ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಪ್ತ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಸಿ.ಬಲರಾಮ್ ವಿಧಿವಶ

| Updated By: Skanda

Updated on: Mar 20, 2021 | 1:48 PM

ಎರಡು ಬಾರಿ ಮೈಮುಲ್ ನಿರ್ದೇಶಕರಾಗಿದ್ದ ಕೆ.ಸಿ.ಬಲರಾಮ್ ಬೆಂಗಳೂರಿನ ಖಾಸಗಿ‌ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಮಾರ್ಚ್ 16ರಂದು ನಡೆದ ಮೈಮುಲ್ ಚುನಾವಣೆಯಲ್ಲಿ ಸೋಲು ಕಂಡಿದ್ದ ಕೆ.ಸಿ.ಬಲರಾಮ್, ಈ ಸೋಲಿನಿಂದಾಗಿ ಸಂಪೂರ್ಣವಾಗಿ ಮನನೊಂದಿದ್ದರು ಎಂದು ಮೂಲಗಳು ತಿಳಿಸಿವೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಪ್ತ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಸಿ.ಬಲರಾಮ್ ವಿಧಿವಶ
ಕೆ.ಸಿ.ಬಲರಾಮ್
Follow us on

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಕೆ.ಸಿ.ಬಲರಾಮ್ ವಿಧಿವಶರಾಗಿದ್ದಾರೆ. ಎರಡು ಬಾರಿ ಮೈಮುಲ್ ನಿರ್ದೇಶಕರಾಗಿದ್ದ ಕೆ.ಸಿ.ಬಲರಾಮ್ ಬೆಂಗಳೂರಿನ ಖಾಸಗಿ‌ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಮಾರ್ಚ್​ 16ರಂದು ನಡೆದ ಮೈಮುಲ್ ಚುನಾವಣೆಯಲ್ಲಿ ಸೋಲು ಕಂಡಿದ್ದ ಕೆ.ಸಿ.ಬಲರಾಮ್, ಈ ಸೋಲಿನಿಂದಾಗಿ ಸಂಪೂರ್ಣವಾಗಿ ಮನನೊಂದಿದ್ದರು ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಅಂಗಗಳ ಒಕ್ಕೂಟ ನಿಯಮಿತದ (ಮೈಮುಲ್) ಚುನಾವಣೆಯಲ್ಲಿ ಕೂಡ ಕೆ.ಸಿ.ಬಲರಾಮ್ ಸ್ಪರ್ಧಿಸಿದ್ದರು. ಮೈಮುಲ್ ಆಡಳಿತ ಮಂಡಳಿಯ 15 ನಿರ್ದೇಶಕ ಸ್ಥಾನಗಳಿಗೆ ಮಾರ್ಚ್​ 16 ರಂದು ಚುನಾವಣೆ ನಡೆದಿತ್ತು. ಇಲ್ಲಿ ಅಡಳಿತ ಮಂಡಳಿಯ 15 ಸ್ಥಾನಗಳಿಗೆ 33 ಮಂದಿ ಕಣಕ್ಕೆ ಇಳಿದಿದ್ದು, ತೀವ್ರ ಪೈಪೋಟಿ ಕೂಡ ಇತ್ತು.

ಈ 15 ಮಂದಿಯಲ್ಲಿ ಮಾಜಿ ಅಧ್ಯಕ್ಷರಾದ ಕೆ.ಜಿ. ಮಹೇಶ್, ಎಸ್​.ಸಿದ್ದೇಗೌಡ, ಕೆ. ಉಮಾಶಂಕರ್, ಎ.ಟಿ ಸೋಮಶೇಖರ್, ಮಾಜಿ ಉಪಾಧ್ಯಕ್ಷ ಬಿ.ಎನ್. ಸದಾನಂದ, ಕೆ.ಸಿ.ಕುಮಾರ್, ಕೆ. ಈರೇಗೌಡ, ಪಿ.ಎಂ. ಪ್ರಸನ್ನ ಜೊತೆಗೆ ಮಾಜಿ ನಿರ್ದೇಶಕರಾದ ಕೆ.ಸಿ ಬಲರಾಮ್ ಕೂಡ ಕಣಕ್ಕೆ ಇಳಿದಿದ್ದು, ಈ ಸ್ಪರ್ಧೆಯಲ್ಲಿ ಸೋಲು ಕಂಡಿದ್ದರು.  ಇಂದು ಬೆಳಿಗ್ಗೆ ಕೆ.ಸಿ ಬಲರಾಮ್ ವಿಧಿವಶರಾಗಿದ್ದಾರೆ.

ಇದನ್ನೂ ಓದಿ:

ಕನ್ನಡದ ಖ್ಯಾತ ಕವಿ, ಸಾಹಿತಿ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ವಿಧಿವಶ

Yakshagana | ಯಕ್ಷರಂಗದ ಸಿಡಿಲಮರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಪುತ್ತೂರು ಶ್ರೀಧರ ಭಂಡಾರಿ ವಿಧಿವಶ