ಬೆಂಗಳೂರು, ಸೆಪ್ಟೆಂಬರ್ 24: ಶಿವಮೊಗ್ಗದಿಂದ ಚೆನ್ನೈ ಮತ್ತು ಹೈದರಾಬಾದ್‌ಗೆ ಸಂಪರ್ಕ ಕಲ್ಪಿಸುವ ಎರಡು ಹೊಸ ನೇರ ವಿಮಾನ ಸೇವೆಯನ್ನು ಸ್ಪೈಸ್‌ಜೆಟ್ ಪರಿಚಯಿಸಲಿದ್ದು, ಅಕ್ಟೋಬರ್ 10 ರಿಂದ ಆರಂಭವಾಗಲಿವೆ. ವಿಮಾನಾಯನ ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಬುಕ್ಕಿಂಗ್ ಆರಂಭಿಸಲಾಗಿದೆ.
ಈ ಬಗ್ಗೆ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಕೂಡ ಎಕ್ಸ್ ಸಂದೇಶದ ಮೂಲಕ ಮಾಹಿತಿ ನೀಡಿದ್ದು, ವಿಮಾನ ಆಗಮನ, ನಿರ್ಗಮನ ಸಮಯ ಮತ್ತಿತರ ವಿವರಗಳನ್ನು ನೀಡಿದ್ದಾರೆ.
‘‘ಶಿವಮೊಗ್ಗಕ್ಕೆ ಮತ್ತೊಂದು ಮಹತ್ವದ ಸುದ್ದಿ! ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಯು ಶಿವಮೊಗ್ಗದಿಂದ ಎರಡು ಹೊಸ ವಿಮಾನ ಮಾರ್ಗಗಳನ್ನು ಸೇವೆಗೆ ಸೇರಿಸಲಿದೆ! ಅಕ್ಟೋಬರ್ 10ರಿಂದ ಪ್ರಾರಂಭವಾಗುವಂತೆ ಚೆನ್ನೈ ಮತ್ತು ಹೈದರಾಬಾದ್‌ಗೆ ನೇರ ವಿಮಾನಯಾನ ಸೇವೆ ದೊರೆಯಲಿದೆ’’ ಎಂದು ರಾಘವೇಂದ್ರ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
One more great news for Shivamogga!
SpiceJet will be adding two new flight routes from Shivamogga! Starting from October 10th, 2024, @flyspicejet will operate direct flights to Chennai and Hyderabad.
✈️ Flight from Chennai will depart at 10:40 AM and arrive at Shivamogga… pic.twitter.com/yE2H1r5f4s
— B Y Raghavendra (@BYRBJP) September 22, 2024
ಸ್ಪೈಸ್‌ಜೆಟ್ ವಿಮಾನ ಚೆನ್ನೈನಿಂದ ಪ್ರತಿದಿನ ಬೆಳಿಗ್ಗೆ 10.40 ಕ್ಕೆ ಹೊರಟು ಮಧ್ಯಾಹ್ನ 12.10 ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಶಿವಮೊಗ್ಗದಿಂದ ಹೈದರಾಬಾದ್‌ಗೆ ತೆರಳುವ ವಿಮಾನಗಳು ಮಧ್ಯಾಹ್ನ 12.35 ಕ್ಕೆ ಹೊರಡಲಿದ್ದು, 2.05 ಕ್ಕೆ ಹೈದರಾಬಾದ್ ತಲುಪಲಿವೆ.
ಹೈದರಾಬಾದ್‌ನಿಂದ ಹಿಂತಿರುಗುವ ವಿಮಾನ ಮಧ್ಯಾಹ್ನ 2.40 ಕ್ಕೆ ಹೊರಡಲಿದ್ದು, ಸಂಜೆ 4.10 ಕ್ಕೆ ಶಿವಮೊಗ್ಗ ತಲುಪಲಿದೆ. ಚೆನ್ನೈಗೆ ತೆರಳುವ ವಿಮಾನ ಶಿವಮೊಗ್ಗದಿಂದ ಸಂಜೆ 4.25ಕ್ಕೆ ಹೊರಟು 5.55ಕ್ಕೆ ಚೆನ್ನೈ ತಲುಪಲಿದೆ.
ಇದನ್ನೂ ಓದಿ: ಶಿವಮೊಗ್ಗ: ಹಣಗೆರೆಕಟ್ಟೆಯಲ್ಲಿ ಪ್ಯಾಲೆಸ್ತೀನ್ ಪರ ಪ್ಲೆಕ್ಸ್, ಕ್ರಮಕ್ಕೆ ಮಾಜಿ ಗೃಹ ಸಚಿವ ಆಗ್ರಹ
ಈ ಹೊಸ ವಿಮಾನ ಸೇವೆ ಶಿವಮೊಗ್ಗದ ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ಉತ್ತೇಜನವನ್ನು ನೀಡುತ್ತದೆ ಮತ್ತು ಸಂಪರ್ಕವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಸಂಸದ ಬಿವೈ ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿವಮೊಗ್ಗಕ್ಕೆ ಸೇವೆಗಳನ್ನು ವಿಸ್ತರಿಸಿದ್ದಕ್ಕಾಗಿ ಅವರು ಸ್ಪೈಸ್‌ಜೆಟ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ