ಪೆಟ್ರೋಲ್ ಬೆಲೆ ಏರುತ್ತಿದ್ದರೂ ಮೋದಿ ಹೇಳಿದಂತೆ ಜನ ಚಪ್ಪಾಳೆ ತಟ್ತಿದ್ದಾರೆ, ನನಗೆ ಏನ್ ಮಾಡಬೇಕೆಂದು ಅರ್ಥವಾಗ್ತಿಲ್ಲ -ಸಿದ್ದರಾಮಯ್ಯ ವ್ಯಂಗ್ಯ

ಬ್ಯಾರಲ್ ಕಚ್ಚಾತೈಲ ಬೆಲೆ 100ಕ್ಕೂ ಹೆಚ್ಚು ಡಾಲರ್ ಇತ್ತು. ಆ ಸಂದರ್ಭದಲ್ಲಿ 60 ರೂಪಾಯಿಗೆ ಪೆಟ್ರೋಲ್ ಸಿಗುತ್ತಿತ್ತು. ಈಗ ಬ್ಯಾರಲ್ ಕಚ್ಚಾತೈಲ ಬೆಲೆ 40ರಿಂದ 50 ಡಾಲರ್ ಇದೆ. ಆದರೂ ಕೂಡ ಲೀಟರ್ ಪೆಟ್ರೋಲ್ ಬೆಲೆ 90 ರೂ. ಆಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪೆಟ್ರೋಲ್ ಬೆಲೆ ಏರುತ್ತಿದ್ದರೂ ಮೋದಿ ಹೇಳಿದಂತೆ ಜನ ಚಪ್ಪಾಳೆ ತಟ್ತಿದ್ದಾರೆ, ನನಗೆ ಏನ್ ಮಾಡಬೇಕೆಂದು ಅರ್ಥವಾಗ್ತಿಲ್ಲ -ಸಿದ್ದರಾಮಯ್ಯ ವ್ಯಂಗ್ಯ
ಪ್ರಧಾನಿ ನರೇಂದ್ರ ಮೋದಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ
Follow us
ಆಯೇಷಾ ಬಾನು
|

Updated on:Jan 30, 2021 | 2:57 PM

ಬೆಂಗಳೂರು: ಪೆಟ್ರೋಲ್ ಬೆಲೆ ಏರಿಕೆ ಕಂಡ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬ್ಯಾರಲ್ ಕಚ್ಚಾತೈಲ ಬೆಲೆ 100ಕ್ಕೂ ಹೆಚ್ಚು ಡಾಲರ್ ಇತ್ತು. ಆ ಸಂದರ್ಭದಲ್ಲಿ 60 ರೂಪಾಯಿಗೆ ಪೆಟ್ರೋಲ್ ಸಿಗುತ್ತಿತ್ತು. ಈಗ ಬ್ಯಾರಲ್ ಕಚ್ಚಾತೈಲ ಬೆಲೆ 40ರಿಂದ 50 ಡಾಲರ್ ಇದೆ. ಆದರೂ ಕೂಡ ಲೀಟರ್ ಪೆಟ್ರೋಲ್ ಬೆಲೆ 90 ರೂ. ಆಗಿದೆ.

ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ಪೆಟ್ರೋಲ್ ಬೆಲೆ ದುಬಾರಿಯಾಗಿದೆ. ಆದರೂ ಕೂಡ ನಮ್ಮ ಜನ ಮೋದಿ ಹೇಳಿದಂತೆ ಮಾಡ್ತಿದ್ದಾರೆ. ಪ್ರಧಾನಿ ಮೋದಿ ಹೇಳಿದಂತೆ ಜನರು ಚಪ್ಪಾಳೆ ತಟ್ಟುತ್ತಿದ್ದಾರೆ. ನನಗೆ ಏನ್ ಮಾಡಬೇಕೆಂದು ಅರ್ಥವಾಗ್ತಿಲ್ಲ.

ಜಿಎಸ್‌ಟಿ ಬಂದ ಮೇಲೆ ಆರ್ಥಿಕತೆಯೇ ನೆಲ ಕಚ್ಚಿಹೋಯ್ತು. ಕೆಲಸ ಕೇಳೋಕೆ ಹೋದ್ರೆ ಪಕೋಡ ಮಾರಿ ಅಂತಾನೆ ಗಿರಾಕಿ. ನಾನು‌ 13 ಬಾರಿ ಬಜೆಟ್ ಮಂಡಿಸಿದ್ದೀನಿ ಆದ್ರೆ ಇಂತಹ ಹರ್ಕತ್​ ನೋಡಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಹಾತ್ಮ ಗಾಂಧೀಜಿ ಯಾರ ವಿರುದ್ಧ ಹೋರಾಡಿದರೋ ಅವರಿಂದ ಹತ್ಯೆ ಆಗಲಿಲ್ಲ -ಸಿದ್ದರಾಮಯ್ಯ ಮಾರ್ಮಿಕ ನುಡಿ

Published On - 2:53 pm, Sat, 30 January 21