ಮಂಡ್ಯ: ಮನ್ಮುಲ್ನಲ್ಲಿ ನೀರು ಮಿಶ್ರಿತ ಹಾಲು ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿ 6 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇಂದು ಎಸ್.ಟಿ.ಸೋಮಶೇಖರ್ ಅವರು ಮದ್ದೂರಿನ ಗೆಜ್ಜಲಗೆರೆ ಡೈರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಹಾಲಿಗೆ ನೀರು ಬೆರೆಸಿದ ಪ್ರಕರಣಕ್ಕೆ ಮಾತನಾಡಿದ ಅವರು ಈಗಾಗಲೇ ಈ ವಿಚಾರದಲ್ಲಿ ತುಷಾರ್ ರವರು ಪ್ರಾಥಮಿಕವಾಗಿ ಮತ್ತು ಪ್ರತ್ಯಕ್ಷವಾಗಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ ಎಂದರು.
ಕಾರ್ಯದರ್ಶಿಗಳು ಮುಖ್ಯಮಂತ್ರಿಗಳಿಗೆ ಪ್ರಾಥಮಿಕ ಟಿಪ್ಪಣಿಯನ್ನು ನೀಡಿದ್ದಾರೆ ಇದರ ಕುರಿತು ವಿಚಾರಣೆ ಮಾಡುವುದನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು. ಈಗಾಗಲೇ ಆರು ಜನರನ್ನು ಅಮಾನತುಗೊಳಿಸಲಾಗಿದೆ. ಮ್ಯಾನೇಜರ್ ರವರನ್ನು ಸಹ ವರ್ಗಾವಣೆ ಮಾಡಿ ಬೇರೆ ಎಂ.ಡಿ ಯವರನ್ನು ನಿಯೋಜಿಸುವುದಾಗಿದೆ ಎಂದು ತಿಳಿಸಿದರು. ಸಹಕಾರ ಇಲಾಖೆಯ 64ರ ತನಿಖೆ ನಡೆಯುತ್ತಿದೆ. 2-3 ದಿನದಲ್ಲಿ ಪ್ರಕರಣದ ಸಂಪೂರ್ಣ ವರದಿ ಬರಲಿದೆ. ಎಷ್ಟು ವರ್ಷದಿಂದ ಹಗರಣ ನಡೆದಿದೆ ಎಂದು ತಿಳಿಯಬೇಕು. ಬಳಿಕ ಯಾವ ಸಂಸ್ಥೆಯಿಂದ ತನಿಖೆ ಎಂದು ಸಿಎಂ ನಿರ್ಧರಿಸ್ತಾರೆ. ಎಷ್ಟೇ ಪ್ರಭಾವಿತರಿದ್ದರೂ ತಪ್ಪು ಯಾರೇ ಮಾಡಿದ್ರೂ ಕಠಿಣ ಕ್ರಮಕ್ಕೆ ಸಿಎಂ ಸೂಚಿಸಿದ್ದಾರೆ. ರೈತರ ಸಂಸ್ಥೆಗೆ ಅನ್ಯಾಯವಾಗಬಾರದು. 14 ಒಕ್ಕೂಟಗಳಲ್ಲೂ ಟ್ಯಾಂಕರ್ ಪರಿಶೀಲನೆ ನಡೆಸಲು ಚಿಂತನೆ ನಡೆಸಲಾಗಿದೆ.
ಎಷ್ಟು ಕೋಟಿ ಲಾಸ್ ಆಗಿದೆ, ಕಾರಣ ಯಾರು, ಯಾರಿಂದ ರಿಕವರಿ ಮಾಡಬೇಕು ಎಂದು ಸಂಪೂರ್ಣ ವರದಿ ಬರುತ್ತದೆ. ವರದಿ ಬಂದ ಬಳಿಕ ಆಡಳಿತ ಮಂಡಳಿ ಕೈವಾಡ ಇದಿಯೋ ಇಲ್ಲವೊ ಎಂಬ ಬಗ್ಗೆ ತಿಳಿಯಲಿದೆ. ಆಗ ಆಡಳಿತ ಮಂಡಳಿಯನ್ನ ಸೂಪರ್ ಸೀಡ್ ಮಾಡುವ ಬಗ್ಗೆ ಸರ್ಕಾರ ನಿರ್ಧರಿಸಲಿದೆ. ಬೆಂಗಳೂರಿನಲ್ಲಿ ಇದೇ ರೀತಿ ಹಗರಣ ನಡೆದಿದೆ ಎಂಬ ಮಾತು ಕೇಳಿಬಂದಿತ್ತು. ಅಲ್ಲಿ ಬ್ಲ್ಯಾಕ್ ಲಿಸ್ಟ್ ಮಾಡಿ ಕಳುಹಿಸಲಾಗಿದೆ. 14 ಒಕ್ಕೂಟಗಳಲ್ಲೂ ಟ್ಯಾಂಕರ್ ಪರಿಶೀಲನೆ ನಡೆಸಲು ಚಿಂತನೆ ನಡೆಸಲಾಗಿದೆ. ಯಾವುದೇ ರಾಜಕೀಯ ಒತ್ತಡ ಇಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಾಶ್ವತ ಪರಿಹಾರ ಕೊಡುವುದರ ಬಗ್ಗೆ ಚಿಂತನೆ ನಡೆದಿದೆ ಎಂದು ಮದ್ದೂರಿನಲ್ಲಿ ಸಚಿವ ಸೋಮಶೇಖರ್ ಹೇಳಿದ್ರು.
ತಮಗೆ ಬಂದಿರುವ ಮಾಹಿತಿಯ ಪ್ರಕಾರ ಒಂದೇ ಸಂಖ್ಯೆಯಲ್ಲಿ ಐದರಿಂದ ಆರು ವಾಹನಗಳು ಚಲಾಯಿಸುತ್ತಿರುವುದು ಮತ್ತು ಕೋಟ್ಯಾಂತರ ರೂಪಾಯಿ ಇದರಲ್ಲಿ ಭಾಗಿಯಾಗಿ ನಷ್ಟವಾಗಿದೆ. ರೈತರಿಗೆ ಈ ತರಹದ ಯಾವುದೇ ರೀತಿಯ ಮೋಸ ಮಾಡಬಾರದು. ಇಡೀ ದೇಶದಲ್ಲಿಯೇ ಗುಜರಾತನ್ನು ಹೊರತುಪಡಿಸಿ ಮೈಸೂರು ಪ್ರಮುಖವಾದ ಹಾಲಿನ ಡೈರಿ ಆಗಿದೆ. ಈ ವೇಳೆ ಕೆ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮೇಶ್, ಮನ್ ಮುಲ್ ಅಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷ ರಘುನಂದನ್, ಬಿಜೆಪಿ ಮುಖಂಡ ಸಿದ್ದರಾಮಯ್ಯ, ಮನ್ ಮುಲ್ ನಿರ್ದೇಶಕರು ಹಾಗೂ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ: ಹಾಲು ಸಾಗಿಸುವ ಗುತ್ತಿಗೆ ಪಡೆದಿರುವವರಿಂದಲೇ ಹಾಲಿಗೆ ನೀರು ಮಿಕ್ಸ್! ಮಂಡ್ಯದಲ್ಲಿ ಬೆಳಕಿಗೆ ಬಂತು ಭಾರೀ ಗೋಲ್ಮಾಲ್
Published On - 3:24 pm, Thu, 10 June 21