ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರೇಮ್ಸಿಂಗ್ಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಜಬೀ ಲಿಂಕ್ ಭಯಾನಕವಾಗಿದೆ. ಆರೋಪಿಗೆ ಭಯೋತ್ಪಾದಕರ ಜೊತೆ ಲಿಂಕ್ ಇದೆ ಎಂದು ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಭಯಾನಕ ಮಾಹಿತಿ ನೀಡಿದ್ರು.
ಉಗ್ರರ ಜೊತೆ ನಂಟು ಇರುವುದು ಬಹಿರಂಗವಾಗುತ್ತಿದೆ. ಸದ್ಯದಲ್ಲೇ ಈ ಪ್ರಕರಣ ಎನ್ಐಎಗೆ ಹಸ್ತಾಂತರ ಮಾಡ್ತೇವೆ ಎಂದರು. ಇನ್ನು ಶಿವಮೊಗ್ಗ ನಗರದಲ್ಲಿ ಶಾಂತಿಗಾಗಿ ನಡಿಗೆ ಜಾಥಾ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವ ಆರಗ ಜ್ಞಾನೇಂದ್ರ, ಶಿವಮೊಗ್ಗ ಜಿಲ್ಲೆ ಸಂಪೂರ್ಣ ಶಾಂತಿಯುತವಾಗಿದೆ. ಆಗಾಗ ಆಕಸ್ಮಿಕ ಘಟನೆಗಳು ನಡೆಯುತ್ತವೆ ಅಷ್ಟೇ. ಉಗ್ರರ ಜೊತೆ ಲಿಂಕ್ ಇದ್ದವರೊಂದಿಗೆ ಶಾಂತಿ ನಡಿಗೆ ನಡೆಸಲಿ. ರಾಜಕೀಯ ಪಕ್ಷ ಹೊರತುಪಡಿಸಿ ಕಾರ್ಯಕ್ರಮ ನಡೀತಿದೆ ಎಂದರು.
ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣ: ಆರೋಪಿ ಜಬಿ ಪಿಎಫ್ ಐ ಮತ್ತು ಎಸ್ಡಿಪಿಐ ಕಾರ್ಯಕ್ರಮದಲ್ಲಿ ಭಾಗಿ ಆಗಿರುವ ಫೋಟೋ ವೈರಲ್
ಶಿವಮೊಗ್ಗ: ಇತ್ತೀಚೆಗೆ ಶಿವಮೊಗ್ಗದಲ್ಲಿ ವೀರ್ ಸಾವರ್ಕರ್ (Veer Savarkar) ಫೋಟೋ ಹಾಕುವ ವಿಚಾರದಲ್ಲಿ SDPI ಬೆಂಬಲದಲ್ಲಿ ಮುಸ್ಲಿಮರು ಹಿಂಸಾಚಾರ (Muslim Area) ನಡೆಸಿದ್ದರು. ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿದಿದ್ದ ಪ್ರಕರಣವೂ ನಡೆದಿತ್ತು. ಇದೀಗ, ಪ್ರಕರಣದ ಎ1 ಆರೋಪಿ ಪಿಎಫ್ ಐ ಮತ್ತು ಎಸ್ ಡಿಪಿಐ ಸಂಘಟನೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೊ ಹಾಕಿರುವ ಬಗ್ಗೆ ಗಲಾಟೆ ಕುರಿತು ಕೆಲ ಮಾಹಿತಿ ಹಾಕಿ, ಎ1 ಆರೋಪಿ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರೇಮ್ ಸಿಂಗ್ ಪ್ರಕರಣದ ಪ್ರಮುಖ ಆರೋಪಿಯಾದ ಜಬೀವುಲ್ಲಾ PFI ಮತ್ತು SDPI ಕಾರ್ಯಕರ್ತ. ಈತ PFI/SDPI ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಪೋಟೋ ಇದಾಗಿದೆ. ಗಮನಾರ್ಹವೆಂದರೆ ಎ1 ಆರೋಪಿ ಜಬಿ ಪತ್ನಿ ಮಾತ್ರ ಜಬಿ ಯಾವುದೇ ಸಂಘಟನೆಯೊಂದಿಗೆ ನಂಟು ಹೊಂದಿಲ್ಲ. ಆ ಆರೋಪ ಸುಳ್ಳು ಎಂದು ಬೊಬ್ಬೆಯಿಟ್ಟಿದ್ದರು. ಶಿವಮೊಗ್ಗ ಪೊಲೀಸರ ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರ ಇದಾಗಿದ್ದು, ಸುಳ್ಳು ಮಾಹಿತಿ ಕೊಡುವ ಮೂಲಕ ಶಿವಮೊಗ್ಗ ನಗರದಲ್ಲಿ ಅಶಾಂತಿ ಉಂಟುಮಾಡುವ ಹುನ್ನಾರ ನಡೆದಿದೆ ಎಂಬ ಮಾತು ಕೇಳಿಬಂದಿದೆ.