ಏಪ್ರಿಲ್ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಪದಚ್ಯುತಿ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ

ಯಾವುದೇ ಪಕ್ಷದ ಹೈಕಮಾಂಡ್ ಆದರೂ ಮುಖ್ಯಮಂತ್ರಿಯನ್ನು ತೆಗೆಯುವುದಾಗಿ ಹೇಳುವುದಿಲ್ಲ. ನನಗೆ ಆರ್‌ಎಸ್ಎಸ್ ಮೂಲಗಳಿಂದಲೇ ಮಾಹಿತಿ ಬಂದಿದೆ. ಏಪ್ರಿಲ್ ಬಳಿಕ ಸಿಎಂ ಯಡಿಯೂರಪ್ಪರನ್ನು ತೆಗೆಯುತ್ತಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಏಪ್ರಿಲ್ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಪದಚ್ಯುತಿ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
Edited By:

Updated on: Apr 06, 2022 | 8:52 PM

ಮೈಸೂರು: ನನಗೆ ಆರ್‌ಎಸ್ಎಸ್ ಮೂಲಗಳಿಂದಲೇ ಮಾಹಿತಿ ಬಂದಿದೆ. ಏಪ್ರಿಲ್ ಬಳಿಕ ಸಿಎಂ ಯಡಿಯೂರಪ್ಪರನ್ನು ತೆಗೆಯುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಯಡಿಯೂರಪ್ಪ ಮುಂದುವರಿಯುತ್ತಾರೆಂದು ಕರ್ನಾಟಕಕ್ಕೆ ಬಂದಿರುವ ಅಮಿತ್ ಶಾ ಹೇಳಿದ್ದಾರೆ. ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸಲಾಗುವುದು ಎಂದು ಅವರು ಹೇಳಲು ಸಾಧ್ಯವೇ? ಎಂದು ವ್ಯಂಗ್ಯವಾಡಿದ್ದಾರೆ.

ಯಾವುದೇ ಪಕ್ಷದ ಹೈಕಮಾಂಡ್ ಆದರೂ ಮುಖ್ಯಮಂತ್ರಿಯನ್ನು ತೆಗೆಯುವುದಾಗಿ ಹೇಳುವುದಿಲ್ಲ. ಹೈಕಮಾಂಡ್ ತೆಗೆಯುತ್ತೇನೆ ಅಂದರೆ ಸರ್ಕಾರ ನಡೆಯುತ್ತಾ? ನನಗೆ ಆರ್‌ಎಸ್ಎಸ್ ಮೂಲಗಳಿಂದ ಮಾಹಿತಿ ಬಂದಂತೆ, ಸಿಎಂ ಯಡಿಯೂರಪ್ಪರನ್ನು ಏಪ್ರಿಲ್ ನಂತರ ತೆಗೆಯುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡದ ಅವಗಣನೆ

ಬೆಂಗಳೂರು: ಭದ್ರಾವತಿಯಲ್ಲಿ ಅಮಿತ್​ ಶಾ ಸಮ್ಮುಖ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಲಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮ ನಡೆದಿರುವುದು ಕರ್ನಾಟಕದಲ್ಲಿ. ಹಾಗಾಗಿ, ಕನ್ನಡ ಭಾಷಾ ಬಳಸಬೇಕಿತ್ತು. ಕನ್ನಡ ಭಾಷೆ ಬಳಸದೇ ಇರುವುದು ಅಪರಾಧ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾಪ್ರಹಾರ ಮಾಡಿದ್ದಾರೆ.

ರಾಜ್ಯದಲ್ಲಿ ಹಿಂದಿ ಹೇರಿಕೆ ಅಷ್ಟು ಸುಲಭವಲ್ಲ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಯಡಿಯೂರಪ್ಪ ಸರ್ಕಾರದ ಬಗ್ಗೆ ಅಮಿತ್ ಶಾ ಗುಣಗಾನ ವಿಚಾರವಾಗಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಅಮಿತ್ ಶಾಗೆ ಒಳ್ಳೆಯ ಸರ್ಕಾರ ಕೊಟ್ಟು ಗೊತ್ತಿಲ್ಲ. ಹೀಗಾಗಿ ಯಡಿಯೂರಪ್ಪ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಕುಟುಕಿದ್ದಾರೆ.

ಅಡಿಗಲ್ಲು ಫಲಕದಲ್ಲಿ ಕನ್ನಡ ನಿರ್ಲಕ್ಷ್ಯ; ಗೃಹ ಸಚಿವರ ಸ್ಪಷ್ಟನೆ ಬಳಿ ಕೇಳಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

Published On - 12:58 pm, Sun, 17 January 21