ಸೋಮವಾರವೇ ಪರೀಕ್ಷೆ; Fees ಕಟ್ಟದಿದ್ರೆ ಹಾಲ್ ಟಿಕೆಟ್ ಕೊಡಲ್ವಂತೆ – ಅಮಿರ್ತಾ ಇನ್ಸ್ಟಿಟ್ಯೂಟ್ ವಿರುದ್ಧ ಕಿರುಕುಳದ ಆರೋಪ
ರಾಜರಾಜೇಶ್ವರಿನಗರದಲ್ಲಿರುವ ಅಮಿರ್ತಾ ಇನ್ಸ್ಟಿಟ್ಯೂಟ್ ವಿರುದ್ಧ ಫೀಸ್ಗಾಗಿ ಒತ್ತಡ ಹೇರಿರುವ ಆರೋಪ ಕೇಳಿಬಂದಿದೆ. ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗೆ ಸಂಸ್ಥೆ ಫೀಸ್ ವಿಚಾರವಾಗಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಬೆಂಗಳೂರು: ರಾಜರಾಜೇಶ್ವರಿನಗರದಲ್ಲಿರುವ ಅಮಿರ್ತಾ ಇನ್ಸ್ಟಿಟ್ಯೂಟ್ ವಿರುದ್ಧ ಫೀಸ್ಗಾಗಿ ಒತ್ತಡ ಹೇರಿರುವ ಆರೋಪ ಕೇಳಿಬಂದಿದೆ. ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗೆ ಸಂಸ್ಥೆ ಫೀಸ್ ವಿಚಾರವಾಗಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. College Fees
‘ಪೂರ್ತಿ ಶುಲ್ಕ ಪಾವತಿಸಿದರೆ ಮಾತ್ರ ಹಾಲ್ ಟಿಕೆಟ್ ನೀಡ್ತೇವೆ’ ಪೂರ್ತಿ ಶುಲ್ಕ ಪಾವತಿಸಿದರೆ ಮಾತ್ರ ಹಾಲ್ ಟಿಕೆಟ್ ನೀಡ್ತೇವೆ ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಸೂಚನೆ ನೀಡಿದೆಯಂತೆ. ಅಂದ ಹಾಗೆ, ನಿನ್ನೆ ಅರ್ಧ ಫೀಸ್ ಕಟ್ಟುವಂತೆ ಸೂಚಿಸಿದ್ದ ಆಡಳಿತ ಮಂಡಳಿ ಇಂದು ಏಕಾಏಕಿ ಪೂರ್ತಿ ಶುಲ್ಕ ಪಾವತಿಸುವಂತೆ ಸೂಚನೆ ಕೊಟ್ಟಿದೆ. ಇಲ್ಲದಿದ್ದರೆ, ಹಾಲ್ ಟಿಕೆಟ್ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆಯಂತೆ. ಈ ಮೂಲಕ, ಹಾಲ್ ಟಿಕೆಟ್ ನೀಡದೆ ಆಡಳಿತ ಮಂಡಳಿ ಸತಾಯಿಸುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇದೀಗ, ಏಕಾಏಕಿ ಪೂರ್ತಿ ಶುಲ್ಕ ಕೇಳಿದ್ದಕ್ಕೆ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಎದುರಾಗಿದೆ. ಅಂದ ಹಾಗೆ, ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ಗೆ ವಾರ್ಷಿಕ ಶುಲ್ಕ 75,000 ರೂಪಾಯಿ. ವಾರ್ಷಿಕ ಶುಲ್ಕವನ್ನು ಒಂದೇ ಬಾರಿಗೆ ಪಾವತಿಸಿ ಎಂದು ಕಾಲೇಜಿನ ಆಡಳಿತ ಮಂಡಳಿ ಸೂಚಿಸಿದೆಯಂತೆ. 3ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಸೂಚನೆ ಕೊಟ್ಟಿದೆಯಂತೆ.
ಈ ನಡುವೆ, ಸೋಮವಾರ ಪರೀಕ್ಷೆ ಇದ್ದರೂ ಹಾಲ್ ಟಿಕೆಟ್ ನೀಡುತ್ತಿಲ್ಲ. ಹಾಲ್ ಟಿಕೆಟ್ಗಾಗಿ ಅಲೆದು ಅಲೆದು ಸುಸ್ತಾಗಿ ಹೋಗಿದ್ದೇವೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ವಿಜಯಾನಂದ ಕಾಶಪ್ಪನವರ್ ಅಂದ್ರೆ ಯಾರು? ಬಾರಲ್ಲಿ ಗಲಾಟೆ ಮಾಡಿಕೊಂಡನಲ್ಲ ಅವನಾ? -ವಿಜಯೇಂದ್ರ ಟಾಂಗ್
Published On - 6:02 pm, Sat, 13 February 21