ಶಿವಮೊಗ್ಗ: 20 ದಿನವಾದರೂ ನಿಗೂಢವಾಗಿ ಉಳಿದ ಮಹಿಳೆ ಸಾವಿನ ರಹಸ್ಯ, ಎಸ್ಪಿ ಮೊರೆಹೋದ ಕುಟುಂಬಸ್ಥರು

|

Updated on: Apr 02, 2023 | 12:49 PM

ಗಂಡ ತೀರಿ ಹೋಗಿ 15 ವರ್ಷವಾಗಿತ್ತು. ಇಬ್ಬರು ಗಂಡು ಮಕ್ಕಳನ್ನು ವಿಧವೆ ಸಾಕಿ ಬೆಳೆಸಿ ದೊಡ್ಡವರನ್ನಾಗಿ ಮಾಡಿದ್ದಳು. ಗಂಡು ಮಕ್ಕಳು ತಾಯಿಗೆ ಸದ್ಯ ಆಸರೆಯಾಗಿದ್ದರು. ಈ ನಡುವೆ ವಿಧವೆಯ ಜೊತೆ ವ್ಯಕ್ತಿಯೊಬ್ಬನ ಜೊತೆ ಅನೈತಿಕ ಸಂಬಂಧ ಶುರುವಾಗಿದ್ದು, ಈ ಅನೈತಿಕ ಸಂಬಂಧದ ಗುಟ್ಟು ರಟ್ಟಾಗಿತ್ತು. ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಹೀಗೆ ಸಿಕ್ಕಿಬಿದ್ದ ಇಬ್ಬರು ಘಟನಾ ಸ್ಥಳದಿಂದ ಎಸ್ಕೇಪ್ ಆಗಿದ್ದರು. ಆದರೆ ಮರುದಿನ ಬೆಳಿಗ್ಗೆ ಮಹಿಳೆಯ ಶವ ಪತ್ತೆಯಾಗಿದೆ.

ಶಿವಮೊಗ್ಗ: 20 ದಿನವಾದರೂ ನಿಗೂಢವಾಗಿ ಉಳಿದ ಮಹಿಳೆ ಸಾವಿನ ರಹಸ್ಯ, ಎಸ್ಪಿ ಮೊರೆಹೋದ ಕುಟುಂಬಸ್ಥರು
ತಾಯಿ ಸಾವಿಗೆ ನ್ಯಾಯ ಕೊಡಿಸುವಂತೆ ಎಸ್ಪಿ ಕಛೇರಿ ಮೆಟ್ಟಿಲೇರಿದ ಮಗ
Follow us on

ಶಿವಮೊಗ್ಗ: ಮಾರ್ಚ್ 11 2023 ರ ರಾತ್ರಿ ಜಿಲ್ಲೆಯ ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ಗ್ರಾಮದಲ್ಲಿ ಒಂದು ಘಟನೆ ನಡೆದಿತ್ತು. ಜೇಬಿಬಾಯಿ ಎನ್ನುವ ಮಹಿಳೆಯು ಅದೇ ಗ್ರಾಮದ ಹಾಲೇಶ್ ನಾಯ್ಕ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಆ ದಿನ ಇಬ್ಬರು ಮನೆಯ ಸಮೀಪದ ದನದ ಕೊಟ್ಟಿಗೆಯಲ್ಲಿ ಭೇಟಿಯಾಗಿದ್ದರು. ಇಬ್ವರು ಸೇರಿ ರೋಮ್ಯಾನ್ಸ್ ಮಾಡುವ ಸಮಯದಲ್ಲಿ ಅಲ್ಲಿಗೆ ಜೇಬಿಬಾಯಿ ಮಗ ಮಂಜಾ ನಾಯ್ಕ ಹೋಗಿದ್ದು, ಇಬ್ಬರು ಒಟ್ಟಿಗೆ ಮಲಗಿದ್ದನ್ನು ನೋಡಿದ ಮಗನಿಗೆ ಶಾಕ್ ಆಗಿತ್ತು. ತಾಯಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಹಾಲೇಶ್ ನಾಯ್ಕನನ್ನು ಹಿಡಿಯಲು ಮಗ ಮಂಜಾ ನಾಯ್ಕ್ ಮುಂದಾಗಿದ್ದಾನೆ. ಈ ವೇಳೆ ಅಲ್ಲಿಂದ ಹಾಲೇಶ್ ಮತ್ತು ಜೇಬಿಬಾಯಿ ಇಬ್ಬರು ಅಲ್ಲಿಂದ ನಾಪತ್ತೆಯಾಗಿದ್ದರು. ಬಳಿಕ ಮರುದಿನ ಒಂದು ಪಾಳುಬಿದ್ದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಜೇಬಿಬಾಯಿ ಶವ, ಮಗ ಮಂಜಾ ನಾಯ್ಕ್​ನ ಕಣ್ಣಿಗೆ ಬೀಳುತ್ತದೆ.

ಹೌದು ಮರುದಿನ ಬೆಳಗ್ಗೆಯಿಂದ ಹುಡುಕಾಡಿದರು ಸಿಗದ ತಾಯಿಯು ಕೊನೆಗೂ ಸಿಕ್ಕಿದ್ದು ಹೆಣವಾಗಿ. ಹೀಗೆ ತಾಯಿ ಬಳಿ ಹೋಗಿ ನೋಡಿದರೆ, ಅವಳಿಗೆ ಗುಪ್ತಾಂಗ ಮತ್ತು ತೊಡೆಯ ಮೇಲೆ ಬಲವಾಗಿ ಕಚ್ಚಿರುವ ಗಾಯಗಳಿದ್ದವು. ಇದೊಂದು ಆತ್ಮಹತ್ಯೆ ಪ್ರಕರಣವಲ್ಲ. ಯಾರೋ ಪ್ರಿ ಪ್ಲ್ಯಾನ್ ಮಾಡಿ ಜೇಬಿ ಬಾಯಿ ಮರ್ಡರ್ ಮಾಡಿದ್ದಾರೆ ಎಂದು ಶಿಕಾರಿಪುರ ಪೊಲೀಸರಿಗೆ ಮೃತಳ ಮಗನು ದೂರು ಕೊಟ್ಟಿದ್ದ.

ಇದನ್ನೂ ಓದಿ:ಬೇಸಿಗೆ ರಜೆ ನಿಮಿತ್ತ ಅಜ್ಜಿ ಮನೆಗೆ ಬಂದಿದ್ದ ಬಾಲಕ ಶವವಾಗಿ ಪತ್ತೆ: ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ

ಹೀಗೆ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಹಾಲೇಶ್ ನಾಯ್ಕ್ ಎಸ್ಕೇಪ್ ಆಗಿದ್ದಾನೆ. ಇತ್ತ ಕುಟುಂಬಸ್ಥರು ಜೇಬಿಬಾಯಿ ಕೊಲೆಗೆಯಾಗಿದೆ ಸೂಕ್ತ ತನಿಖೆ ಮಾಡುತ್ತಾರೆ ಎಂದು ನಂಬಿದ್ದರು. ಆದರೆ ಪೊಲೀಸರು ಈ ಪ್ರಕರಣವನ್ನು ತುಂಬಾ ಹಗುರವಾಗಿ ತೆಗೆದುಕೊಂಡು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶಗೊಂಡ ಗ್ರಾಮಸ್ಥರು ಇಂದು(ಏ.1) ಎಸ್ಪಿ ಕಚೇರಿಗೆ ಬಂದು ದೂರು ಕೊಟ್ಟಿದ್ದಾರೆ.
ಅದಕ್ಕೂ ಮೊದಲು ಎಸ್ಪಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು. ಇದರ ಬಳಿಕ ಜೇಬಿ ಬಾಯಿ ಕೊಲೆಯಾಗಿದೆ. ಅವಳ ಮೃತದೇಹದ ಮೇಲೆ ಅನೇಕ ಗಾಯಗಳಾಗಿವೆ. ಹೀಗಾಗಿ ಇದು ಆತ್ಮಹತ್ಯೆ ಕೇಸ್ ಅಲ್ಲ, ಅನೈತಿಕ ಸಂಬಂಧ ಹೊಂದಿದ ವ್ಯಕ್ತಿಯೇ ಮಹಿಳೆಯನ್ನ ಕೊಲೆ ಮಾಡಿದ್ದಾರೆಂದು ಮೃತಳ ಕುಟುಬಸ್ಥರು ಒತ್ತಾಯಿಸಿದ್ದಾರೆ. ಸದ್ಯ ಗ್ರಾಮಸ್ಥರು ಜೇಬಿ ಬಾಯಿ ಸಾವಿನ ಹಿಂದೆ ಇರುವ ವ್ಯಕ್ತಿಗಳನ್ನು ಬಂಧಿಸುವ ಮೂಲಕ ಮೃತರ ಕುಟುಂಬಕ್ಕೆ ನ್ಯಾಯಕೊಡಿಸಬೇಕಿದೆ.

ಇನ್ನು ಎಸ್ಪಿ ಅವರು ಕೊಲೆ ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುವುದಕ್ಕೆ ಖಡಕ್ ಸೂಚನೆ ಕೊಟ್ಟಿದ್ದಾರೆ. ಮಗನಿಗೆ ಸಿಕ್ಕ ಬಿದ್ದ ಜೇಬಿಬಾಯಿ ಮತ್ತು ಹಾಲೇಶ್ ನಾಯ್ಕ ಇಬ್ಬರಲ್ಲಿ ಜೇಬಿ ಬಾಯಿ ಶವ ಮಾತ್ರ ಪತ್ತೆಯಾಗಿದೆ. ಇನ್ನು ಹಾಲೇಶ್ ನಾಯ್ಕ್​ಗೆ ರಾಜಕೀಯ ಪ್ರಭಾವಿದೆ. ಈ ಹಿನ್ನಲೆಯಲ್ಲಿ ಹಾಲೇಶ್ ನಾಯ್ಕ್ ಈ ಪ್ರಕರಣದಿಂದ ಬಚಾವ್ ಆಗಲು ತಂತ್ರಗಾರಿಕೆ ಹೆಣೆಯುತ್ತಿದ್ದು, ಮಹಿಳೆಯ ಕೊಲೆ ಕೇಸ್​ನ್ನು ಆತ್ಮಹತ್ಯೆ ಎಂದು ಹಾಲೇಶ್ ನಾಯ್ಕ್ ಬಿಂಬಿಸಿದ್ದಾನಂತೆ.

ಇದನ್ನೂ ಓದಿ:Odisha: 15 ವರ್ಷದ ಬಾಲಕನನ್ನು ರೂ.50 ಲಕ್ಷಕ್ಕಾಗಿ ಅಪಹರಿಸಿ ಕೊಲೆ; ಸರ್ಕಾರವನ್ನು ಖಂಡಿಸಿದ ಧರ್ಮೇಂದ್ರ ಪ್ರಧಾನ್

ಪತಿ ಇಲ್ಲದೇ ಇಬ್ಬರ ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿದ ತಾಯಿಯ ಬಗ್ಗೆ ಮಕ್ಕಳಿಗೆ ಹೆಮ್ಮೆಯಿತ್ತು. ಈ ನಡುವೆ ಮಹಿಳೆಯು ಹಾಲೇಶ್ ನಾಯ್ಕ್ ಗೆ ಸಿಕ್ಕು ತನ್ನ ಬದುಕು ಹಾಳು ಮಾಡಿಕೊಂಡಿದ್ದಾಳೆ. ಹೀಗೆ ಹಾಲೇಶ್ ನಾಯ್ಕ ಮಹಿಳೆಯು ಜೀವಂತವಾಗಿದ್ದರೆ ನನಗೆ ತೊಂದರೆ ಎಂದು ಅವಳ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸದ್ಯ 20 ದಿನಗಳಿಂದ ಮಹಿಳೆಯ ಸಾವು ಕೇಸ್ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.

ವರದಿ: ಬಸವರಾಜ್ ಯರಗಣವಿ ಟವಿ9 ಶಿವಮೊಗ್ಗ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ