ಗ್ರಾ. ಪಂ. ಚುನಾವಣೆ: ಮತದಾರರಿಗೆ ತಯಾರಿಸಿದ್ದ ಬಾಡೂಟ ಜಪ್ತಿ ಮಾಡಿದ ಚುನಾವಣಾ ಅಧಿಕಾರಿಗಳು
ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಸ್ಥಳದಲ್ಲಿದ್ದ 30 ಕ್ಕೂ ಹೆಚ್ಚುಜನ ಪರಾರಿಯಾಗಿದ್ದಾರೆ. ಇನ್ನೂ ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಗ್ರಾಮದ ತೋಟವೊಂದರಲ್ಲಿ ಈ ಊಟದ ವ್ಯವಸ್ಥೆ ಮಾಡಲಾಗಿತ್ತು.
ಶಿವಮೊಗ್ಗ: ಇಂದು ರಾಜ್ಯದಲ್ಲಿ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಗೆ ಮತದಾನ ನಡೆಯುತ್ತಿದ್ದು ಚುನಾವಣೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಮತ ಚಲಾಯಿಸಿದ ಮತದಾರರಿಗಾಗಿ ತಯಾರಿಸಿದ್ದ ಬಾಡೂಟವನ್ನು ಜಪ್ತಿ ಮಾಡಿರುವ ಘಟನೆ ಶಿವಮೊಗ್ಗ ತಾಲೂಕಿನ ಹೊಸಹಳ್ಳಿಯಲ್ಲಿ ನಡೆದಿದೆ.
ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಗ್ರಾ.ಪಂ. ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು 150 ಕ್ಕೂ ಹೆಚ್ಚು ಜನರಿಗೆ ಪಲಾವ್ ಹಾಗೂ ಮಾಂಸಹಾರಿ ಊಟ ರೆಡಿ ಮಾಡಲಾಗಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಚುನಾವಣೆ ಅಧಿಕಾರಿಗಳು ಊಟಕ್ಕೆ ಬಳಸಿದ ಪಾತ್ರೆ ಮತ್ತು ಇತರೆ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ.
ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಸ್ಥಳದಲ್ಲಿದ್ದ 30 ಕ್ಕೂ ಹೆಚ್ಚುಜನ ಪರಾರಿಯಾಗಿದ್ದಾರೆ. ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಗ್ರಾಮದ ತೋಟವೊಂದರಲ್ಲಿ ಈ ಊಟದ ವ್ಯವಸ್ಥೆ ಮಾಡಲಾಗಿತ್ತು. ವೆಜ್ ಹಾಗೂ ನಾನ್ ವೆಜ್ ಆಹಾರ ಹಾಗೂ ಅಡುಗೆಗೆ ಬಳಿಸಿದ ಪಾತ್ರೆ ಹಾಗೂ ಇತರೆ ಸಾಮಾಗ್ರಿಗಳ ಚುನಾವಣೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆ: ಶತಾಯುಷಿ ಮಹಿಳೆಯರಿಂದ ಮತ ಚಲಾವಣೆ.. ಊರುಗೋಲಾದ ಸಂಬಂಧಿಕರು!