ಗ್ರಾ.ಪಂ ಎಲೆಕ್ಷನ್​ ವೇಳೆ ಮದ್ಯ ಹಂಚದಂತೆ ತಡೆದಿದ್ದಕ್ಕೆ ಪೊಲೀಸರ ಮೇಲೆ ಹಲ್ಲೆ: 6 ಮಂದಿ ಅರೆಸ್ಟ್​

|

Updated on: Dec 22, 2020 | 5:49 PM

ಗ್ರಾಮ ಪಂಚಾಯತಿ ಚುನಾವಣೆ ವೇಳೆ ಮದ್ಯ ಹಂಚದಂತೆ ತಡೆದಿದ್ದಕ್ಕೆ ಪೊಲೀಸರ ಮೇಲೆ ಹಲ್ಲೆ ನಡೆದಿರುವ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ರುದ್ರಪಟ್ಟಣದಲ್ಲಿ ನಡೆದಿದೆ.

ಗ್ರಾ.ಪಂ ಎಲೆಕ್ಷನ್​ ವೇಳೆ ಮದ್ಯ ಹಂಚದಂತೆ ತಡೆದಿದ್ದಕ್ಕೆ ಪೊಲೀಸರ ಮೇಲೆ ಹಲ್ಲೆ: 6 ಮಂದಿ ಅರೆಸ್ಟ್​
ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ
Follow us on

ಹಾಸನ: ಗ್ರಾಮ ಪಂಚಾಯತಿ ಚುನಾವಣೆ ವೇಳೆ ಮದ್ಯ ಹಂಚದಂತೆ ತಡೆದಿದ್ದಕ್ಕೆ ಪೊಲೀಸರ ಮೇಲೆ ಹಲ್ಲೆ ನಡೆದಿರುವ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ರುದ್ರಪಟ್ಟಣದಲ್ಲಿ ನಡೆದಿದೆ.

ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ ಮತಗಟ್ಟೆ ಬಳಿ ಕೆಲವರು ಊಟ ಹಾಗೂ ಮದ್ಯವನ್ನು ಹಂಚುತ್ತಿದ್ದರು. ಇದನ್ನು ಗಮನಿಸಿದ ಪೊಲೀಸ್ ತಂಡ ಮದ್ಯ ಹಂಚದಂತೆ ತಡೆಯಲು ಮುಂದಾದರು. ಈ ವೇಳೆ ಸಿಟ್ಟಿಗೆದ್ದ ಕಿಡಿಗೇಡಿಗಳು PSI ಅಜಯ್ ಕುಮಾರ್​ ಸೇರಿದಂತೆ  ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

PSI ಅಜಯ್​ ಕುಮಾರ್​ನ  ಹಿಡಿದು ಎಳೆದಾಡಿರುವ ಜೊತೆಗೆ ಪೊಲೀಸ್ ಜೀಪ್ ಮೇಲೆ ಹತ್ತಿ ಕಿಡಿಕೇಡಿಗಳು ದರ್ಪ ಮೆರೆದಿದ್ದಾರೆ. ಸದ್ಯ, ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳಕ್ಕೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಇನ್ನು, ಪ್ರಕರಣ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಗ್ರಾಮದ ಹಲವರ ವಿರುದ್ದ ದೂರು ದಾಖಲಾಗಿದ್ದು, ಆರು ಜನರನ್ನು ಬಂಧಿಸಲಾಗಿದೆ.

ಗ್ರಾಮ ಪಂಚಾಯತಿ ಎಲೆಕ್ಷನ್​ನಲ್ಲಿ ಅವಿರೋಧವಾಗಿ ಆಯ್ಕೆಯಾದವರಿಗೆ ಶುರುವಾಯ್ತು ಢವ ಢವ

Published On - 5:41 pm, Tue, 22 December 20