AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ; ಉಡುಪಿ ಮೂಲದ ಆಡ್ಲಿನ್ ಕ್ಯಾಸ್ಟಲಿನೋ ಸಾಧನೆಗೆ ದೇಶದಾದ್ಯಂತ ಮೆಚ್ಚುಗೆ

ಮೂಲತಹ ಉಡುಪಿಯ ಉದ್ಯಾವರದವರಾದ ಇವರು, ಹುಟ್ಟಿ ಬೆಳೆದಿದ್ದು ಮಾತ್ರ ಕುವೈಟ್​ನಲ್ಲಿ.  ಕ್ರೈಸ್ತ ಸಮುದಾಯಕ್ಕೆ ಸೇರಿದ ಅಲ್ಫೋನ್ಸೋ ಮತ್ತು ಮೀರಾ ದಂಪತಿಯ ಮಗಳಾದ ಆಡ್ಲಿನ್ ಕ್ಯಾಸ್ಟಲಿನೋ, ತನ್ನ ಶಿಕ್ಷಣವನ್ನು ಮುಂಬೈಯಲ್ಲಿ ಪೂರೈಸಿದ್ದಾರೆ.

ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ; ಉಡುಪಿ ಮೂಲದ ಆಡ್ಲಿನ್ ಕ್ಯಾಸ್ಟಲಿನೋ ಸಾಧನೆಗೆ ದೇಶದಾದ್ಯಂತ ಮೆಚ್ಚುಗೆ
ಆಡ್ಲಿನ್ ಕ್ಯಾಸ್ಟಲಿನೋ
preethi shettigar
|

Updated on: May 19, 2021 | 1:21 PM

Share

ಉಡುಪಿ: ಕರಾವಳಿ ಕರ್ನಾಟಕದ ಮತ್ತೊಬ್ಬ ಯುವತಿ ಅಂತರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ನಾಡಿನ ಹಿರಿಮೆಯನ್ನು ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆಡ್ಲಿನ್ ಕ್ಯಾಸ್ಟಲಿನೋ ಎಂಬ ಈ ಚೆಲುವೆ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನವನ್ನು ತಂದುಕೊಟ್ಟಿದ್ದಾರೆ. ಐಶ್ವರ್ಯ ರೈ ಬಳಿಕ ಕರಾವಳಿ ಕರ್ನಾಟಕದಿಂದ ಮಾಡೆಲಿಂಗ್ ಕ್ಷೇತ್ರಕ್ಕೆ ಲಭಿಸಿದ ಅತ್ಯುತ್ತಮ ಪ್ರತಿಭೆಯಾಗಿದ್ದು, ಕರಾವಳಿಯ ಜನಪ್ರಿಯತೆಯನ್ನು ವಿಶ್ವದಾದ್ಯಂತ ರಾರಾಜಿಸುವಂತೆ ಮಾಡಿದ್ದಾರೆ.

ಅಮೆರಿಕದ ಫ್ಲೋರಿಡಾದಲ್ಲಿ ನಡೆದಿರುವ ಭುವನ ಸುಂದರಿ ಸ್ಪರ್ಧೆ 2020ರಲ್ಲಿ ಜಗತ್ತಿನ ವಿವಿಧ ದೇಶದ ಸ್ಪರ್ಧಾಳುಗಳು ಭಾಗವಹಿಸಿದ್ದರು. ಮೆಕ್ಸಿಕೋ ದೇಶದ ಅಂಡ್ರಿಯಾ ವೇಝ ಅವರು ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದರೆ, ಬ್ರೇಜಿಲ್ ಜೂಲಿಯ ಗಾಮಾ ದ್ವಿತೀಯ ಹಾಗೂ ಪೆರು ದೇಶದ ಜಾನಿಕ್ ಮೆಸೇಟಾ ತೃತೀಯ ಸ್ಥಾನ ಪಡೆದಿದ್ದಾರೆ. ನಾಲ್ಕನೇ ಸ್ಥಾನವನ್ನು ಆಡ್ಲಿನ್ ಕ್ಯಾಸ್ಟಲಿನೋ ಪಡೆದಿದ್ದಾರೆ.

ಮೂಲತಹ ಉಡುಪಿಯ ಉದ್ಯಾವರದವರಾದ ಇವರು, ಹುಟ್ಟಿ ಬೆಳೆದಿದ್ದು ಮಾತ್ರ ಕುವೈಟ್​ನಲ್ಲಿ.  ಕ್ರೈಸ್ತ ಸಮುದಾಯಕ್ಕೆ ಸೇರಿದ ಅಲ್ಫೋನ್ಸೋ ಮತ್ತು ಮೀರಾ ದಂಪತಿಯ ಮಗಳಾದ ಆಡ್ಲಿನ್ ಕ್ಯಾಸ್ಟಲಿನೋ, ತನ್ನ ಶಿಕ್ಷಣವನ್ನು ಮುಂಬೈಯಲ್ಲಿ ಪೂರೈಸಿದ್ದಾರೆ. ಬಾಲ್ಯದ ದಿನಗಳಲ್ಲಿ ಇವರಿಗೆ ನಿರರ್ಗಳವಾಗಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲವಂತೆ. ಪದೇ ಪದೇ ತನ್ನನ್ನು ಅಣಕಿಸುತ್ತಿದ್ದ ಸಹಪಾಠಿಗಳ ಮುಂದೆ ನಾನು ಒಂದು ದಿನ ವಿಶ್ವ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತೇನೆ ಎಂದು ಇವರು ಸವಾಲು ಹಾಕಿದ್ದರಂತೆ. ಈಗ ಈ ಸವಾಲು ನನಸಾಗಿದೆ.

ಬಿಸಿನೆಸ್ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂದು ಆಸೆ ಇಟ್ಟುಕೊಂಡಿದ್ದ ಆಡ್ಲಿನ್ ಅವರನ್ನು ಮಾಡಲಿಂಗ್ ಕ್ಷೇತ್ರ ವಿಶೇಷವಾಗಿ ಆಕರ್ಷಿಸಿತ್ತು. ಕಳೆದ ವರ್ಷ ನಡೆದ ಮಿಸ್ ದಿವಾ ಸ್ಪರ್ಧೆ ಇವರಿಗೆ ಮಿಸ್ ಇಂಡಿಯಾ ಪಟ್ಟವನ್ನು ತಂದುಕೊಟ್ಟಿತ್ತು. ಇದೇ ಆಧಾರದಲ್ಲಿ ಇವರು ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಮೊನ್ನೆ ಭಾನುವಾರ ಕೊನೆಯ ಸುತ್ತಿನಲ್ಲಿ ಇವರು ಟಾಪ್ 5 ಬಂದಾಗ ಈ ವರ್ಷ ಭಾರತ ಮಿಸ್ ಯೂನಿವರ್ಸ್ ಕಿರೀಟವನ್ನು ಗೆದ್ದೇ ಗೆಲ್ಲುತ್ತದೆ ಎಂದು ಇಡೀ ದೇಶ ಸಂಭ್ರಮಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಭಾರತಕ್ಕೆ ನಿರಾಸೆಯಾಗಿದೆ. ಆದರೆ ಪ್ರಶ್ನೋತ್ತರ ಸುತ್ತಿನಲ್ಲಿ ಆಡ್ಲಿನ್ ತೀರ್ಪುಗಾರರಿಗೆ ಕೊಟ್ಟ ಒಂದು ಉತ್ತರ ಇಡೀ ದೇಶದ ಮನಗೆದ್ದಿದೆ.

ಕೊರೋನಾ ಸಂಕಷ್ಟದ ಬಗ್ಗೆ ನಿಮ್ಮ ಸಲಹೆ ಏನು ಎಂದು ಕೇಳಿದಾಗ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಮಗೆ ಜೀವ ಮತ್ತು ಜೀವನ ಎರಡು ಕೂಡ ಮುಖ್ಯ. ಆರೋಗ್ಯದ ಜೊತೆಗೆ ಆರ್ಥಿಕತೆಯನ್ನು ಕೂಡ ಸರಿದೂಗಿಸಿಕೊಂಡು ಹೋಗಬೇಕಾದ ಗಂಭೀರ ಸವಾಲು ನಮ್ಮ ಮುಂದಿದೆ ಎಂದು ಆಡ್ಲಿನ್ ಕ್ಯಾಸ್ಟಲಿನೋ ಉತ್ತರಿಸಿದ್ದರು ಇದು ತೀರ್ಪುಗಾರರೂ ಹುಬ್ಬೇರಿಸುವಂತೆ ಮಾಡಿತ್ತು.

ಕಳೆದ ವರ್ಷ ಮಿಸ್ ಇಂಡಿಯಾ ಸ್ಪರ್ಧೆಯನ್ನು ಗೆದ್ದ ಬಳಿಕ ಅಡ್ಮಿನ್ ತನ್ನ ಹುಟ್ಟೂರಿಗೆ ಬಂದು ತನ್ನ ಪೂರ್ವಜರ ಮನೆಗಳನ್ನು ನೋಡಿ ಊರವರಿಂದ ಸನ್ಮಾನ ಸ್ವೀಕರಿಸಿದ್ದರು. ಈ ಬಾರಿ ಮತ್ತೆ ಉಡುಪಿಗೆ ಬರುತ್ತಾರೆ ಎನ್ನುವ ನಿರೀಕ್ಷೆ ಇದೆ ಎಂದು ಸ್ಥಳೀಯರಾದ ಎರೊಲ್ ಗೊನ್ಸಾಲ್ವಿಸ್ ತಿಳಿಸಿದ್ದಾರೆ.

ಇದನ್ನೂ ಓದಿ:

2011ರಲ್ಲಿ ವಿಶ್ವಕಪ್​ ಗೆದ್ದಿದ್ದು ಟೀಮ್ ಇಂಡಿಯಾ ಮಾತ್ರ ಅಲ್ಲ, ಇಡೀ ಭಾರತವೇ ಅದನ್ನು ಗೆದ್ದಿತು: ಸಚಿನ್​ ತೆಂಡೂಲ್ಕರ್

‘ನಮ್ಮ ಜನ ಸಾಯ್ತಿದ್ದಾರೆ’; ಮಿಸ್​ ಯೂನಿವರ್ಸ್​ ಸ್ಪರ್ಧೆಯಲ್ಲಿ ದೇಶಕ್ಕಾಗಿ ಧ್ವನಿ ಎತ್ತಿದ ಮ್ಯಾನ್ಮಾರ್​ ಸುಂದರಿ