ಶಿವಮೊಗ್ಗದಲ್ಲಿ ಕೋಮು ಸಂಘರ್ಷ: ಶಿವಮೊಗ್ಗ ನಗರ, ಭದ್ರಾವತಿ ಪಟ್ಟಣದ ಶಾಲಾ ಕಾಲೇಜಿಗೆ ಮಂಗಳವಾರ ರಜೆ, ಆ. 18ರವರೆಗೆ ನಿಷೇಧಾಜ್ಞೆ

| Updated By: ಆಯೇಷಾ ಬಾನು

Updated on: Aug 15, 2022 | 8:23 PM

ಶಿವಮೊಗ್ಗ ನಗರ, ಭದ್ರಾವತಿ ಪಟ್ಟಣದ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಿಸಿ ಡಿಸಿ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ, ಭದ್ರಾವತಿಯಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಶಿವಮೊಗ್ಗದಲ್ಲಿ ಕೋಮು ಸಂಘರ್ಷ: ಶಿವಮೊಗ್ಗ ನಗರ, ಭದ್ರಾವತಿ ಪಟ್ಟಣದ ಶಾಲಾ ಕಾಲೇಜಿಗೆ ಮಂಗಳವಾರ ರಜೆ, ಆ. 18ರವರೆಗೆ ನಿಷೇಧಾಜ್ಞೆ
ಘಟನೆ ನಡೆದ ಸ್ಥಳ
Follow us on

ಶಿವಮೊಗ್ಗ: ಶಿವಮೊಗ್ಗದಲ್ಲಿ ಕೋಮು ಸಂಘರ್ಷ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ನಗರ, ಭದ್ರಾವತಿ ಪಟ್ಟಣದ ಶಾಲಾ ಕಾಲೇಜಿಗೆ ನಾಳೆ ರಜೆ ನೀಡಲಾಗಿದೆ. ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿ ಡಿಸಿ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹಿನ್ನೆಲೆ ಇಡೀ ದೇಶ ಈ ದಿನವನ್ನ ಅವಿಸ್ಮರಣೀಯವಾಗಿ ಆಚರಿಸಿದೆ. ಆದ್ರೆ ಶಿವಮೊಗ್ಗದಲ್ಲಿ ಕೋಮು ಸಂಘರ್ಷ ನಡೆದಿದೆ. ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ವೀರ್ ಸಾವರ್ಕರ್(Veer Savarkar) ಮತ್ತು ಟಿಪ್ಪು ಸುಲ್ತಾನ್(Tipu Sultan) ಫ್ಲೆಕ್ಸ್ ವಿಚಾರವಾಗಿ ಭಾರೀ ಗಲಾಟೆಗಳಾಗಿವೆ. ಹಾಗೂ ಶಿವಮೊಗ್ಗದಲ್ಲಿ ದುಷ್ಕರ್ಮಿಗಳು ಇಬ್ಬರು ಯುವಕರಿಗೆ ಚಾಕು ಇರಿದಿದ್ದಾರೆ(Knife Attack). ಸದ್ಯ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಶಿವಮೊಗ್ಗ ನಗರ, ಭದ್ರಾವತಿ ಪಟ್ಟಣದ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಿಸಿ ಡಿಸಿ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ, ಭದ್ರಾವತಿಯಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಶಿವಮೊಗ್ಗದ ಅಮೀರ್‌ ಅಹ್ಮದ್‌ ವೃತ್ತದಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆದಿತ್ತು. ಹೀಗಾಗಿ ಸರ್ಕಲ್‌ ಪಕ್ಕದಲ್ಲೇ ಮುಸ್ಲಿಂ ಸಂಘಟನೆಗಳು ವೇದಿಕೆ ರೆಡಿಮಾಡಿ ಟಿಪ್ಪು ಫೋಟೋ ಹಾಕಿದ್ರು. ವಿಷ್ಯ ಅಂದ್ರೆ ಸರ್ಕಲ್‌ನಲ್ಲಿದ್ದ ಹೈಮಾಸ್‌ ಲೈಟ್‌ ಬಳಿ ಹಿಂದೂಪರ ಸಂಘಟನೆಗಳು ವೀರ ಸಾವರ್ಕರ್‌ ಪ್ಲೆಕ್ಸ್‌ ಅಳವಡಿಸಿದ್ರು . ಆದ್ರೆ ಇದಕ್ಕೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ರು . ಕೊನೆಗೆ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ಮುಸ್ಲಿಂ ಸಂಘಟನೆವರು ಸರ್ಕಲ್‌ನಲ್ಲೇ ಪ್ರತಿಭಟನೆ ಆರಂಭಿಸಿದ್ರು. ಸಾವರ್ಕರ್‌ ಪ್ಲೆಕ್ಸ್‌ ತೆರವಿಗೆ ಆಗ್ರಹಿಸಿದ್ರು. ಈ ವೇಳೆ ಕೆಲ ಕಿಡಿಗೇಡಿಗಳು ನೋಡನೋಡ್ತಿದ್ದಂತೆ ಸರ್ಕಲ್‌ ಒಳಗೆ ನುಗ್ಗಿ ಸಾವರ್ಕರ್‌ ಪ್ಲೆಕ್ಸ್‌ ಕಿತ್ತೆಸಿದ್ರು. ಆಗ್ಲೇ ನೋಡಿ ಲಾಠಿಚಾರ್ಜ್‌ ಶುರುವಾಗಿತ್ತು. ಪರಿಸ್ಥಿತಿ ಕೈಮೀರುತ್ತಿದೆ ಅನ್ನೋದು ಗೊತ್ತಾಗ್ತಿದ್ದಂತೆ ಪೊಲೀಸರು ಲಾಠಿಬೀಸಿದ್ರು . ಸಾವರ್ಕರ್‌ ಫೋಟೋ ತೆಗೆದು ಟಿಪ್ಪು ಫೋಟೋ ಇಡಲು ಬಂದಿದ್ದವರನ್ನ ಚದುರಿಸಿದ್ರು.

Published On - 8:18 pm, Mon, 15 August 22