ಮೈಸೂರು: ರಾಜ್ಯ ಬಿಜೆಪಿ ಸರ್ಕಾರದಿಂದ ಇಂದು ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಸಚಿವ ಸ್ಥಾನ ಸಿಗದ ಆಕಾಂಕ್ಷಿಗಳು ಅಸಮಾಧಾನ ಹೊರಹಾಕುತ್ತಿದ್ದರೆ ಇತ್ತ ವಿಸ್ತರಣೆಯಾಗಿರುವ ಸಚಿವ ಸಂಪುಟದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಮಂತ್ರಿ ಮಂಡಲಕ್ಕೆ 7 ಜನರನ್ನು ಸೇರಿಸಿಕೊಂಡರೂ ರಾಜ್ಯ ಬಿಜೆಪಿ ಸರ್ಕಾರ ಟೇಕಾಫ್ ಆಗುವುದಿಲ್ಲ ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಂತ್ರಿ ಮಂಡಲ ಪೂರ್ತಿಯಾದ ತಕ್ಷಣ ಈ ಸರ್ಕಾರ ಪರಿಪೂರ್ಣ ಆಗುವುದಿಲ್ಲ. ಸರ್ಕಾರ ಈಗಾಗಲೇ ಅದೋಗತಿಗೆ ಹೋಗಿದೆ. ಸಂಪುಟ ವಿಸ್ತರಣೆಯ ಅಸಮಾಧಾನದಿಂದ ಮತ್ತಷ್ಟು ಅಧೋಗತಿಗೆ ಹೋಗಲಿದೆ ಎಂದರು.
ಯಾರು ಯಾರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೋ ಅಂತ ನಾನು ನೋಡೋಕೆ ಹೋಗಿಲ್ಲ. ಅಥವಾ ಯಾರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತಾನು ವಿಚಾರಿಸಲು ಹೋಗಿಲ್ಲ. ನನಗೇನು ಗೊತ್ತು ಯಾರು ಯಾರು ಏನೇನು ಮಾತನಾಡಿಕೊಂಡಿದ್ದರೂ ಅಂತ. ಅದರ ಬಗ್ಗೆ ನಾನು ಮಾತನಾಡಲು ಹೋಗೋಲ್ಲ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಬಿಜೆಪಿಯವರು ಹಿಂದುತ್ವ ಅಂತಾರೆ, ನಾವು ಹಿಂದೂಗಳಲ್ವಾ ಎಂದು ಬಿಜೆಪಿ ವಿರುದ್ಧ ಗುಡುಗಿದ ಸಿದ್ದರಾಮಯ್ಯ