ಶಿವಮೊಗ್ಗ, ಸೆ.11: ನದಿಗೆ ಈಜಲು ಹೋಗಿದ್ದ ಇಬ್ಬರು ನೀರುಪಾಲಾದ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಭೀಮನಕಟ್ಟೆ ಗ್ರಾಮದ ಬಳಿಯ ತುಂಗಾ ನದಿಯಲ್ಲಿ(Tunga River) ನಡೆದಿದೆ. ಬೆಂಗಳೂರು ಮೂಲದ ಗೌತಮ್(26), ಸುಜಯ್(28) ಮೃತ ದುರ್ದೈವಿಗಳು. ನಿನ್ನೆ ಸಂಜೆ ತುಂಗಾ ನದಿಯಲ್ಲಿ ಈಜಲು ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ.
ಮೃತ ಗೌತಮ್ ಹಾಗೂ ಸುಜಯ್ ತೀರ್ಥಹಳ್ಳಿ ಭಾಗಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ನಿನ್ನೆ ಸಂಜೆ ತುಂಗಾ ನದಿಯಲ್ಲಿ ಈಜಲು ಎಂದು ಹೋಗಿ ನದಿಯಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಈಜುಗಾರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕರ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆದಿದ್ದು ಗೌತಮ್ ಮೃತದೇಹ ಪತ್ತೆಯಾಗಿದೆ. ಮತ್ತೊಬ್ಬ ಯುವಕ ಸುಜಯ್ ಮೃತ ದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ. ತೀರ್ಥಹಳ್ಳಿ ತಾಲೂಕಿನ ಆಗುಂಬೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಮಂಗಳೂರಿನ ಮೋತಿ ಮಹಲ್ ಹೋಟೆಲ್ ಸ್ವಿಮ್ಮಿಂಗ್ ಪೂಲ್ನಲ್ಲಿ ಕೇರಳ ಬ್ಯಾಂಕ್ ಅಧಿಕಾರಿ ಮೃತದೇಹ ಪತ್ತೆ
ಬೆಂಗಳೂರಿನ ಹುಳಿಮಾವು ಪೋಲೀಸ್ ಠಾಣಾ ವ್ಯಾಪ್ತಿಯ ಗೊಟ್ಟಿಗೆರೆಯಲ್ಲಿ ಅಪೋಲೋ ಫಾರ್ಮಸಿ ಮೆಡಿಕಲ್ ಶಾಪ್ ನಲ್ಲಿ ಖತರ್ನಾಕ್ ಕದೀಮ ಕೈಚಳಕ ತೋರಿದ್ದಾನೆ. ಹೌದು ಎಂದಿನಂತೆ ನಿನ್ನೆ ಬೆಳಿಗ್ಗೆಯೂ ಸಹ ಅಪೋಲೋ ಫಾರ್ಮಸಿ ಶಾಪ್ ಡೋರ್ ಅನ್ನು ಸಿಬ್ಬಂದಿ ವಿಘ್ನೇಶ್ ಎಂಬಾತ ಓಪನ್ ಮಾಡಿದ್ದ. ಬೆಳಗಿನ ಜಾವ 7,40ರ ಸುಮಾರಿಗೆ ರಸ್ತೆಯಲ್ಲಿ ಜನರ ಓಡಾಟವೂ ಸಹ ಇತ್ತು. ಆದ್ರೆ ಅಷ್ಟೊತ್ತಿಗೆ ಆಕ್ಸಿಸ್ ಬೈಕ್ ನಲ್ಲಿ ತಲೆಗೆ ಹೆಲ್ಮೆಟ್ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಗ್ರಾಹಕನ ಸೊಗಿನಲ್ಲಿ ಅಪೋಲೋ ಫಾರ್ಮಸಿಗೆ ಖತರ್ನಾಕ್ ಕದೀಮ ಎಂಟ್ರಿ ಕೊಟ್ಟಿದ್ದ. ಫಾರ್ಮಸಿಯಲ್ಲಿ ಸಿಬ್ಬಂದಿ ಓರ್ವನೇ ಇರುವುದನ್ನ ಗಮನಿಸಿ ಏಕಾಏಕಿ ಬ್ಯಾಗ್ ನಲ್ಲಿ ತಂದಿದ್ದ ಮಾರಕಾಸ್ತ್ರವನ್ನ ತೆಗೆದು ಕ್ಯಾಶ್ ಕೌಂಟರ್ ನಲ್ಲಿರುವ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಆದರೆ ಫಾರ್ಮಸಿ ಸಿಬ್ಬಂದಿ ವಿಘ್ನೇಶ್ ಹಣ ನೀಡದಿದ್ದಾಗ ಎರಡು ಕಾಲಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದ. ಜೀವ ಭಯದಿಂದ ಕ್ಯಾಶ್ ಕೌಂಟರ್ ಓಪನ್ ಮಾಡುತ್ತಿದ್ದಂತೆ ಅದರಲ್ಲಿದ್ದ ಸುಮಾರು ಐವತ್ತು ಸಾವಿರಕ್ಕೂ ಅಧಿಕ ಹಣವನ್ನ ರಾಬರಿ ಮಾಡಿ ಅಲ್ಲಿಂದ ಸುಲಿಗೆಕೋರ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ. ಖತರ್ನಾಕ್ ಕಳ್ಳನ ಕೈಚಳಕದ ದೃಶ್ಯ ಫಾರ್ಮಸಿಯ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ