ಧಾರವಾಡ ಜಿಲ್ಲಾಡಳಿತದಿಂದಲೇ ಕನ್ನಡದ ಕಗ್ಗೊಲೆ: ಚುನಾವಣಾ ಪಾಸ್​ನಲ್ಲಿ ಕನ್ನಡ ಪದಗಳ ತಪ್ಪು ಬಳಕೆ

ಧಾರವಾಡ ಜಿಲ್ಲಾಡಳಿತ ಹೀಗೆ ಕನ್ನಡವನ್ನು ಕಗ್ಗೊಲೆ ಮಾಡುತ್ತಿರುವುದು ಇದು ಮೊದಲ ಬಾರಿಯಲ್ಲ. ಧಾರವಾಡದಲ್ಲಿ ನಡೆದಿದ್ದ 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಅನೇಕ ತಪ್ಪುಗಳನ್ನು ಮಾಡಿತ್ತು. ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದಿದ್ದ ಸಮ್ಮೇಳನದ ಮುಖ್ಯದ್ವಾರದಲ್ಲಿ ಅಳವಡಿಸಿದ್ದ ಬ್ಯಾನರ್​ಗಳಲ್ಲಿಯೇ ಅನೇಕ ತಪ್ಪುಗಳಿತ್ತು.

ಧಾರವಾಡ ಜಿಲ್ಲಾಡಳಿತದಿಂದಲೇ ಕನ್ನಡದ ಕಗ್ಗೊಲೆ: ಚುನಾವಣಾ ಪಾಸ್​ನಲ್ಲಿ ಕನ್ನಡ ಪದಗಳ ತಪ್ಪು ಬಳಕೆ
ಧಾರವಾಡ ಜಿಲ್ಲಾಡಳಿತ ಕಚೇರಿಯ ಹೊರಾಂಗಣ ದೃಶ್ಯ
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Dec 22, 2020 | 4:30 PM

ಧಾರವಾಡ: ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡವೇ ಇರಬೇಕು ಎನ್ನುವ ನಿಯಮವಿದೆ. ಅಲ್ಲದೇ ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸಬೇಕು ಎನ್ನುವ ನಿಯಮವೂ ಇದೆ. ಹೀಗಿರುವಾಗ ಕನ್ನಡ ಬಳಸುವ ಅನೇಕ ಕಡೆಗಳಲ್ಲಿ ಸಿಬ್ಬಂದಿ ತಪ್ಪು ಮಾಡುವುದು ಕಂಡು ಬರುತ್ತಿರುವುದು ಹೊಸದೇನಲ್ಲ. ಆದರೆ ಇದೀಗ ಧಾರವಾಡ ಜಿಲ್ಲಾಡಳಿತ ಸ್ವತಃ ತಾನೇ ಕನ್ನಡದ ಕಗ್ಗೊಲೆ ಮಾಡುತ್ತಿದೆ. ಇದಕ್ಕೆ ಕಾರಣವಾಗಿದ್ದು ಗ್ರಾಮ ಪಂಚಾಯತಿ ಚುನಾವಣೆಗಾಗಿ ಪತ್ರಕರ್ತರಿಗೆ ನೀಡಲಾಗಿರುವ ಪಾಸ್​ಗಳು.

ಚುನಾವಣಾ ಪಾಸ್​​ನಲ್ಲಿ ಕನ್ನಡದ ತಪ್ಪು ಬಳಕೆ

ಮಾಧ್ಯಮದವರಿಗೆ ನೀಡಿದ ಪಾಸ್​ಗಳಲ್ಲಿ ಕನ್ನಡದ ಕಗ್ಗೊಲೆ: ಹೌದು ಪಾಸ್ ಮೇಲೆ ಬರೆದಿರುವ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ಬದಲಿಗೆ ‘ಚುಣಾವಣಿಎಂದು ಮುದ್ರಿತವಾಗಿದೆ. ಇನ್ನು ಪಾಸ್​ನ ಹಿಂಬದಿಯಲ್ಲಿ ಮುದ್ರಿತವಾದ ಷರತ್ತುಗಳಲ್ಲಿ ಮತದಾನದ ದಿನ ಎನ್ನುವುದನ್ನು ಮೇಲಿಂದ ಮೇಲೆ ಎರಡು ಬಾರಿ ಮುದ್ರಿಸಲಾಗಿದೆ. ಈ ರೀತಿ ಮಾಡಲು ಕಾರಣವೇನು ಎನ್ನುವುದು ಮಾತ್ರ ಗೊತ್ತಾಗಿಲ್ಲ. ಇನ್ನು ಮತಗಟ್ಟೆಗಳಲ್ಲಿ ಎನ್ನುವ ಪದ ‘ಮತಟ್ಟೆಗಗಳಲ್ಲಿಎಂದು ಮುದ್ರಿತವಾಗಿದೆ

ಚುನಾವಣಾ ಪಾಸ್​​ನಲ್ಲಿ ಕನ್ನಡದ ತಪ್ಪು ಬಳಕೆ ಮಾಡಿರುವ ಚಿತ್ರಣ

ಇದಲ್ಲದೇ ಚಿತ್ರವನ್ನು ತೆಗೆಯಲು ಎಂಬ ಪದದ ಬದಲು ‘ತಗೆಯಲುಎಂದು ಮುದ್ರಿಸಿದ್ದಾರೆ. ಇನ್ನು ಪೂರ್ವಸಿದ್ಧತೆಎನ್ನುವ ಪದ ಪೂರ್ವಸಿದ್ದತೆಆಗಿದೆ. ‘ಛಾಯಾಚಿತ್ರಎನ್ನುವ ಪದ ಛಾಯಚಿತ್ರಆಗಿದೆ. ಹೀಗೆ ಒಂದೆರಡು ಪ್ಯಾರಾಗಳಲ್ಲಿಯೇ ಇಷ್ಟೊಂದು ತಪ್ಪುಗಳನ್ನು ಮಾಡಲಾಗಿದ್ದು, ಜಿಲ್ಲಾಡಳಿತದ ಈ ಕನ್ನಡ ಕಗ್ಗೊಲೆ ನೋಡಿ ಕನ್ನಡ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ

ಇದು ಮೊದಲೇನಲ್ಲ! ಧಾರವಾಡ ಜಿಲ್ಲಾಡಳಿತ ಹೀಗೆ ಕನ್ನಡವನ್ನು ಕಗ್ಗೊಲೆ ಮಾಡುತ್ತಿರುವುದು ಇದು ಮೊದಲ ಬಾರಿಯಲ್ಲ. ಧಾರವಾಡದಲ್ಲಿ ನಡೆದಿದ್ದ 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೇ ಅನೇಕ ತಪ್ಪುಗಳನ್ನು ಮಾಡಿತ್ತು. ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದಿದ್ದ ಸಮ್ಮೇಳನದ ಮುಖ್ಯದ್ವಾರದಲ್ಲಿ ಅಳವಡಿಸಿದ್ದ ಬ್ಯಾನರ್​ಗಳಲ್ಲಿಯೇ ಅನೇಕ ತಪ್ಪುಗಳಿತ್ತು.

ಕನ್ನಡ ಭಾಷೆಯ ಉಳಿವಿಗಾಗಿ ಮಾಡುತ್ತಿರುವ ಸಮ್ಮೇಳನದಲ್ಲಿಯೇ ಅನೇಕ ತಪ್ಪುಗಳನ್ನು ಮಾಡಿತ್ತು. ನಂತರದಲ್ಲಿ ಈ ಬಗ್ಗೆ ಟಿವಿ 9 ವರದಿ ಮಾಡಿದ ಹಿನ್ನೆಲೆಯಲ್ಲಿ ಅವುಗಳನ್ನು ಸರಿಪಡಿಸಲಾಗಿತ್ತು. ಇದೀಗ ಚುನಾವಣೆಯಂತಹ ಗಂಭೀರ ವಿಚಾರದಲ್ಲಿಯೂ ಜಿಲ್ಲಾಡಳಿತ ಇಂತಹ ತಪ್ಪುಗಳನ್ನು ಮಾಡಿರುವುದು ವಿಪರ್ಯಾಸ ಸಂಗತಿಯಾಗಿದೆ.

ಕನ್ನಡ ಭಾಷಾ ಬೆಳವಣಿಗೆಗೆ ಚಲನಶೀಲ ಪಾರಿಭಾಷಿಕ ಕೋಶ ನಡೆಸುವ ಪ್ರಾಧಿಕಾರ ಬೇಕು

ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ