ಕೆಎಸ್​ಆರ್​ಟಿಸಿಯ ಶಕ್ತಿ ಯೋಜನೆಗೆ ಒಲಿದು ಬಂದ SKOCH ರಾಷ್ಟ್ರೀಯ ಪ್ರಶಸ್ತಿ; ಕಾರ್ಮಿಕ ಕಲ್ಯಾಣಕ್ಕೂ ಪ್ರಶಸ್ತಿ

ಕೆಎಸ್​ಆರ್​ಟಿಸಿಗೆ ಪ್ರತಿಷ್ಠಿತ SKOCH ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಕಾರ್ಮಿಕ ಕಲ್ಯಾಣ, ಶಕ್ತಿ ಯೋಜನೆಗಳಿಗೆ ಸ್ಕಾಚ್ ಪ್ರಶಸ್ತಿ ಲಭಿಸಿವೆ. ಇತ್ತೀಚೆಗಷ್ಟೇ, ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ತನ್ನ ಸಿಬ್ಬಂದಿಗಳಿಗಾಗಿ 1 ಕೋಟಿ ಸಾರಿಗೆ ಸುರಕ್ಷಾ ವಿಮಾ ಯೋಜನೆ ಜಾರಿ ಮಾಡಿದ ಕೆಎಸ್​ಆರ್​​ಟಿಸಿಗೆ ಪ್ರತಿಷ್ಠಿತ SKOCH ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು.

ಕೆಎಸ್​ಆರ್​ಟಿಸಿಯ ಶಕ್ತಿ ಯೋಜನೆಗೆ ಒಲಿದು ಬಂದ SKOCH ರಾಷ್ಟ್ರೀಯ ಪ್ರಶಸ್ತಿ; ಕಾರ್ಮಿಕ ಕಲ್ಯಾಣಕ್ಕೂ ಪ್ರಶಸ್ತಿ
ಕೆಎಸ್​ಆರ್​ಟಿಸಿಯ ಶಕ್ತಿ ಯೋಜನೆ ಮತ್ತು ಕಾರ್ಮಿಕ ಕಲ್ಯಾಣಗಳಿಗೆ SKOCH ರಾಷ್ಟ್ರೀಯ ಪ್ರಶಸ್ತಿಗಳು
Edited By: Rakesh Nayak Manchi

Updated on: Feb 10, 2024 | 7:25 PM

ಬೆಂಗಳೂರು, ಫೆ.10:ಕೆಎಸ್​ಆರ್​ಟಿಸಿಗೆ (KSRTC) ಮತ್ತೆ ಪ್ರತಿಷ್ಠಿತ SKOCH ಪ್ರಶಸ್ತಿ ಒಲಿದುಬಂದಿದೆ. ಕಾರ್ಮಿಕ ಕಲ್ಯಾಣ, ಶಕ್ತಿ ಯೋಜನೆಗಳಿಗೆ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿವೆ. ಇತ್ತೀಚೆಗಷ್ಟೇ, ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ತನ್ನ ಸಿಬ್ಬಂದಿಗಳಿಗಾಗಿ 1 ಕೋಟಿ ಸಾರಿಗೆ ಸುರಕ್ಷಾ ವಿಮಾ ಯೋಜನೆ ಜಾರಿ ಮಾಡಿದ ಕೆಎಸ್​ಆರ್​​ಟಿಸಿಗೆ ಪ್ರತಿಷ್ಠಿತ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ ಬೆನ್ನಲ್ಲೇ ಈ ಪ್ರಶಸ್ತಿ ಒಲಿದುಬಂದಿದೆ.

ಇಂದು ಸ್ಕಾಚ್ ಸಂಸ್ಥೆಯು ದೆಹಲಿಯ ಕಾನ್ಸ್ಟಿಟ್ಯುಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ಆಯೋಜಿಸಿದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸ್ಕಾಚ್ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಸಮೀರ್ ಕೊಚ್ಚರ್ ಹಾಗೂ ಉಪಾಧ್ಯಕ್ಷ ಗುರುಶರಣ್ ಅವರು ನಿಗಮಕ್ಕೆ ಸ್ಕಾಚ್​ನ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಧಾನ ಮಾಡಿದರು. ಕೆಎಸ್​​ಆರ್​ಟಿಸಿ ಉಪ ಮುಖ್ಯ ಲೆಕ್ಕಾಧಿಕಾರಿ ವೈ.ಕೆ ಪ್ರಕಾಶ್ ಅವರು ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಇದನ್ನೂ ಓದಿ: Ashwamedha Classic buses: ಹೊಸ ಅಶ್ವಮೇಧ ಬಸ್ಸುಗಳಲ್ಲಿಯೂ ಮಹಿಳೆಯರಿಗೆ ಉಚಿತ ಪ್ರಯಾಣ: ಕೆಎಸ್​ಆರ್​ಟಿಸಿ ಘೋಷಣೆ

ದೆಹಲಿ ಮೂಲದ ಸ್ಕ್ವಾಚ್ ಸಂಸ್ಥೆಯು ಸ್ವತಂತ್ರ ವಿಚಾರ ತಜ್ಞ ವೇದಿಕಾ ಸಂಸ್ಥೆಯಾಗಿದ್ದು 1997ರಲ್ಲಿ ಸ್ಥಾಪಿತವಾಗಿರುತ್ತದೆ. ಈ ಸಂಸ್ಥೆಯು 2003 ರಿಂದ ಸ್ಕಾಚ್ ಪ್ರಶಸ್ತಿಯನ್ನು ವಿವಿಧ ಸಂಸ್ಥೆಗಳು ಸಾಧಿಸಿರುವ ಉತ್ತಮ ಆಡಳಿತ ನಿರ್ವಹಣೆ, ಹಣಕಾಸು,ತಾಂತ್ರಿಕತೆ ಅಳವಡಿಕೆ ಹಾಗೂ ಆಂತರಿಕ ಬೆಳವಣಿಗೆಗಾಗಿ ನೀಡುತ್ತಾ ಬಂದಿದೆ. ಸ್ಕಾಚ್ ಸಂಸ್ಥೆಯು ತನ್ನ ಅತ್ಯುನ್ನತ ಪ್ರಶಸ್ತಿಗಳನ್ನು ಸಂಸ್ಥೆಗಳು ಮಾಡಿರುವ ಅತಿ ಉತ್ತಮ ಸಾಧನೆ ಹಾಗೂ ಅವುಗಳಿಂದ ಉಂಟಾಗಿರುವ ಪರಿಣಾಮಗಳನ್ನು ಆಧರಿಸಿ ಆಯ್ಕೆ ಮಾಡಿ ನೀಡುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Follow Us