ಮಂಡ್ಯಕ್ಕೆ ಹೋಗುವಾಗ Tea ಬ್ರೇಕ್​.. ಮದ್ದೂರು ವಡೆ ಜೊತೆ ಚಹಾ ಸವಿದ ಸಿದ್ದರಾಮಯ್ಯ!

ನಮ್ಮ ರಾಜಕೀಯ ನಾಯಕರು ಕೊಂಚ ತಿಂಡಿಪ್ರಿಯರು ಎಂದು ಹೇಳಿದರೆ ಅದು ತಪ್ಪಾಗಲಾರದು. ಅದರಲ್ಲೂ ತಮಗೆ ಇಷ್ಟವಾದ ತಿಂಡಿ ಸವಿಯಲು ನಮ್ಮ ಮುಖಂಡರು ಸದಾ ರೆಡಿ!

ಮಂಡ್ಯಕ್ಕೆ ಹೋಗುವಾಗ Tea ಬ್ರೇಕ್​.. ಮದ್ದೂರು ವಡೆ ಜೊತೆ ಚಹಾ ಸವಿದ ಸಿದ್ದರಾಮಯ್ಯ!
ಮದ್ದೂರು ವಡೆಗೆ ಮನಸೋತ ಸಿದ್ದರಾಮಯ್ಯ

Updated on: Feb 13, 2021 | 5:04 PM

ಮಂಡ್ಯ: ನಮ್ಮ ರಾಜಕೀಯ ನಾಯಕರು ಕೊಂಚ ತಿಂಡಿಪ್ರಿಯರು ಎಂದು ಹೇಳಿದರೆ ಅದು ತಪ್ಪಾಗಲಾರದು. ಅದರಲ್ಲೂ ತಮಗೆ ಇಷ್ಟವಾದ ತಿಂಡಿ ಸವಿಯಲು ನಮ್ಮ ಮುಖಂಡರು ಸದಾ ರೆಡಿ! ಅಂತೆಯೇ, ಇಂದು ಬೆಂಗಳೂರಿನಿಂದ ಮಂಡ್ಯಕ್ಕೆ ತೆರಳುವ ವೇಳೆ ಮದ್ದೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪಟ್ಟಣದ ಸ್ಪೆಷಾಲಿಟಿ ತಿಂಡಿಯಾದ ಮದ್ದೂರು ವಡೆ ಸವಿಯಲು ಮುಂದಾದರು. ಪಟ್ಟಣದ ಶಿವಪುರದ ಬಳಿಯಿರುವ ಮದ್ದೂರು ಟಿಫಾನೀಸ್​ ಹೋಟೆಲ್​ನಿಂದ ಬಂದ ಮದ್ದೂರು ವಡೆ ಸವಿದು ಎಂಜಾಯ್ ಮಾಡಿದರು.

ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ವಾಹನದಲ್ಲೇ ಮದ್ದೂರು ವಡೆ ಸವಿದ ವಿಪಕ್ಷ ನಾಯಕ, ಬಳಿಕ ಟೀ ಕುಡಿದು ರಿಲಾಕ್ಸ್​ ಆದರು. ಈ ವೇಳೆ, ಸ್ಥಳೀಯ ಕಾಂಗ್ರೆಸ್ ಮುಖಂಡರ ಜೊತೆ ಚರ್ಚೆ ಸಹ ನಡೆಸಿದರು.

ಈ ನಡುವೆ, ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ನಾನು ಈಗಾಗಲೇ ಪಕ್ಷ ಕಟ್ಟಿದ್ದೇನೆ. ಪಕ್ಷ ಕಟ್ಟುವ ಅನಿವಾರ್ಯತೆ ನನಗಿಲ್ಲ. ನಾನು ಕಾಂಗ್ರೆಸ್ಸಿಗ ಎಂದು ಹೇಳಿದರು. ಜೊತೆಗೆ, ನಾನೀಗ ಕಾಂಗ್ರೆಸ್ ಪಕ್ಷದಲ್ಲಿರುವುದರಿಂದ ಬೇರೆ ಪಕ್ಷ ಕಟ್ಟುವ ಅವಶ್ಯಕತೆ ಇಲ್ಲ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಎಚ್​ ಡಿಕುಮಾರಸ್ವಾಮಿಗೆ ಟಾಂಗ್​ ನೀಡಿದರು. ಸ್ವತಂತ್ರವಾಗಿ ಪಕ್ಷ ಕಟ್ಟುವಂತೆ ಸಿದ್ದರಾಮಯ್ಯಗೆ ನಿನ್ನೆಯಷ್ಟೇ ಎಚ್​ ಡಿಕುಮಾರಸ್ವಾಮಿ ಸವಾಲಯ ಎಸೆದಿದ್ದರು.

ಮದ್ದೂರು ವಡೆ ಸವಿದ ಸಿದ್ದರಾಮಯ್ಯ

ಮದ್ದೂರು ವಡೆ ಸವಿಯುತ್ತಾ ಕಾಂಗ್ರೆಸ್​ ಕಾರ್ಯಕರ್ತರ ಜೊತೆ ಸಿದ್ದರಾಮಯ್ಯರ ಚರ್ಚೆ

ವಡೆ ಸವಿದ ನಂತರ ಖಡಕ್​ ಟೀ ಎಂಜಾಯ್​ ಮಾಡಿದ ಸಿದ್ದರಾಮಯ್ಯ

ಇದನ್ನೂ ಓದಿ: Siddaramaiah cotton shopping spree ಏಯ್​.. ಚೆನ್ನಾಗಿರೋ ಪಂಚೆ ಕೊಡಯ್ಯ.. ಕಲರ್​ ಇಲ್ದೇ ಇರೋದು ಕೊಡಬೇಡ -ಸಿದ್ದರಾಮಯ್ಯ ಖಾದಿ ಶಾಪಿಂಗ್!

Published On - 5:01 pm, Sat, 13 February 21