ಯಾದಗಿರಿಯಲ್ಲಿ ವಿಶ್ವರಾದ್ಯರ ಮಹಾ ರಥೋತ್ಸವ; ಅನ್ಯ ರಾಜ್ಯಗಳಿಂದ ಹರಿದು ಬಂದ ಭಕ್ತ ಸಾಗರ

ಮಠದ ಪೀಠಾಧಿಪತಿ ಗಂಗಾಧರ ಸ್ವಾಮಿಗಳು ರಥದಲ್ಲಿ ಕುಳಿತು ಕೊಳ್ಳುತ್ತಿದ್ದಂತೆ ನೆರೆದ ಭಕ್ತರು ಕೆಕೆ ಹಾಕುತ್ತ ರಥ ಎಳೆದು ಭಕ್ತಿ ಮೆರೆಯುತ್ತಾರೆ. ಭಕ್ತ ಸಮೂಹ ರಥದ ಮೇಲೆ ಉತ್ತತ್ತಿ, ಬಾಳೆಹಣ್ಣು ಎಸೆದು ಸಂತೋಷಪಡುತ್ತಾರೆ. 55 ವರ್ಷಗಳಿಂದ ನಡೆಯುತ್ತ ಬಂದಿರುವ ಜಾತ್ರೆಗೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.

ಯಾದಗಿರಿಯಲ್ಲಿ ವಿಶ್ವರಾದ್ಯರ ಮಹಾ ರಥೋತ್ಸವ; ಅನ್ಯ ರಾಜ್ಯಗಳಿಂದ ಹರಿದು ಬಂದ ಭಕ್ತ ಸಾಗರ
ವಿಶ್ವರಾದ್ಯರ ಮಹಾ ರಥೋತ್ಸವ
Follow us
sandhya thejappa
|

Updated on: Mar 20, 2021 | 1:35 PM

ಯಾದಗಿರಿ: ವಿಶ್ವರಾದ್ಯ ಮಠ ಸುಪ್ರಸಿದ್ಧ ಮಠ. ಪ್ರತಿ ವರ್ಷ ನಡೆಯುವ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡೆ ಹರಿದು ಬರುತ್ತದೆ. ವಿಶ್ವರಾದ್ಯರ ರಥೋತ್ಸವನ್ನ ಕಣ್ತುಂಬಿಕೊಳ್ಳಲು ದೂರದ ಊರುಗಳಿಂದ ಪಾದಯಾತ್ರೆ ಮೂಲಕ ವಿಶ್ವರಾದ್ಯರ ಸನ್ನಿಧಿಗೆ ಆಗಮಿಸುತ್ತಾರೆ. ಸುಗ್ಗಿ ಕಾಲದಲ್ಲಿ ನಡೆಯುವ ಜಾತ್ರೆ ಜಿಲ್ಲೆಯಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದೆ.

ಯಾದಗಿರಿ ತಾಲೂಕಿನ ಅಬ್ಬೇತುಮಕುರ ಗ್ರಾಮದ ಮಹಾ ದಾರ್ಶನಿಕ ಮತ್ತು ಸಿದ್ಧಿ ಪುರುಷರೆಂದು ಕರೆಯಲ್ಪಡುವ ಶ್ರೀ ವಿಶ್ವರಾದ್ಯ ರಥೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅತಿ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಭಕ್ತರು ಭಾಗವಹಿಸಿ ಭವ್ಯ ರಥವನ್ನ ಎಳೆಯುವ ಮೂಲಕ ಭಕ್ತಿ ಪರಾಕಾಷ್ಠೆಯನ್ನು ಮೆರೆದರು. ವಿಶೇಷವಾಗಿ ವಿಶ್ವರಾದ್ಯರ ರಥೋತ್ಸವದಲ್ಲಿ ಶಸ್ತ್ರದಾರೆ ಮತ್ತು ಹುಚ್ಚಯ್ಯನ ತೇರು ಕುಣಿತ ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಯುತ್ತವೆ. ಪ್ರತಿ ವರ್ಷ ನಡೆಯುವ ಜಾತ್ರೆಗೆ ಸಹಾಸ್ರಾರು ಸಂಖ್ಯೆಯಲ್ಲಿ ಭಕ್ತರ ದಂಡೆ ಆಗಮಿಸಿ ಪೂಜ್ಯರ ಆಶೀರ್ವಾದ ಪಡೆದು ಧನ್ಯರಾಗುತ್ತಾರೆ. ಈ ಜಾತ್ರೆಗೆ ರಾಜ್ಯ ಸೇರಿದಂತೆ ಆಂಧ್ರ, ತೆಲಂಗಾಣ ಮತ್ತು ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಒಟ್ಟು 5 ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ರಥೋತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಧರ್ಮ ಸಮಾವೇಶ ನಡೆಯುವುದು ವಿಶೇಷ. ಜೊತೆಗೆ ವಿಶ್ವರಾದ್ಯರು ಬೇಡಿದ ಹರಕೆಯನ್ನು ಈಡೇರಿಸುತ್ತಾರೆ ಎನ್ನುವ ನಂಬಿಕೆ ಭಕ್ತರಲ್ಲಿದೆ.

ಸ್ವಾಮಿಗಳು

ದೇವಸ್ಥಾನ

ಉಪವಾಸವಿರುವ ಭಕ್ತರು ಮಠದ ಪೀಠಾಧಿಪತಿ ಗಂಗಾಧರ ಸ್ವಾಮಿಗಳು ರಥದಲ್ಲಿ ಕುಳಿತು ಕೊಳ್ಳುತ್ತಿದ್ದಂತೆ ನೆರೆದ ಭಕ್ತರು ಕೆಕೆ ಹಾಕುತ್ತ ರಥ ಎಳೆದು ಭಕ್ತಿ ಮೆರೆಯುತ್ತಾರೆ. ಭಕ್ತ ಸಮೂಹ ರಥದ ಮೇಲೆ ಉತ್ತತ್ತಿ, ಬಾಳೆಹಣ್ಣು ಎಸೆದು ಸಂತೋಷಪಡುತ್ತಾರೆ. 55 ವರ್ಷಗಳಿಂದ ನಡೆಯುತ್ತ ಬಂದಿರುವ ಜಾತ್ರೆಗೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಐದು ದಿನ ನಡೆಯುವ ಜಾತ್ರೆಗೆ ಮಠದ ಮುತ್ತೈದೆ ಭಕ್ತರು ಹಾಗೂ ಪುರುಷರು ರಥೋತ್ಸವ ದಿನದಂದು ಉಪವಾಸ ಇದ್ದು ಭಕ್ತಿಯನ್ನ ಮೇರೆಯುತ್ತಾರಂತೆ. ವಿಶ್ವರಾದ್ಯರಲ್ಲಿ ಭಕ್ತರು ಕೇಳಿದನ್ನೆಲ್ಲಾ ಆಗುತ್ತದೆಯಂತೆ. ಮಕ್ಕಳಿಲ್ಲದವರಿಗೆ ಮಕ್ಕಳಾಗಿವೆ. ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಬೇಡಿಕೊಂಡರೆ ಎಲ್ಲವೂ ಈಡೇರಿದೆ ಅಂತಾ ಸಾವಿರಾರು ಭಕ್ತರು ತಮ್ಮ ಹರಕೆಯನ್ನ ಹೊತ್ತು ವಿಶ್ವರಾದ್ಯರ ಮಠಕ್ಕೆ ಬರುತ್ತಾರೆ. ಮಠದ ಮೇಲೆ ಭಕ್ತರಿಗೆ ಅಪಾರವಾದ ನಂಬಿಕೆಯಿರುವ ಕಾರಣ ಸ್ವಚ್ಚ ಮನಸ್ಸಿನಿಂದ ಬೇಡಿಕೊಂಡಿದೆಲ್ಲಾ ವಿಶ್ವರಾದ್ಯ ಈಡೇರಿಸುತ್ತಾರೆ ಎನ್ನುವುದು ಈ ಮಠದ ಅಚಲವಾದ ನಂಬಿಕೆಯಾಗಿದೆ.

ಜಾತ್ರೆಯಲ್ಲಿ ತಮಟೆ ಭಾರಿಸಿದ ಭಕ್ತರು

ರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ

ಇದನ್ನೂ ಓದಿ

Vastu tips: ತುಳಸಿ ಗಿಡ ಮನೆಯ ಯಾವ ದಿಕ್ಕಿನಲ್ಲಿ ಇದ್ದರೆ ಶ್ರೇಯಸ್ಸು?

ಅಣ್ಣಾಮಲೈ ನಾಮಪತ್ರಕ್ಕೆ ತಡೆ; ಅಪರಾಧ ಪ್ರಕರಣಗಳ ಸ್ಪಷ್ಟೀಕರಣ ನೀಡಲು ಚುನಾವಣಾ ಆಯೋಗ ಸೂಚನೆ

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು