ಶಿವಮೊಗ್ಗ: ಹಣಗೆರೆಕಟ್ಟೆಯಲ್ಲಿ ಪ್ಯಾಲೆಸ್ತೀನ್ ಪರ ಪ್ಲೆಕ್ಸ್, ಕ್ರಮಕ್ಕೆ ಮಾಜಿ ಗೃಹ ಸಚಿವ ಆಗ್ರಹ

ಈದ್ ಮಿಲಾದ್ ಹಬ್ಬ ಹಿನ್ನೆಲೆ ಹಣಗೆರೆ ಕಟ್ಟೆಯ ದರ್ಗಾದ ಬಳಿ ಫ್ಲೆಕ್ಸ್ ಅಳವಡಿಸಲಾಗಿತ್ತು. ಪ್ಯಾಲೆಸ್ತೀನ್ ಪರ ಪ್ಲೆಕ್ಸ್ ಹಾಕಿದ್ದಕ್ಕೆ ಹಿಂದು ಸಂಘಟನೆಗಳು ಆಕ್ರೋಶ ಹೊರ ಹಾಕಿವೆ. ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಆಕ್ರೋಶ ವ್ಯಕ್ತಪಡಿಸಿದ್ದು ಕಿಡಿಗೇಡಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಶಿವಮೊಗ್ಗ: ಹಣಗೆರೆಕಟ್ಟೆಯಲ್ಲಿ ಪ್ಯಾಲೆಸ್ತೀನ್ ಪರ ಪ್ಲೆಕ್ಸ್, ಕ್ರಮಕ್ಕೆ ಮಾಜಿ ಗೃಹ ಸಚಿವ ಆಗ್ರಹ
ಹಣಗೆರೆಕಟ್ಟೆಯಲ್ಲಿ ಪ್ಯಾಲೆಸ್ತೀನ್ ಪರ ಪ್ಲೆಕ್ಸ್, ಕ್ರಮಕ್ಕೆ ಆರಗ ಆಗ್ರಹ
Follow us
| Updated By: ಆಯೇಷಾ ಬಾನು

Updated on: Sep 18, 2024 | 9:33 AM

ಶಿವಮೊಗ್ಗ, ಸೆ.18: ಹಿಂದೂ ಮತ್ತು ಮುಸ್ಲೀಮರ ಧಾರ್ಮಿಕ ಸ್ಥಳವಾಗಿರುವ ಹಣಗೆರೆಕಟ್ಟೆಯಲ್ಲಿ ಪ್ಯಾಲೆಸ್ತೀನ್ (Palestine) ಪರವಾಗಿ ಹಾಕಿರುವ ಪ್ಲೆಕ್ಸ್ ಈಗ ವಿವಾದಕ್ಕೆ ಕಾರಣವಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯಲ್ಲಿ ನಿನ್ನೆ ಪ್ಯಾಲೆಸ್ತೀನ್ ಪರವಾದ ಪ್ಲೇಕ್ಸ್ ಕಟ್ಟಲಾಗಿತ್ತು. ಇದಕ್ಕೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Argha Gnanendra) ಅವರು ಆಕ್ರೋಶ ವ್ಯಕ್ತಪಡಿಸಿದ್ದು ಕಿಡಿಗೇಡಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ಶಿವಮೊಗ್ಗ ಎಸ್ಪಿಯವರಿಗೆ ಪತ್ರ ಬರೆದಿದ್ದಾರೆ. ಸದ್ಯ ಮುಂಜಾಗ್ರತ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.

ಮೊನ್ನೆ ಈದ್ ಮಿಲಾದ್ ಹಬ್ಬ ಹಿನ್ನೆಲೆ ಹಣಗೆರೆ ಕಟ್ಟೆಯ ದರ್ಗಾದ ಬಳಿ ಫ್ಲೆಕ್ಸ್ ಅಳವಡಿಸಲಾಗಿತ್ತು. ಆದರೆ ಹಬ್ಬದ ಸಂಬಂಧ ಹೊರತುಪಡಿಸಿ ವಿ ಸ್ಟ್ಯಾಂಡ್ ವಿತ್ ಪ್ಯಾಲೆಸ್ತೀನ್ ಎಂಬ ಫ್ಲೆಕ್ಸ್ ಅಳವಡಿಸಲಾಗಿದೆ. ಪ್ಯಾಲೆಸ್ತೀನ್ ಪರ ಪ್ಲೆಕ್ಸ್ ಹಾಕಿದ್ದಕ್ಕೆ ಹಿಂದು ಸಂಘಟನೆಗಳು ಆಕ್ರೋಶ ಹೊರ ಹಾಕಿವೆ.

ಇದನ್ನೂ ಓದಿ: ನಾಗಮಂಗಲ ಕೋಮುಗಲಭೆ: ಬರೊಬ್ಬರಿ 2.66 ಕೋಟಿ ಮೌಲ್ಯದ ಆಸ್ತಿ ನಾಶ

ಇನ್ನು ಘಟನೆ ಸಂಬಂಧ ಶಿವಮೊಗ್ಗದಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಣಗೆರೆಕಟ್ಟೆ ಹಿಂದೂ ಮುಸ್ಲಿಂ ಭಾವೈಕ್ಯತೆಯ ಕೇಂದ್ರ. ಒಂದೇ ಕಾಂಪೌಂಡ್ ನಲ್ಲಿ ದರ್ಗಾ ಇದೆ, ಭೂತಪ್ಪ ದೇವಸ್ಥಾನವು ಇದೆ. ಹತ್ತಾರು ಸಾವಿರ ಭಕ್ತರು ಪ್ರತಿನಿತ್ಯ ಬಂದು ಹೋಗುವ ಯಾತ್ರಾ ಸ್ಥಳ. ಈದ್ ಮಿಲಾದ್ ಹಬ್ಬದ ವೇಳೆ ಕಿಡಿಗೇಡಿಗಳು ಪ್ಯಾಲೆಸ್ತೀನ್ ಪರ ಫ್ಲೆಕ್ಸ್ ಹಾಕಿದ್ದಾರೆ. ಮಂಗಳೂರು ಕುಕ್ಕರ್ ಬಾಂಬ್ ಬ್ಲ್ಯಾಸ್ಟ್, ರಾಮೇಶ್ವರ ಕೆಫೆ ಸ್ಫೋಟದ ಮೂಲ ತೀರ್ಥಹಳ್ಳಿ. ಪ್ಯಾಲೆಸ್ತೀನ್ ಪರ ಫ್ಲೆಕ್ಸ್ ಹಾಕಿರುವ ಹಿನ್ನೆಲೆ ಏನು? ಅದರ ಮೂಲ ಯಾವುದು? ಅದರ ಹಿಂದೆ ಯಾರ ಕೈವಾಡ ಇದೆ ಎಂಬ ಬಗ್ಗೆ ತನಿಖೆ ಆಗಬೇಕು. ಈ ಪ್ರಕರಣವನ್ನು ಎನ್​ಐಎ ತನಿಖೆಗೆ ವಹಿಸಿ ಎಂದು ಆರಗ ಆಗ್ರಹಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ