AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲ್ಲಿಕಾರ್ಜುನ ಖರ್ಗೆ ಎಂದಿಗೂ ಅಹಿಂದ ಹೋರಾಟ ಮಾಡಿಲ್ಲ! ಗುಟುರು ಹಾಕಿದ ಸಿದ್ದರಾಮಯ್ಯ

ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಕರ್ನಾಟಕ ಕಾಂಗ್ರೆಸ್​ನ ಎರಡು ಬಲಿಷ್ಠ ಶಕ್ತಿಕೇಂದ್ರಗಳಾಗಿದ್ದು ಇವರಿಬ್ಬರ ಶೀತಲ ಸಮರ ಮುಂದಿನ ದಿನಗಳ ರಾಜಕೀಯ ತಿರುವನ್ನು ಕುತೂಹಲವನ್ನು ಇಮ್ಮಡಿಗೊಳಿಸಲಿದೆ.

ಮಲ್ಲಿಕಾರ್ಜುನ ಖರ್ಗೆ ಎಂದಿಗೂ ಅಹಿಂದ ಹೋರಾಟ ಮಾಡಿಲ್ಲ! ಗುಟುರು ಹಾಕಿದ ಸಿದ್ದರಾಮಯ್ಯ
guruganesh bhat
|

Updated on:Feb 13, 2021 | 6:24 PM

Share

ಮಂಡ್ಯ: ಮೊದಲಿಂದಲೂ ಕಾಂಗ್ರೆಸ್‌ ಪಕ್ಷದಲ್ಲೇ ಇದ್ದರೂ ಮಲ್ಲಿಕಾರ್ಜುನ ಖರ್ಗೆ ಎಂದೂ ಅಹಿಂದ ಹೋರಾಟ ಮಾಡಿಲ್ಲ ಎಂದು ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷವೇ ಅಹಿಂದ ಪಕ್ಷವಾಗಿದ್ದು, ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವೈಯಕ್ತಿಕ ಅಭಿಪ್ರಾಯ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಬಹುದು. ಹಿಂದ – ಅಹಿಂದ ಕುರಿತು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿರಬಹುದು. ಕಾಂಗ್ರೆಸ್ ಪಕ್ಷವೇ ಅಹಿಂದ ಪಕ್ಷವಾಗಿದ್ದು, ಮಲ್ಲಿಕಾರ್ಜುನ ಖರ್ಗೆ ಅವರು ಮೊದಲಿಂದಲೂ ಕಾಂಗ್ರೆಸ್​ನಲ್ಲೇ ಇದ್ದಾರೆ  ಎಂದು ಸಿದ್ದರಾಮಯ್ಯ ರಾಜ್ಯಸಭಾ ವಿಪಕ್ಷ ನಾಯಕರ ವಿರುದ್ಧ ಗುಟುರು ಹಾಕಿದ್ದಾರೆ.

ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಕರ್ನಾಟಕ ಕಾಂಗ್ರೆಸ್​ನ ಎರಡು ಬಲಿಷ್ಠ ಶಕ್ತಿಕೇಂದ್ರಗಳಾಗಿದ್ದು ಇವರಿಬ್ಬರ ಶೀತಲ ಸಮರ ಮುಂದಿನ ದಿನಗಳ ರಾಜಕೀಯ ತಿರುವನ್ನು ಕುತೂಹಲಗೊಳಿಸಲಿದೆ.

ಇದನ್ನೂ ಓದಿ: ಕಾಂಗ್ರೆಸ್ ಸಿದ್ದಾಂತ ಬಿಟ್ಟು ಬೇರಾವುದೂ ಗೊತ್ತಿಲ್ಲ; ಒಂದೇ ಮಾತಲ್ಲಿ ಸಿದ್ಧರಾಮಯ್ಯಗೆ ಟಾಂಗ್ ಕೊಟ್ಟ ಮಲ್ಲಿಕಾರ್ಜುನ ಖರ್ಗೆ

ಸಿದ್ದರಾಮಯ್ಯರ ಹಿಂದ ಹೋರಾಟಕ್ಕೆ ತಡೆ ಒಡ್ಡಲಿದೆಯೇ ಕಾಂಗ್ರೆಸ್?

ಹಿಂದುಳಿದವರು ಮತ್ತು ದಲಿತರನ್ನು ಮುಂದಿಟ್ಟುಕೊಂಡು ಕುರುಬರನ್ನು ಒಗ್ಗೂಡಿಸುವ ತಂತ್ರ ರೂಪಿಸಿರುವ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್​ ಪಕ್ಷ ತಿರುಗೇಟು ಕೊಟ್ಟಂತೆ ಕಾಣುತ್ತಿದೆ. ರಾಜ್ಯದ ನಾಲ್ಕು ಕಂದಾಯ ವಿಭಾಗದಲ್ಲಿ ಹಿಂದುಳಿದ ಮತ್ತು ದಲಿತ-ಹಿಂದ-ಕಾರ್ಯಕ್ರಮವನ್ನು ರೂಪಿಸಿದ್ದ ಸಿದ್ದರಾಮಯ್ಯ ಅವರಿಗೆ ಪಕ್ಷ ಸೂಕ್ಷ್ಮ ಸಂದೇಶ ಕೊಟ್ಟಂತೆ ಕಾಣುತ್ತಿದೆ. ಪಕ್ಷದ ವೇದಿಕೆಯನ್ನು ಬಿಟ್ಟು ಬೇರೆ ಎಲ್ಲೂ ಈ ರೀತಿಯ ಕಾರ್ಯಕ್ರಮ ಏರ್ಪಡಿಸಬಾರದು ಎಂಬ ಮೌಖಿಕ ಆದೇಶವನ್ನು ಸಿದ್ದರಾಮಯ್ಯ ಅವರಿಗೆ ತಲುಪಿಸಲಾಗಿದೆ. ಆದರೆ ಸಿದ್ದರಾಮಯ್ಯ ಅವರ ಆಪ್ತ ಬಳಗ ಇದನ್ನು ಖಡಾಖಂಡಿತವಾಗಿ ನಿರಾಕರಿಸುತ್ತಿದೆ.

ರಾಜ್ಯಸಭೆಗೆ ವಿರೋಧ ಪಕ್ಷದ ನಾಯಕರಾಗಿ ನಿಯೋಜಿತರಾಗಿರುವ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ನಮ್ಮಲ್ಲಿ ಅಹಿಂದ ಅಂತ ಇಲ್ಲ, ಇರೋದು ಕಾಂಗ್ರೆಸ್​ ಮಾತ್ರ ಎಂದು ಹೇಳಿದ ಎರಡು ತಾಸೊಳಗೆ, ಸಿದ್ದರಾಮಯ್ಯ ತಾನು ಇಂತಹ ಕಾರ್ಯಕ್ರಮ ಮಾಡುತ್ತೇನೆಂದು ಹೇಳೇ ಇಲ್ಲ ಎಂದು ವಿವರಣೆ ನೀಡಿದ್ದಾರೆ.

ಅಸಲಿನಲ್ಲಿ ಸಿದ್ದರಾಮಯ್ಯ ತಪ್ಪು ಮಾಡಿದ್ದೆಲ್ಲಿ?

ತಮ್ಮ ಗೆಳೆಯ ಡಾ. ಎಚ್​.ಸಿ. ಮಹದೇವಪ್ಪ ಅವರ ಜೊತೆ ಗುಟ್ಟಾಗಿ ಸಭೆ ಮಾಡಿದ ಸಿದ್ದರಾಮಯ್ಯ ಕುರುಬ ಜನಾಂಗದ ಮೀಸಲಾತಿ ಹೋರಾಟದಲ್ಲಿ ಭಾಗವಹಿಸಿದ ನಾಯಕರಿಗೆ ಟಾಂಗ್​ ಕೊಡಲು ಒಂದು ಸ್ಕೆಚ್​ ಹಾಕಿದರು. ಆ ಪ್ರಕಾರ, ನಾಲ್ಕು ಕಂದಾಯ ವಿಭಾಗದಲ್ಲಿ ಹಿಂದ ಜನಾಂಗದ ಸಭೆಯ ಹೆಸರಿನಲ್ಲಿ, ಹೊಸದಾಗಿ ಆರಿಸಿಬಂದ ಕುರುಬ ಜನಾಂಗದ ಗ್ರಾಮ ಪಂಚಾಯತ ಸದಸ್ಯರಿಗೆ ಸನ್ಮಾನ ಮಾಡುವ ಲೆಕ್ಕಾಚಾರ ಹಾಕಿದ್ದರು. ಆದರೆ, ಪಕ್ಷ ಇದಕ್ಕೆ ಒಪ್ಪಿಗೆ ಕೊಡುವ ಲಕ್ಷಣ ಕಾಣುತ್ತಿಲ್ಲ.

ಸಿದ್ದರಾಮಯ್ಯ ಇನ್ನೂ 2005 ರ ನೆನಪಿನಲ್ಲೇ ಇದ್ದಂತೆ ಕಾಣುತ್ತಿದೆ. 2005 ರಲ್ಲಿ ಕಾಂಗ್ರೆಸ್​ ಸೇರುವ ಮೊದಲು ಅಹಿಂದ ಸಮಾವೇಶ ಮಾಡಿ ಯಶಸ್ಸು ಕಂಡ ಸಿದ್ದರಾಮಯ್ಯ, ಈಗ ಅದನ್ನು ಪುನರಾವರ್ತಿಸಲು ಮುಂದಾದಂತೆ ಕಾಣುತ್ತಿದೆ. ಆದರೆ ಸಿದ್ದರಾಮಯ್ಯ ಒಂದು ವಿಚಾರವನ್ನು ಮರೆತಂತಿದೆ. 2005 ರಲ್ಲಿ ಅವರು ಅಹಿಂದ ಚಳುವಳಿ ಮಾಡಿದಾಗ ರಾಜ್ಯದಲ್ಲಿ ಬಿಜೆಪಿ ಇಷ್ಟು ಬೆಳೆದಿರಲಿಲ್ಲ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಆಡಳಿತ ಮಾಡಿದ್ದರೂ, ಬಿಜೆಪಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಲವಾರು ಹಿಂದುಳಿದ ವರ್ಗಗಳಲ್ಲಿರುವ ಸಮುದಾಯಗಳ ಬೆಂಬಲ ಈಗ ಸಿಕ್ಕಿರುವಷ್ಟು, ಅಂದು ಸಿಕ್ಕಿರಲಿಲ್ಲ.

2018ರ ವಿಧಾನಸಭಾ ಮತ್ತು 2019 ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಒಂದಂಶ ಸ್ಪಷ್ಟವಾಗುತ್ತದೆ. ಅದೇನೆಂದರೆ, ಎಸ್​ಸಿ, ಎಸ್​ಟಿ ಮತ್ತು ಹಿಂದುಳಿದ ವರ್ಗಗಳ ಹಲವಾರು ಸಮುದಾಯಗಳು ಕಾಂಗ್ರೆಸ್​ನ್ನು ಬಿಟ್ಟು ಬಿಜಿಪಿಯನ್ನು ಅಪ್ಪಿಕೊಂಡಿವೆ. ಅಂದರೆ ಸದ್ಯದ ಪರಿಸ್ಥಿತಿಯಲ್ಲಿ, ಅವೆಲ್ಲ ತಿರುಗಿ ಕಾಂಗ್ರೆಸ್​ಗೆ ಬರುತ್ತವೆ ಎಂಬುದಕ್ಕೆ ಯಾವ ಪುರಾವೆಯೂ ಇಲ್ಲ. ಆದ್ದರಿಂದ ಸಿದ್ದರಾಮಯ್ಯ ಹಿಂದ ಸಮುದಾಯಗಳ ಸಭೆ ನಡೆಸಿ ಮತದಾರರ ಮನ ಗೆಲ್ಲಬಹುದು ಎಂದು ಅಂದುಕೊಂಡರೆ ಅದು ತಪ್ಪು. ಮತ್ತು ಈ ತಂತ್ರಗಾರಿಕೆ ಕಾಂಗ್ರೆಸ್ಸಿಗೆ ಹಾನಿ ಮಾಡುವ ಸಾಧ್ಯತೆ ಜಾಸ್ತಿಯೇ ಹೊರತು ಲಾಭ ತರುವ ಸಾಧ್ಯತೆ ಕಡಿಮೆ.

ರಾಜಕೀಯ ವಿಶ್ಲೇಷಣೆ | ಸಿದ್ದರಾಮಯ್ಯಗಾಗಿ ‘ಹಿಂದ ಅಹಿಂದ’ ಬಲೆ ಹೆಣೆಯುತ್ತಿದೆಯೇ ಬಿಜೆಪಿ?

Published On - 5:39 pm, Sat, 13 February 21

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್