AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಸಿದ್ದಾಂತ ಬಿಟ್ಟು ಬೇರಾವುದೂ ಗೊತ್ತಿಲ್ಲ; ಒಂದೇ ಮಾತಲ್ಲಿ ಸಿದ್ಧರಾಮಯ್ಯಗೆ ಟಾಂಗ್ ಕೊಟ್ಟ ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ನೀತಿ ತತ್ವ ಸಿದ್ದಾಂತಕ್ಕೆ ಬದ್ಧವಾಗಿದ್ದು, ನೆಹರೂ,ಸಮಾಜವಾದ, ಅಂಬೇಡ್ಕರ್ ಸಂವಿಧಾನ ಹಾಗೂ ಇಂದಿರಾಗಾಂಧಿ ಬಡವರಿಗೆ ಕೊಟ್ಟ ಯೋಜನೆಗಳ ಮೇಲೆ ನಡೆದುಬಂದಿದ್ದು, ಇವು ಬಿಟ್ಟು ಬೇರಾವ ಸಿದ್ಧಾಂತಗಳೂ ತಿಳಿದಿಲ್ಲ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯಗೆ ಛಾಟಿ ಬೀಸಿದ್ದಾರೆ.

ಕಾಂಗ್ರೆಸ್ ಸಿದ್ದಾಂತ ಬಿಟ್ಟು ಬೇರಾವುದೂ ಗೊತ್ತಿಲ್ಲ; ಒಂದೇ ಮಾತಲ್ಲಿ ಸಿದ್ಧರಾಮಯ್ಯಗೆ ಟಾಂಗ್ ಕೊಟ್ಟ ಮಲ್ಲಿಕಾರ್ಜುನ ಖರ್ಗೆ
ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ
guruganesh bhat
| Updated By: ಸಾಧು ಶ್ರೀನಾಥ್​|

Updated on: Feb 13, 2021 | 5:15 PM

Share

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ 55 ವರ್ಷಗಳಿಂದ ಇರುವ ನನಗೆ ಯಾವುದೇ ಅಹಿಂದ ಸಿದ್ಧಾಂತವೂ ಗೊತ್ತಿಲ್ಲ. ಕೇವಲ ಕಾಂಗ್ರೆಸ್ ಸಿದ್ಧಾಂತ ಮಾತ್ರ ನನಗೆ ತಿಳಿದಿರುವುದು ಎಂದು ಒಂದೇ ಮಾತಲ್ಲಿ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯರ ‘ಅಹಿಂದ’ ಬ್ರಹ್ಮಾಸ್ತ್ರಕ್ಕೆ ಭರ್ಜರಿ ಎದಿರೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷವು ನೀತಿ, ತತ್ವ, ಸಿದ್ದಾಂತಕ್ಕೆ ಬದ್ಧವಾಗಿದ್ದು ನೆಹರೂ, ಸಮಾಜವಾದ, ಅಂಬೇಡ್ಕರ್ ಸಂವಿಧಾನ ಹಾಗೂ ಇಂದಿರಾ ಗಾಂಧಿ ಬಡವರಿಗೆ ಕೊಟ್ಟ ಯೋಜನೆಗಳ ಮೇಲೆ ನಡೆದುಬಂದಿದೆ. ಹೀಗಾಗಿ ಕಾಂಗ್ರೆಸ್ ಸಿದ್ದಾಂತ ಬಿಟ್ಟು ಬೇರಾವ ಸಿದ್ಧಾಂತಗಳೂ ತನಗೆ ತಿಳಿದಿಲ್ಲವೆಂದು ಸಿದ್ದರಾಮಯ್ಯಯ ಅವರತ್ತ ಖರ್ಗೆ ಚಾಟಿ ಬೀಸಿದರು.

ರಾಜ್ಯಸಭೆಯಲ್ಲಿ ವಿಪಕ್ಷಗಳನ್ನ ಒಗ್ಗಟ್ಟಾಗಿ ಕರೆದುಕೊಂಡು ಹೋಗುವುದು ಸವಾಲಿನ ಕೆಲಸ ಎಂಬುದನ್ನು ಒಪ್ಪಿಕೊಂಡ ಅವರು, ಈ ಹಿಂದೆ ರಾಜ್ಯದ ಮೇಲ್ಮನೆ, ಕೆಳಮನೆಗಳಲ್ಲಿ ವಿಪಕ್ಷ ನಾಯಕನಾಗಿ ಕೆಲಸ ಮಾಡಿರುವ ಅನುಭವದ ಆಧಾರದ ಮೇಲೆ ವಿಪಕ್ಷಗಳನ್ನು ಮುನ್ನಡೆಸುವುದಾಗಿ ಹೇಳಿದರು. ವಿಶೇಷವಾಗಿ ಮೂರು ಕೃಷಿ ಕಾನೂನುಗಳನ್ನು ತಡೆಗಟ್ಟಬೇಕಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹಕಾರ ಹಾಗೂ ಬೆಂಬಲದಿಂದ ಈ ಅವಕಾಶ ಸಿಕ್ಕಿದ್ದು, ದೇಶದಲ್ಲಿ ತಾಂಡವವಾಡುತ್ತಿರುವ ಅನೇಕ ಸಮಸ್ಯೆಗಳನ್ನು ರಾಜ್ಯಸಭಾ ಸದಸ್ಯರು ಹಾಗೂ ಕಾಂಗ್ರೆಸ್ ನಾಯಕರ ಸಲಹೆ ಪಡೆದು ಬಗೆಹರಿಸಲು ಪ್ರಯತ್ನಿಸುವುದಾಗಿ ಹೇಳಿದರು.

ಎಲ್ಲರನ್ನು ಒಗ್ಗೂಡಿಸಲು ಪ್ರಯತ್ನ ಪಡುತ್ತೇನೆ ದೇಶದ ಹಿತದೃಷ್ಟಿಯಿಂದ ಎಲ್ಲರೂ ಒಗ್ಗೂಡುವುದು ಮುಖ್ಯ. ಹೀಗಾಗಿ, ಈಗಾಗಲೇ ಏಳೆಂಟು ನಾಯಕರ ಜೊತೆ ಮಾತನಾಡಿದ್ದು, ಎಲ್ಲಾ 22 ಪಕ್ಷಗಳು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ರಾಜ್ಯಕ್ಕೆ ಬರಬೇಕಿರುವ ಜಿಎಸ್​ಟಿ, ಪ್ರವಾಹ ಅನುದಾನ, ರೈಲ್ವೇ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು ಈ ಕುರಿತು ಈಗಾಗಲೇ ರಾಜ್ಯಸಭೆಯಲ್ಲಿ ಮಾತನಾಡಿದ್ದೇನೆ. ಜಿಎಸ್​ಟಿ ಹಾಗೂ ರೈಲ್ವೆ ಯೋಜನೆ ಬಗ್ಗೆಯೂ ಮಾತನಾಡುತ್ತೇನೆ. ಜಿಎಸ್​ಟಿ ಪ್ರವಾಹದಲ್ಲಿ ಅನುದಾನದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಆಡಳಿತಾರೂಢ ಬಿಜೆಪಿ ಸಂಸದರು ಇದರ ಬಗ್ಗೆ  ಮಾತನಾಡಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ: ರಾಜಕೀಯ ವಿಶ್ಲೇಷಣೆ | ಸಿದ್ದರಾಮಯ್ಯಗಾಗಿ ‘ಹಿಂದ  ಅಹಿಂದ’ ಬಲೆ ಹೆಣೆಯುತ್ತಿದೆಯೇ ಬಿಜೆಪಿ?