಡಿದ್ದಾರೆ.
ಶಿವಮೊಗ್ಗ ಯುವಕನ ಹತ್ಯೆ ಪ್ರಕರಣದ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿದ ಆರಗ ಜ್ಞಾನೇಂದ್ರ
ಬೆಂಗಳೂರಿನ ಆರ್.ಟಿ.ನಗರದಲ್ಲಿನ ಸಿಎಂ ನಿವಾಸದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿದ್ದಾರೆ. ಶಿವಮೊಗ್ಗ ಯುವಕನ ಹತ್ಯೆ ಪ್ರಕರಣದ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿದ್ದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಶಿವಮೊಗ್ಗಕ್ಕೆ ತೆರಳುತ್ತಿದ್ದಾರೆ.
ಆರೋಪಿಗಳು ಸೇರಿ 6,000 ಮೊಬೈಲ್ ಕರೆ ಪರಿಶೀಲನೆ ನಡೆಸುತ್ತಿರುವ ಪೊಲೀಸರು
ಹಂತಕರ ಪತ್ತೆಗೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸುತ್ತಿದ್ದು ಸುಮಾರು 6 ಸಾವಿರ ಮೊಬೈಲ್ ಕಾಲ್‌ಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಹತ್ಯೆ ನಡೆದ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳ ಕರೆಗಳು, ಆರೋಪಿಗಳು ಸೇರಿ 6,000 ಮೊಬೈಲ್ ಕರೆ ಪರಿಶೀಲನೆ ನಡೆಸುತ್ತಿದ್ದಾರೆ.
ಆರೋಪಿಗಳನ್ನು ಇಂದು ಪೊಲೀಸರು ಕಸ್ಟಡಿಗೆ ಪಡೆಯುವ ಸಾಧ್ಯತೆ
ನಿನ್ನೆ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದ್ದು ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ಇಂದು ಪೊಲೀಸರು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಕೊಲೆ ತನಿಖೆ, ಸ್ಥಳದ ಮಹಜರು, ಮಾರಕಾಸ್ತ್ರ ಜಪ್ತಿ ಮುಂತಾದ ಪ್ರಕ್ರಿಯೆ ನಡೆಯಲಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಿಪಿಐ ಗುರುರಾಜ್ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ.
ಶಿವಮೊಗ್ಗ ಸಿಟಿಯಲ್ಲಿ ಆರು ಡ್ರೋನ್ ಕ್ಯಾಮೆರಾ ಹಾರಾಟ
ಶಿವಮೊಗ್ಗ ಸಿಟಿಯಲ್ಲಿ ಒಟ್ಟು ಆರು ಡ್ರೋನ್ ಕ್ಯಾಮೆರಾ ಹಾರಾಟ ಮಾಡುತ್ತಿದೆ ಎಂದು ನಕ್ಸಲ್ ನಿಗ್ರಹ ದಳದ ಸಿಬ್ಬಂದಿ ಮೇಘುಲಾಲ್ ಚೌಹಾಣ್ ತಿಳಿಸಿದ್ದಾರೆ. 500 ಮೀಟರ್ ಎತ್ತರ 5 ಕಿಲೋಮೀಟರ್ ಸುತ್ತಳತೆಯಲ್ಲಿ ಒಂದೊಂದು ಡ್ರೋನ್ ಹಾರಾಟ ಮಾಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಮೊಬೈಲ್‌ನಲ್ಲಿ ಮಗ ಹರ್ಷನ ಫೋಟೋಗಳು, ನೆನಪು ಇದೆ; ಮೊಬೈಲ್ ಹುಡುಕಿಕೊಡುವಂತೆ ಪೋಷಕರ ಮನವಿ
ಮೃತ ಹರ್ಷನ ಮೊಬೈಲ್ ಫೋನ್ ಸಿಕ್ಕಿರುವ ಬಗ್ಗೆ ಮಾಹಿತಿ ಇದೆ. ಆದ್ರೆ ಮೊಬೈಲ್ ಸಿಕ್ಕಿರುವುದನ್ನ ಪೊಲೀಸರು ಖಚಿತಪಡಿಸಿಲ್ಲ. ಸದ್ಯ ಮೊಬೈಲ್‌ನಲ್ಲಿ ಮಗ ಹರ್ಷನ ಫೋಟೋಗಳು, ನೆನಪು ಇದೆ. ಹೀಗಾಗಿ ಮೊಬೈಲ್ ಹುಡುಕಿಕೊಡುವಂತೆ ಪೋಷಕರು ಮನವಿ ಮಾಡಿಕೊಂಡಿದ್ದಾರೆ. ಪೊಲೀಸರ ತನಿಖೆಗೂ ಮೊಬೈಲ್‌ನಿಂದ ಸಾಕ್ಷ್ಯ ಸಿಗುವ ಸಾಧ್ಯತೆ ಇದೆ. ವಾಟ್ಸಾಪ್ ಕಾಲ್, ವಿಡಿಯೋ ಕಾಲ್‌ಗಳ ಬಗ್ಗೆ ಮಾಹಿತಿ ಸಿಗಲಿದೆ. ಅನುಮಾನಾಸ್ಪದ ವ್ಯಕ್ತಿಗಳ ಫೋಟೋ, ವಿಡಿಯೋ ಇರುವ ಸಾಧ್ಯತೆ ಇದೆ.
ಶಿವಮೊಗ್ಗದಲ್ಲಿ ವ್ಯಾಪಾರ ವಹಿವಾಟು ಬಂದ್ ಮುಂದುವರಿಕೆ
ಶಿವಮೊಗ್ಗದಲ್ಲಿ ವ್ಯಾಪಾರ ವಹಿವಾಟು ಬಂದ್ ಮುಂದುವರಿಕೆ. ಹಾಲು, ದಿನಸಿ, ತರಕಾರಿ ಖರೀದಿಗೆ 2 ಗಂಟೆಯಷ್ಟೇ ಅವಕಾಶ ನೀಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಮಾತ್ರ ಅನುಮತಿ ನೀಡಿದ್ದು ಫೆಬ್ರವರಿ 26ರ ಬೆಳಗ್ಗೆ 9 ಗಂಟೆವರೆಗೂ ಈ ನಿಯಮ ಅನ್ವಯವಾಗಲಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿಯಿಂದ ಆದೇಶ ನೀಡಿದ್ದಾರೆ. ಶಿವಮೊಗ್ಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಗರ ವ್ಯಾಪ್ತಿಯೊಳಗೆ ಬರುವ ಎಲ್ಲ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಱಲಿ, ಸಭೆ, ಸಮಾರಂಭ, ವಿಜಯೋತ್ಸವ, ಧರಣಿಗೆ ಬ್ರೇಕ್ ಹಾಕಲಾಗಿದ್ದು ಶಸ್ತ್ರಾಸ್ತ್ರಗಳು, ದೊಣ್ಣೆ, ಕತ್ತಿ, ಈಟಿ, ಕಲ್ಲು, ಇಟ್ಟಿಗೆ, ಚಾಕು, ಬಂದೂಕು ಕೊಂಡೊಯ್ಯುವುದು, ಸಂಗ್ರಹಣೆಗೆ ನಿರ್ಬಂಧಿಸಲಾಗಿದೆ.
ಮೂರು ತಂಡಗಳ ಹದಿನೈದು ಜನರ ಮೇಲೆ ಪೊಲೀಸರ ಹದ್ದಿನ ಕಣ್ಣು
ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ ಸಂಬಂಧ ಮೂರು ತಂಡಗಳ ಹದಿನೈದು ಜನರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಶಿವಮೊಗ್ಗ ಜೈಲಿನಲ್ಲಿರುವ ಸಾಥು ಮೇಲೂ ಅನುಮಾನ ವ್ಯಕ್ತವಾಗಿದೆ. ಜೈಲಿನಿಂದಲೇ ಗಲಭೆಗಳನ್ನು ಮಾಡಿಸುತ್ತಿರುವ ಬಗ್ಗೆ ಗುಮಾನಿ ಎದ್ದಿದೆ. ಹರ್ಷ ಹತ್ಯೆಯ ಮಾಸ್ಟರ್‌ಮೈಂಡ್ ಇನ್ನೂ ಬಂಧನವಾಗಿಲ್ಲ. ಸಾಥು 2001ರಲ್ಲಿ ಹಿಂದುತ್ವವಾದಿ ಗೋಕುಲ್‌ನನ್ನ ಹತ್ಯೆಗೈದಿದ್ದ. ಆರೋಪಿ ಕಾಶಿಫ್, ಸಾಥುಗೆ ಯಾವುದೇ ಸಂಬಂಧವಿಲ್ಲ. ಆದರೆ ಇವರಿಗೆ ಫಂಡಿಂಗ್ ಆಗಿರುವ ಬಗ್ಗೆ ಪೊಲೀಸರ ಅನುಮಾನ.
Published On - Feb 24,2022 9:51 AM