ಮಂಗಳೂರು: ಉಜಿರೆ ಬಾಲಕ ಅನುಭವ್ ಕಿಡ್ನ್ಯಾಪ್ ಪ್ರಕರಣ ಸುಖಾಂತ್ಯ ಕಂಡಿದೆ. ಬಾಲಕ ಅನುಭವ್ ಕಿಡ್ನ್ಯಾಪ್ ಮಾಡಿದ್ದ ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೂರ್ನಹೊಸಳ್ಳಿಯಲ್ಲಿ ಕಿಡ್ನ್ಯಾಪರ್ಸ್ ಸೇರಿ 6 ಜನ ಅರೆಸ್ಟ್ ಆಗಿದ್ದಾರೆ.
ಕಿಡ್ನ್ಯಾಪರ್ಸ್ ಕೊರ್ನಹೊಸಳ್ಳಿಯ ಮಂಜುನಾಥ್ ಎಂಬುವರ ಮನೆಯೊಂದರಲ್ಲಿ ಅನುಭವ್ನನ್ನು ಬಚ್ಚಿಟ್ಟಿದ್ದರು. ಸದ್ಯ ಕೋಲಾರ ಎಸ್‌ಪಿ ಕಾರ್ತಿಕ್ ರೆಡ್ಡಿ ನೆರವಿನಿಂದ ಮಂಗಳೂರಿನ ವಿಶೇಷ ಪೊಲೀಸ್ ತಂಡದ ಕಾರ್ಯಚರಣೆಯಿಂದ ಆರೋಪಿಗಳನ್ನು ಬಂಧಿಸಿ ಕಿಡ್ನ್ಯಾಪ್ ಆಗಿದ್ದ ಉಜಿರೆಯ ಬಾಲಕ ಅನುಭವ್ ರಕ್ಷಣೆ ಮಾಡಲಾಗಿದೆ. ಬಿ.ಹನುಮಂತ(21), ಗಂಗಾಧರ್(25) ಖಾಸಗಿ ಕಂಪನಿಯ ಉದ್ಯೋಗಿ ಹೆಚ್.ಪಿ.ರಂಜಿತ್(22) ಮೆಕ್ಯಾನಿಕ್ ಕಮಲ್(23), ಟೈಲರ್ ಮಂಜುನಾಥ್(24) ಪೇಂಟರ್ ಮಹೇಶ್(26) ಸೇರಿ ಒಟ್ಟು 6 ಆರೋಪಿಗಳು ಅರೆಸ್ಟ್ ಆಗಿದ್ದಾರೆ.
ಪ್ರಕರಣದ ಹಿನ್ನೆಲೆ:
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಬಾಲಕನನ್ನು ಅಪಹರಿಸಿ, 17 ಕೋಟಿ ರೂಪಾಯಿಗೆ ಬಾಲಕನ ತಂದೆ ಬಿಜೋಯ್ಗೆ ಕರೆಮಾಡಿ ಬೇಡಿಕೆ ಇಡಲಾಗಿತ್ತು. ಪ್ರಕರಣ ಸಂಬಂಧ ಕೇಸ್ ದಾಖಲಾಗಿ ಪೊಲೀಸರು ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ ಬಾಲಕ ಅನುಭವ್ ಪೋಷಕರಿಗೆ ಕಿಡ್ನ್ಯಾಪರ್ಸ್ ಮೆಸೇಜ್ ಮಾಡಿ ಪೊಲೀಸರಿಗೆ ದೂರು ನೀಡದಂತೆ ಎಚ್ಚರಿಕೆ ನೀಡಿದ್ದರು. ದೂರು ನೀಡಿದರೆ ಅನುಭವಿಸುತ್ತೀರಿ ಎಂದು ಮೆಸೇಜ್ ಹಾಕಿದ್ದರು. ಬಳಿಕ 10 ಕೋಟಿ ಮೌಲ್ಯದ ಬಿಟ್ ಕಾಯಿನ್‌ಗೆ ಒತ್ತಡ ಹಾಕಿದ್ದರು. ನಂತರ ಪೊಲೀಸರು ಬಾಲಕನ ಪತ್ತೆಗೆ 5 ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿ ಮೊದಲು ಮೂವರನ್ನು ಬಂಧಿಸಿ ಅವರ ವಿಚಾರಣೆ ನಡೆಸಿ ಬಳಿಕ ಕೊರ್ನಹೊಸಳ್ಳಿಯಲ್ಲಿ ನಾಲ್ವರು ಕಿಡ್ನ್ಯಾಪರ್ಸ್ ಅರೆಸ್ಟ್ ಮಾಡಲಾಗಿದೆ. ಈ ರೀತಿ ಒಟ್ಟು 6 ಆರೋಪಿಗಳು ಕೋಲಾರ ಮಾಸ್ತಿ ಠಾಣೆಯಲ್ಲಿದ್ದಾರೆ.
ಉಜಿರೆ ಆಟೋ ಚಾಲಕ ನೀಡಿದ ಅದೊಂದು ಮಾಹಿತಿ:
ಒಂದು ವರ್ಷದಿಂದಲೇ ಈ ಕಿಡ್ನ್ಯಾಪ್ ಬಗ್ಗೆ ಪ್ಲಾನ್ ಮಾಡಲಾಗಿದೆ. ಒಂದು ವರ್ಷದ ಹಿಂದೆ ಧರ್ಮಸ್ಥಳಕ್ಕೆ ಬಂದಿದ್ದ ಕಿಡ್ನ್ಯಾಪರ್ಸ್ ಅಲ್ಲಿ ಆಟೋದಲ್ಲಿ ಪ್ರಯಾಣಿಸಿ ಆಟೋ ಡ್ರೈವರ್ ಪರಿಚಯ ಮಾಡಿಕೊಂಡು ಆತನ ಬಳಿ ಉಜಿರೆ ಮತ್ತು ಈ ಕುಟುಂಬದ ಬಗ್ಗೆ ಮಾಹಿತಿ ಕಲೆ ಹಾಕಿದ್ದರಂತೆ. ಕಿಡ್ನ್ಯಾಪ್ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಪೊಲೀಸರಿಗೆ ಆಟೋ ಚಾಲಕ ಮಾಹಿತಿ ನೀಡಿದ್ದಾನೆ. ಬಳಿಕ ಆತ ನೀಡಿದ ಸುಳಿವಿನ ಮೇರೆಗೆ ಪೊಲೀಸರು ಐದು ತಂಡ ರಚನೆ ಮಾಡಿ ಕಿಡ್ನ್ಯಾಪರ್ಸ್ ಪತ್ತೆ ಹಚ್ಚಲಾಗಿದೆ.
ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ:
ಕೋಮಲ್ ಹಾಗೂ ಮಹೇಶ್ ಸ್ನೇಹಿತರು ಸೇರಿ ಅನುಭವ್ ಕಿಡ್ನ್ಯಾಪ್ ಮಾಡಿದ್ದರು. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಟ್ಯಾಂಕರ್ ಡ್ರೈವರ್ ಆಗಿದ್ದ ಮಹೇಶ್ಗೆ ಕೋಮಲ್ ಪರಿಚಯ. ಕಳೆದ ರಾತ್ರಿಯಷ್ಟೇ ಕೋಲಾರದ ಕೂರ್ನಹೊಸಳ್ಳಿ ಗ್ರಾಮಕ್ಕೆ ಮಗುವಿನೊಂದಿಗೆ ಕಿಡ್ಯಾಪರ್ಸ್ ಬಂದಿದ್ದರು. ಈ ವೇಳೆ ಕಿಡ್ನ್ಯಾಪರ್ಸ್ ಗ್ರಾಮದ ಮಂಜುನಾಥ್ ಎಂಬುವರ ಮೊಬೈಲ್ ಬಳಸಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಟ್ರ್ಯಾಕ್ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮಾಲೂರು ಕೋರ್ಟ್ಗೆ ಅನುಭವ್ ಹಾಜರ್:
ಉಜಿರೆಯಲ್ಲಿ 8 ವರ್ಷದ ಬಾಲಕನ ಕಿಡ್ನಾಪ್ ಪ್ರಕರಣ: ಮೂವರು ಶಂಕಿತರು ಪೊಲೀಸ್ ವಶಕ್ಕೆ
Published On - 7:03 am, Sat, 19 December 20