ಮೈಸೂರು ವಸ್ತು ಸಂಗ್ರಹಾಲಯಕ್ಕೆ ಬೆಳ್ಳಿಹಬ್ಬದ ಸಂಭ್ರಮ, ಕಾಡಿನ ರೂಪದಲ್ಲೇ ಸೃಷ್ಟಿಯಾಗಿದೆ ವಿಶೇಷ ಶೋಕೇಸ್

|

Updated on: Dec 11, 2019 | 8:38 AM

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿರುವ ವಸ್ತು ಸಂಗ್ರಹಾಲಯ ಬೆಳ್ಳಿ ಹಬ್ಬಕ್ಕೆ ತಯಾರಾಗಿದೆ. 25ನೇ ವರ್ಷದ ಸಂಭ್ರಮಕ್ಕೆ ಇಡೀ ವಸ್ತು ಸಂಗ್ರಹಾಲಯ ಹೊಸ ರೂಪ ಪಡೆದಿದ್ದು, ನವೀಕೃತ ವಸ್ತು ಸಂಗ್ರಹಾಲಯ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಹುಲಿಯ ಘರ್ಜನೆ.. ಸಿಂಹದ ಬೆಂಕಿಯಂತಹ ನೋಟ.. ಆನೆಯ ದಿಟ್ಟತನ.. ಕರಡಿ.. ಚಿರತೆ.. ನರಿ.. ಜಿಂಕೆ.. ಕಾಳಿಂಗ, ಮೊಸಳೆ ಎಲ್ಲವು ಒಂದೇ ಕಡೆ.. ಹಾಗೇ ಅಲ್ಲೇ ಇರುವ ನಶಿಸಿ ಹೋಗಿರುವ ಪ್ರಾಣಿಗಳ ಪಳೆಯುಳಿಕೆ. ಒಂದೇ ಕಲ್ಲಿನಲ್ಲಿ ಕೆತ್ತನೆ‌ ಮಾಡಿರುವ 3D ಕಲಾಕೃತಿಗಳನ್ನು ಮೈಸೂರಿನ ವಸ್ತು ಸಂಗ್ರಹಾಲಯದಲ್ಲಿ […]

ಮೈಸೂರು ವಸ್ತು ಸಂಗ್ರಹಾಲಯಕ್ಕೆ ಬೆಳ್ಳಿಹಬ್ಬದ ಸಂಭ್ರಮ, ಕಾಡಿನ ರೂಪದಲ್ಲೇ ಸೃಷ್ಟಿಯಾಗಿದೆ ವಿಶೇಷ ಶೋಕೇಸ್
Follow us on

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿರುವ ವಸ್ತು ಸಂಗ್ರಹಾಲಯ ಬೆಳ್ಳಿ ಹಬ್ಬಕ್ಕೆ ತಯಾರಾಗಿದೆ. 25ನೇ ವರ್ಷದ ಸಂಭ್ರಮಕ್ಕೆ ಇಡೀ ವಸ್ತು ಸಂಗ್ರಹಾಲಯ ಹೊಸ ರೂಪ ಪಡೆದಿದ್ದು, ನವೀಕೃತ ವಸ್ತು ಸಂಗ್ರಹಾಲಯ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಹುಲಿಯ ಘರ್ಜನೆ.. ಸಿಂಹದ ಬೆಂಕಿಯಂತಹ ನೋಟ.. ಆನೆಯ ದಿಟ್ಟತನ.. ಕರಡಿ.. ಚಿರತೆ.. ನರಿ.. ಜಿಂಕೆ.. ಕಾಳಿಂಗ, ಮೊಸಳೆ ಎಲ್ಲವು ಒಂದೇ ಕಡೆ.. ಹಾಗೇ ಅಲ್ಲೇ ಇರುವ ನಶಿಸಿ ಹೋಗಿರುವ ಪ್ರಾಣಿಗಳ ಪಳೆಯುಳಿಕೆ. ಒಂದೇ ಕಲ್ಲಿನಲ್ಲಿ ಕೆತ್ತನೆ‌ ಮಾಡಿರುವ 3D ಕಲಾಕೃತಿಗಳನ್ನು ಮೈಸೂರಿನ ವಸ್ತು ಸಂಗ್ರಹಾಲಯದಲ್ಲಿ ನೋಡಬಹುದು.

ಸಿದ್ಧಾರ್ಥ ನಗರದಲ್ಲಿರುವ ಪ್ರಾದೇಶಿಕ ಪ್ರಾಕೃತಿಕ ಇತಿಹಾಸ ವಸ್ತುಸಂಗ್ರಹಾಲಯ ಇದೀಗಾ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. 25 ವರ್ಷ ತುಂಬಿದ ಹಿನ್ನೆಲೆಯಲ್ಲಿ‌ ಸಂಗ್ರಹಾಲಯವನ್ನು ನವೀಕರಿಸಲಾಗಿದೆ. ಸದ್ಯ ಸಂಗ್ರಹಾಲಯ ಜನಾಕರ್ಷಕವಾಗಿದ್ದು, ಅದರಲ್ಲೂ ಸಂಗ್ರಹಾಲಯಕ್ಕೆ ಭೇಟಿ ನೀಡಿದ್ರೆ ನಿಜವಾದ ಕಾಡಿಗೆ ಭೇಟಿ ಕೊಟ್ಟ ಅನುಭವ ಆಗುತ್ತೆ.‌

ಇಲ್ಲಿರುವ ಪ್ರಾಣಿಗಳು ನೋಡಲು ನಿಜವಾದ ಪ್ರಾಣಿಗಳ ರೀತಿ ಕಂಡ್ರು ಇದ್ಯಾವುದಕ್ಕು ಜೀವ ಇಲ್ಲ. ಆದ್ರೆ‌, ನಿಜವಾದ ಪ್ರಾಣಿಗಳ ಚರ್ಮಗಳಿಂದಲೆೇ ತಯಾರಾಗಿರುವ ಪ್ರಾಣಿಗಳು. ಪ್ರಾಣಿಗಳ ಚರ್ಮಗಳನ್ನ ಶೇಖರಿಸಿ ವಿಶೇಷ ಶೋಕೇಸ್ ಮಾಡಿದ್ದು, ಶೋಕೇಸ್‌ನ್ನ ಕಾಡಿನ ರೂಪದಲ್ಲೇ ಮರು ಸೃಷ್ಟಿ ಮಾಡಲಾಗಿದೆ.

ಇದಷ್ಟೆೇ ಅಲ್ಲದೇ, ವಸ್ತು ಸಂಗ್ರಹಾಲಯದ ಹೊರ ಆವರಣದಲ್ಲಿ ಒಂದೇ ಕಲ್ಲಿನಲ್ಲಿ ಕೆತ್ತನೆ‌ ಮಾಡಿರುವ ತ್ರೀಡಿ ಕಲಾಕೃತಿಗಳು ಆಕರ್ಷಕವಾಗಿದೆ. ಹಾವು, ಗೋಸುಂಬೆ ಹೀಗೆ ಈ ಎಲ್ಲವು ಜನರನ್ನ ತನ್ನತ್ತ ಸೆಳೆಯುತ್ತಿದೆ. ಇದೀಗಾ ಇಲ್ಲಿಗೆ ಪ್ರತಿದಿನ ನೂರಾರು ಮಂದಿ ಭೇಟಿ ನೀಡಿ ವಸ್ತು ಸಂಗ್ರಹಾಲಯ ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ‌.