ನೆದರಲ್ಯಾಂಡ್ಸ್ನಿಂದ ಸಿಲಿಕಾನ್ ಸಿಟಿಗೆ.. ಬಟ್ಟೆಗಳಲ್ಲಿ ಮಾದಕ ವಸ್ತುಗಳನ್ನ ತರಿಸುತ್ತಿದ್ದ ಕಿಲಾಡಿ ಜೋಡಿ ಅರೆಸ್ಟ್
ಬಟ್ಟೆಗಳಲ್ಲಿ ಮಾದಕ ವಸ್ತುಗಳನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಎನ್ಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಮಾದಕ ವಸ್ತು ಜಾಲದ ಜಾಡು ಹಿಡಿದು ಹೊರಟ ಅಧಿಕಾರಿಗಳು ರಾಮ್ಲಾ ಷಡಾಫಿನ್ನಾಸ್ಸಿ ಹಾಗೂ ಇಮ್ಯಾನ್ಯುವಲ್ ಮೈಕಲ್ ಎಂಬ ಇಬ್ಬರು ಖತರ್ನಾಕ್ ಕಿಲಾಡಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು: ಬಟ್ಟೆಗಳಲ್ಲಿ ಮಾದಕ ವಸ್ತುಗಳನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು NCB ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಮಾದಕ ವಸ್ತು ಜಾಲದ ಜಾಡು ಹಿಡಿದು ಹೊರಟ ಅಧಿಕಾರಿಗಳು ರಾಮ್ಲಾ ಷಡಾಫಿನ್ನಾಸ್ಸಿ ಹಾಗೂ ಇಮ್ಯಾನ್ಯುವಲ್ ಮೈಕಲ್ ಎಂಬ ಇಬ್ಬರು ಖತರ್ನಾಕ್ ಕಿಲಾಡಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ನೆದರಲ್ಯಾಂಡ್ಸ್ನಿಂದ ಬೆಂಗಳೂರಿಗೆ ಮಾದಕ ವಸ್ತುಗಳನ್ನು ತರಿಸುತ್ತಿದ್ದರು ಎಂದು ತಿಳಿದುಬಂದಿದೆ. ಪಾರ್ಸೆಲ್ ಮೂಲಕ ಬಂದ ವಸ್ತುಗಳನ್ನು ಚಾಮರಾಜಪೇಟೆಯ ಫಾರಿನ್ ಪೋಸ್ಟ್ ಆಫೀಸ್ಗೆ ತರಿಸಿಕೊಂಡು ನಂತರ ತಮಗೆ ಬೇಕಾದೆಡೆಗೆ ಸಾಗಿಸುತ್ತಿದ್ದರು. ಹೀಗೆ ಪಾರ್ಸೆಲ್ ಪಡೆಯಲು ಬಂದವರು ಈಗ NCB ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಬಂಧಿತ ಆರೋಪಿಗಳಿಂದ 3 ಸಾವಿರ MDMA ಮಾತ್ರೆ ಹಾಗೂ 240 ಗ್ರಾಂ ಕೊಕೇನ್ ಜಪ್ತಿ ಮಾಡಲಾಗಿದೆ. ಇಬ್ಬರು ಆರೋಪಿಗಳನ್ನೂ ವಶಕ್ಕೆ ಪಡೆದಿರುವ NCB ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಡ್ರಗ್ ಪ್ರಕರಣ: ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್ಗೆ ಸಮನ್ಸ್