ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಂಬಾರ ದೊಡುಗೆ ಬಳಿ ತೀರ್ಥಹಳ್ಳಿ-ಮಂಗಳೂರು-ಚಿತ್ರದುರ್ಗ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ಯಲ್ಲಿ ಕುಸಿತಗೊಂಡಿದೆ. ಗುಡ್ಡ ಕುಸಿತದಿಂದ ಕುಂಬಾರ ದೊಡುಗೆ ಗ್ರಾಮಸ್ಥರು ಆತಂಕಿತರಾಗಿದ್ದಾರೆ. ಈ ಪ್ರದೇಶದಲ್ಲಿ ನೂರಾರು ಮನೆಗಳಿವೆ. ಜತೆಗೆ ರಾಷ್ಟ್ರೀಯ ಹೆದ್ದಾರಿ 169ರ ಮೂಲಕ ಮಂಗಳೂರು ಶಿವಮೊಗ್ಗಕ್ಕೆ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಇನ್ನೂ ಹೆಚ್ಚಿನ ದುರಂತ ಸಂಭವಿಸುವ ಮೊದಲೇ ಜಾಗೃತಗೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹ ವ್ಯಕ್ತಪಡಿಸಿದ್ದಾರೆ
ಮಲೆನಾಡಿನಲ್ಲಿ ಅಪ್ಪಟ ಪ್ರದೇಶ ತೀರ್ಥಹಳ್ಳಿ ತಾಲೂಕು. ಕಳೆದ ಒಂದು ವಾರದ ಹಿಂದೆ ಶಿವಮೊಗ್ಗದ ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿದು ದೊಡ್ಡ ಅವಾಂತರ ಸೃಷ್ಟಿ ಮಾಡಿತ್ತು. ತೀರ್ಥಹಳ್ಳಿ ಯ ಪಶ್ಚಿಮ ಘಟ್ಟಗಳಲ್ಲಿ ಗಿಡ ಮರಗಳು ಕುಸಿದುಬಿದ್ದಿದ್ದವು. ಅನೇಕ ಪ್ರದೇಶದಲ್ಲಿ ಗುಡ್ಡ ಕುಸಿತವಾಗಿತ್ತು. ಒಂದೇ ದಿನ ದಾಖಲೆಯ 300 ಮೀ ಮೀ ಮಳೆ ತೀರ್ಥಹಳ್ಳಿಯಲ್ಲಿ ಸುರಿದಿತ್ತು.
34 ವರ್ಷದ ಹಿಂದೆ ಇಷ್ಟು ಮಳೆ ತೀರ್ಥಹಳ್ಳಿಯಲ್ಲಿ ಆಗಿತ್ತು. ಈ ಮಳೆಗೆ ತುಂಗಾನದಿ ತುಂಬಿ ತುಳುಕಿತ್ತು. ಅನೇಕ ಗ್ರಾಮದಲ್ಲಿ ನೆರೆ ಬಂದಿತ್ತು. ಸಾವಿರಾರು ಎಕರೆ ಜಮೀನು ಜಲಾವೃತವಾಗಿತ್ತು. ಎಂದು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ. ತೀರ್ಥಹಳ್ಳಿಯ ಜನರು ಮಹಾಮಳೆಗೆ ನಡುಗಿ ಹೋಗಿದ್ದರು . ಈಗ ಮತ್ತೆ ಇದೇ ರೀತಿಯ ಮಳೆ ತೀರ್ಥಹಳ್ಳಿ ಯಲ್ಲಿ ಸುರಿದಿದೆ. ಜತೆಗೆ ಭೂಕುಸಿತವೂ ಆಗಿರುವುದು ಅಪಾಯದ ಮುನ್ಸೂಚನೆ ನೀಡಿದೆ.
ತೀರ್ಥಹಳ್ಳಿ ಕುರುವಳ್ಳಿಯ ರಾಷ್ಟ್ರೀಯ ಹೆದ್ದಾರಿ ಸಮೀಪ ಗುಡ್ಡ ಕುಸಿದಿದೆ. ಇದರಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಇದೇ ಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಕೂಡಾ ನಡೆಯುತ್ತಿದೆ. ಮಳೆ ಮತ್ತು ಅಕ್ರಮ ಗಣಿಗಾರಿಕೆಯಿಂದ ತೀರ್ಥಹಳ್ಳಿ ಭಾಗದಲ್ಲಿ ಗುಡ್ಡ ಕುಸಿಯುತ್ತಿವೆ.. ಇದು ಅಪಾಯದ ಮುನ್ಸೂಚನೆ ಆಗಿದೆ. ಈ ಘಟನೆಯಿಂದ ಮಲೆನಾಡಿನ ಜನರಿಗೆ ಸದ್ಯ ಆತಂಕ ಶುರುವಾಗಿದೆ ಎಂದು ಸ್ಥಳೀಯರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
Uttara Kannada Flood: ಚಿತ್ರನೋಟ: ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಕೊಟ್ಟ ಭೂಕುಸಿತಕ್ಕೊಳಗಾದ ಕಳಚೆ ಗ್ರಾಮ ಹೇಗಿದೆ?
Uttara Kannada Flood: ಕಳಚೆಯ ಕೂಸುಗಳ ಪುನರ್ವಸತಿ: ಆಡಳಿತದ ಮುಂದಿದೆ ಕಳಚೆ ಕಲ್ಲಿನಷ್ಟೇ ಬೃಹತ್ ಸವಾಲು
(Thirthahalli Chitradurga Mangaluru National Highway 169 near landslide)
Published On - 6:04 pm, Tue, 3 August 21