ಕಳೆದ ಬಾರಿ ಘೋಷಿಸಿದ ಪ್ಯಾಕೇಜ್ ಹಣವೇ ಕೊಟ್ಟಿಲ್ಲ, ಈ ಬಾರಿ ಹಣ ಕೊಡುತ್ತಾರೆಂಬ ನಂಬಿಕೆ ಇಲ್ಲ; ವಿಪಕ್ಷ ನಾಯಕ ಸಿದ್ದರಾಮಯ್ಯ

|

Updated on: May 19, 2021 | 2:19 PM

ರಾಜ್ಯದಲ್ಲಿ ಈಗ ಕೊವಿಡ್ ಟೆಸ್ಟ್ ಕಡಿಮೆ ಮಾಡಿದ್ದಾರೆ. ರಾಜ್ಯದಲ್ಲಿ ಕೊವಿಡ್ ಟೆಸ್ಟ್ ಪಾಸಿಟಿವಿಟಿ ರೇಟ್ ಹೆಚ್ಚಾಗಿದೆ. ರಾಜ್ಯದ 2 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ 55 ರಷ್ಟಾಗಿದೆ. ರಾಜ್ಯದಲ್ಲಿ ಕೊರೊನಾ ಕಂಟ್ರೋಲ್​ಗೆ ಬಂದಿದೆ ಎನ್ನುತ್ತಾರೆ. ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಬರಬೇಕು. ಆಗ ಕೊರೊನಾ ನಿಯಂತ್ರಣಕ್ಕೆ ಬಂದಿದೆ ಎಂದು ಅರ್ಥ.

ಕಳೆದ ಬಾರಿ ಘೋಷಿಸಿದ ಪ್ಯಾಕೇಜ್ ಹಣವೇ ಕೊಟ್ಟಿಲ್ಲ, ಈ ಬಾರಿ ಹಣ ಕೊಡುತ್ತಾರೆಂಬ ನಂಬಿಕೆ ಇಲ್ಲ; ವಿಪಕ್ಷ ನಾಯಕ ಸಿದ್ದರಾಮಯ್ಯ
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಸರ್ಕಾರ ಘೋಷಿಸಿದ ಪ್ಯಾಕೇಜ್ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿ 1,250 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್ ಘೋಷಣೆಯಾಗಿದೆ. ಆದರೆ ವಾಸ್ತವಿಕವಾಗಿ 1,111.82 ಕೋಟಿ ಪ್ಯಾಕೇಜ್ ಆಗಿದೆ. ರೈತರ ಸಾಲ ಮರುಪಾವತಿ ಮುಂದೂಡಿರುವುದಾಗಿ ಹೇಳಿದ್ದಾರೆ. ಇದರಿಂದ ಯಾವುದೇ ಉಪಯೋಗವಿಲ್ಲ. ಕಟ್ಟಡ ಕಾರ್ಮಿಕರಿಗೆ ಪರಿಹಾರ ಘೋಷಣೆ ಮಾಡಿದ್ದಾರೆ. ಸರ್ಕಾರದಿಂದ ಒಂದೇ ಒಂದು ರೂಪಾಯಿ ಹೋಗಲ್ಲ. ಕಾರ್ಮಿಕ ಕಲ್ಯಾಣ ನಿಧಿಯಿಂದ ಹಣ ಹೋಗುತ್ತದೆ. ಈ ಎಲ್ಲ ಹಣ ತೆಗೆದರೆ ಉಳಿಯೋದು 628 ಕೋಟಿ 38 ಲಕ್ಷ ಎಂದು ಹೇಳಿದರು.

ಕಳೆದ ಬಾರಿ ಘೋಷಿಸಿದ ಪ್ಯಾಕೇಜ್ ಹಣವೇ ಕೊಟ್ಟಿಲ್ಲ, ಈ ಬಾರಿ ಹಣ ಕೊಡುತ್ತಾರೆಂಬ ನಂಬಿಕೆ ಇಲ್ಲ ಎಂದು ಮಾತನಾಡಿದ ಸಿದ್ದರಾಮಯ್ಯ, ಕಳೆದ ಬಾರಿ 7 ಲಕ್ಷ 75 ಸಾವಿರ ಚಾಲಕರಿಗೆ ಹಣ ಘೋಷಣೆಯಾಗಿತ್ತು. ಆದರೆ ಕೊಟ್ಟಿರುವುದು ಕೇವಲ 2 ಲಕ್ಷ 10 ಚಾಲಕರಿಗೆ ಮಾತ್ರ. ಈ ಬಾರಿ ಮತ್ತೆ 3 ಸಾವಿರ ಘೋಷಣೆ ಮಾಡಿದ್ದಾರೆ. ಇದನ್ನು ಈಗ ಮತ್ತೆ ಕೊಡುತ್ತಾರೆಂಬ ನಂಬಿಕೆ ಇಲ್ಲ. ಇದೊಂದು ಅವೈಜ್ಞಾನಿಕ ಪ್ಯಾಕೇಜ್ ಎಂದು ಹೇಳಿದರು.

ನಾನು ಲಾಕ್​ಡೌನ್​ ಮಾಡಿ 10 ಕೆಜಿ ಅಕ್ಕಿ ನೀಡಿ ಎಂದಿದ್ದೆ. ಬಡ ಕುಟುಂಬಗಳಿಗೆ 3 ಸಾವಿರ ರೂ. ನೀಡುವಂತೆ ಹೇಳಿದ್ದೆ. ನಾವು ಹಲವು ಬಾರಿ ಒತ್ತಾಯ ಮಾಡಿದ್ದಕ್ಕೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಅದನ್ನು ಕೊಡುತ್ತಾರೆಂಬ ನಂಬಿಕೆ ನಮಗೆ ಇಲ್ಲ ಎಂದು ಹೇಳಿದ ಸಿದ್ದರಾಮಯ್ಯ ರಾಜ್ಯದಲ್ಲಿ ಸಂಪೂರ್ಣ ಲಾಕ್​ಡೌನ್​ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. ಜೊತೆಗೆ ಲಾಕ್​ಡೌನ್​ ವೇಳೆ ಬಡ ಕುಟುಂಬಗಳಿಗೆ ಆಹಾರ ಪದಾರ್ಥ, 10 ಸಾವಿರ ರೂಪಾಯಿ ಹಣವನ್ನು ನೀಡುವಂತೆ ಒತ್ತಾಯಿಸಿದರು.

ರಾಜ್ಯದಲ್ಲಿ ಈಗ ಕೊವಿಡ್ ಟೆಸ್ಟ್ ಕಡಿಮೆ ಮಾಡಿದ್ದಾರೆ. ರಾಜ್ಯದಲ್ಲಿ ಕೊವಿಡ್ ಟೆಸ್ಟ್ ಪಾಸಿಟಿವಿಟಿ ರೇಟ್ ಹೆಚ್ಚಾಗಿದೆ. ರಾಜ್ಯದ 2 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ 55 ರಷ್ಟಾಗಿದೆ. ರಾಜ್ಯದಲ್ಲಿ ಕೊರೊನಾ ಕಂಟ್ರೋಲ್​ಗೆ ಬಂದಿದೆ ಎನ್ನುತ್ತಾರೆ. ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಬರಬೇಕು. ಆಗ ಕೊರೊನಾ ನಿಯಂತ್ರಣಕ್ಕೆ ಬಂದಿದೆ ಎಂದು ಅರ್ಥ. ಕೊವಿಡ್ ಸಾವಿನ ಲೆಕ್ಕವನ್ನು ಕೂಡ ತಪ್ಪು ಹೇಳುತ್ತಿದ್ದಾರೆ. ರಾಜ್ಯ ಸರ್ಕಾರ ಸತ್ಯವನ್ನು ಮುಚ್ಚಿಡುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರ ಘೋಷಿಸಿದ ಪ್ಯಾಕೇಜ್​ನಲ್ಲಿ ಏನೇನೂ ಇಲ್ಲ. ಇದು ಕೇವಲ 628 ಕೋಟಿ ರೂಪಾಯಿ ಪ್ಯಾಕೇಜ್ ಅಷ್ಟೇ. ಕೇಂದ್ರ ಸರ್ಕಾರ 5 ಕೆಜಿ ಅಕ್ಕಿಯನ್ನು ನೀಡುತ್ತಿದೆ. ರಾಜ್ಯ ಸರ್ಕಾರ ಕೇವಲ 2 ಕೆಜಿ ಅಕ್ಕಿಯನ್ನು ಮಾತ್ರ ನೀಡುತ್ತಿದೆ.ಆದರೆ ಒಟ್ಟು 10 ಕೆಜಿ ನೀಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದರು. ಆರ್ಥಿಕ ಪರಿಸ್ಥಿತಿ ಎಲ್ಲಿಯೂ ಚೆನ್ನಾಗಿ ಇಲ್ಲ. ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಕೇರಳ, ದೆಹಲಿ ಸೇರಿದಂತೆ ಎಲ್ಲೂ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಆದರೆ ಅವರು ಹೇಗೆ ಆರ್ಥಿಕ ಪ್ಯಾಕೇಜ್ ಘೋಷಿಸಿದರು. ಮನ್ರೇಗಾ ಯೋಜನೆಯಡಿ 200 ದಿನ ಕೆಲಸ ನೀಡಬೇಕು. ರಾಜ್ಯ ಸರ್ಕಾರಕ್ಕೆ ನಾನು ಹಲವು ಪತ್ರಗಳನ್ನು ಬರೆದಿದ್ದೆ. ಯಾವ ಪತ್ರಕ್ಕೂ ಉತ್ತರ ನೀಡುವ ಸೌಜನ್ಯವೇ ಇಲ್ಲ. ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ

ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ; ಉಡುಪಿ ಮೂಲದ ಆಡ್ಲಿನ್ ಕ್ಯಾಸ್ಟಲಿನೋ ಸಾಧನೆಗೆ ದೇಶದಾದ್ಯಂತ ಮೆಚ್ಚುಗೆ

CM Yediyurappa PC LIVE: ಹೂವು ಬೆಳೆಗಾರರಿಗೆ, ಆಟೋ, ಟ್ಯಾಕ್ಸಿ ಚಾಲಕರಿಗೆ, ಅಸಂಘಟಿತ ಕಾರ್ಮಿಕರಿಗೆ, ಕಲಾವಿದರು, ಕಲಾ ತಂಡಗಳಿಗೆ ಆರ್ಥಿಕ ಸಹಾಯ

(Siddaramaiah Karnataka Government relief fund Lockdown Relief Fund)

Published On - 2:07 pm, Wed, 19 May 21