ಬಾಗಲಕೋಟೆಯಲ್ಲಿ ಸಾಮೂಹಿಕ ಹೋಳಿ ಆಚರಣೆಗೆ ನಿರ್ಬಂಧ

ಕೊವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಹೋಳಿ ಆಚರಣೆಯನ್ನು ಸರಳವಾಗಿ ಆಚರಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.

ಬಾಗಲಕೋಟೆಯಲ್ಲಿ ಸಾಮೂಹಿಕ ಹೋಳಿ ಆಚರಣೆಗೆ ನಿರ್ಬಂಧ
ಬಾಗಲಕೋಟೆಯಲ್ಲಿ ಈ ಬಾರಿಯ ಸಾಮೂಹಿಕ ಹೋಳಿ ಆಚರಣೆಗೆ ನಿರ್ಬಂಧ

Updated on: Mar 21, 2021 | 4:56 PM

ಬಾಗಲಕೋಟೆ: ಕೊವಿಡ್ ಎರಡನೇ ಅಲೆ ಎಲ್ಲೆಡೆ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಾರ್ಚ್ 28ರಿಂದ ಏಪ್ರಿಲ್ 1ವರೆಗೆ ನಡೆಯಲಿರುವ ಐತಿಹಾಸಿಕ ಹೋಳಿ ಹಬ್ಬ ಆಚರಣೆಯನ್ನು ಸರಳವಾಗಿ ಆಚರಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ ಎಂದು ಎಸ್ಪಿ ಲೋಕೇಶ್ ಜಗಲಾಸರ್ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಕುರಿತಂತೆ ಮಾತನಾಡುತ್ತಿದ್ದ ಎಸ್ಪಿ ಲೋಕೇಶ್ ಜಗಲಾಸರ್, ಜಿಲ್ಲಾಡಳಿತ ಹೋಳಿ ಆಚರಣಾ ಸಮಿತಿಯೊಂದಿಗೆ ಸಭೆ ಮಾಡಲಾಗಿದೆ. ಕೊರೊನಾ ಮತ್ತೆ ಎಲ್ಲೆಡೆ ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಹೋಳಿ ಸರಳ ಆಚರಣೆ ಬಗ್ಗೆ ಚರ್ಚಿಸಲಾಗಿದೆ. ಸಮಿತಿಯವರು ಸ್ವಯಂ ಪ್ರೇರಿತರಾಗಿ ಸರಳವಾಗಿ ಆಚರಣೆಗೆ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮಾತನಾಡಿದ್ದಾರೆ.

ಹೋಳಿ ಹಬ್ಬದ ದಿನ ಸಾಮೂಹಿಕವಾಗಿ ಆಯೋಜನೆ ಹಾಗೂ ಬಣ್ಣದ ಬಂಡಿ ಮೂಲಕ ಬಣ್ಣದಾಟಕ್ಕೆ ಅವಕಾಶ ಇಲ್ಲ. ಕೊವಿಡ್ ಮಾರ್ಗಸೂಚಿ ಅನ್ವಯಿಸಿ ಕೇವಲ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಪೂಜೆಗೆ ಅವಕಾಶ ನೀಡಲಾಗಿದೆ. ಕುಟುಂಬಕ್ಕೆ ಸೀಮಿತವಾಗಿ ಬಣ್ಣದಾಟಕ್ಕೆ ಅವಕಾಶ ಕಲ್ಪಿಸಿ ಸೂಚಿಸಲಾಗಿದೆ.

ಇದನ್ನೂ ಓದಿ: https://tv9kannada.com/karnataka/bagalkot/government-agreed-to-celebrate-holi-at-bagalkot-202160.html

Published On - 4:55 pm, Sun, 21 March 21