Snake bite: ಹಾವು ಕಚ್ಚಿ ಸಾವು, ನಾಲ್ಕು ಆಸ್ಪತ್ರೆಗಳಿಗೆ ಸುತ್ತಾಡುವ ವೇಳೆಗೆ ಅಸುನೀಗಿದ ಬಾಲಕ, ಮಧ್ಯೆ ಕೊರೊನಾ ಕಾಟ

| Updated By: ಸಾಧು ಶ್ರೀನಾಥ್​

Updated on: Jun 08, 2021 | 11:45 AM

ಇಂಗಳಗುಂದಿ ಗ್ರಾಮದಿಂದ ಹರಿಹರ, ಹರಿಹರದಿಂದ ದಾವಣಗೆರೆ ಹಾಗೂ ದಾವಣಗೆರೆ ನಗರದ ಜಿಲ್ಲಾ ಆಸ್ಪತ್ರೆಯಿಂದ ಬಾಪೂಜಿ ಆಸ್ಪತ್ರೆಗೆ ಸುತ್ತಾಡುವ ವೇಳೆಗೆ ಸಮಯ ಮೀರಿದ್ದು, ಸಕಾಲಕ್ಕೆ ಚಿಕಿತ್ಸೆ ಸಿಗದೇ ಹಾವು ಕಚ್ಚಿದ್ದ ಬಾಲಕ ಅಸುನೀಗಿದ್ದಾನೆ. ಕಾಲಹರಣ ಮಾಡಿದ ಹರಿಹರ ತಾಲೂಕಾ ಆಸ್ಪತ್ರೆ ಸಿಬ್ಬಂದಿಯ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Snake bite: ಹಾವು ಕಚ್ಚಿ ಸಾವು, ನಾಲ್ಕು ಆಸ್ಪತ್ರೆಗಳಿಗೆ ಸುತ್ತಾಡುವ ವೇಳೆಗೆ ಅಸುನೀಗಿದ ಬಾಲಕ, ಮಧ್ಯೆ ಕೊರೊನಾ ಕಾಟ
Snake bite: ಹಾವು ಕಚ್ಚಿ ಸಾವು, ನಾಲ್ಕು ಆಸ್ಪತ್ರೆಗಳಿಗೆ ಸುತ್ತಾಡುವ ವೇಳೆಗೆ ಅಸುನೀಗಿದ ಬಾಲಕ, ಮಧ್ಯೆ ಕೊರೊನಾ ಕಾಟ
Follow us on

ದಾವಣಗೆರೆ: ಹಾವು ಕಚ್ಚಿ ಸಾಯುವವರ ಸಂಖ್ಯೆಗೆ ರಾಜ್ಯದಲ್ಲಿ ಕಡಿವಾಣ ಇಲ್ಲವಾಗವಾಗಿದೆ. ಸಕಾಲಕ್ಕೆ ಚಿಕಿತ್ಸೆ ಸಿಗದಿರುವುದೇ ಇದು ಇನ್ನೂ ನಿಯಂತ್ರಣಕ್ಕೆ ಸಿಗದಿರುವುದಕ್ಕೆ ಕಾರಣವಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಇಂಗಳಗುಂದಿ ಗ್ರಾಮದಲ್ಲಿ ಹದಿಹರೆಯದವನೊಬ್ಬನಿಗೆ ಹಾವು ಕಚ್ಚಿ ಸಾವು ಸಂಭವಿಸಿದೆ. ಸಕಾಲಕ್ಕೆ ಚಿಕಿತ್ಸೆ ಸಿಗದೇ 16 ವರ್ಷದ ಬಾಲಕ ಸಾವಿಗೀಡಾಗಿದ್ದಾನೆ. ಹಾವು ಕಡಿದು ತೀವ್ರ ಸುಸ್ತಾಗಿದ್ದ ಬಾಲಕನನ್ನು ಚಿಕಿತ್ಸೆಗಾಗಿ ಪಾಲಕರು ಓಮಿನಿ ವಾಹನದಲ್ಲಿ ಹಲವಾರು ಕಡೆ ಸುತ್ತಾಡಿಸಿದ್ದಾರೆ. ಈ ಮಧ್ಯೆ, ಬಾಲಕ ಸಂಜು ಸಾವನ್ನಪ್ಪಿದ್ದಾನೆ.

ಕೊರೊನಾ ಕಾಟದಿಂದಾಗಿ ಜಿಲ್ಲಾಸ್ಪತ್ರೆಯಲ್ಲಿ ಸಿಗಲಿಲ್ಲ ಚಿಕಿತ್ಸೆ
ಜಮೀನಲ್ಲಿ‌‌ ಕಾರ್ಯನಿರ್ವಹಿಸುವ ವೇಳೆ ಸಂಜುಗೆ (16 ವರ್ಷ) ಹಾವು ಕಚ್ಚಿದೆ. ಅಸ್ವಸ್ಥನಾದ ಬಾಲಕನಿಗೆ ಹರಿಹರ ತಾಲೂಕಾ ಆಸ್ಪತ್ರೆಗೆ ಚಿಕಿತ್ಸೆಗೆಂದು ಪಾಲಕರು ಕರೆದೊಯ್ದಿದ್ದಾರೆ. ಅಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಸಂಜುನನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆ ಆಸ್ಪತ್ರೆಯೀಗ ಸಂಪೂರ್ಣ ಕೋವಿಡ್ ಆಸ್ಪತ್ರೆ ಯಾಗಿರುವ ಹಿನ್ನೆಲೆಯಲ್ಲಿ ವೈದ್ಯರು ಸಂಜುನನ್ನು ಪಕ್ಕದ ಬಾಪೂಜಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಹೀಗೆ ಗ್ರಾಮದಿಂದ ಹರಿಹರ, ಹರಿಹರದಿಂದ ದಾವಣಗೆರೆ ಹಾಗೂ ದಾವಣಗೆರೆ ನಗರದ ಜಿಲ್ಲಾ ಆಸ್ಪತ್ರೆಯಿಂದ ಬಾಪೂಜಿ ಆಸ್ಪತ್ರೆಗೆ ಸುತ್ತಾಡುವ ವೇಳೆಗೆ ಸಮಯ ಮೀರಿದ್ದು, ಸಕಾಲಕ್ಕೆ ಚಿಕಿತ್ಸೆ ಸಿಗದೇ ಬಾಲಕ ಅಸುನೀಗಿದ್ದಾನೆ. ಕಾಲಹರಣ ಮಾಡಿದ ಹರಿಹರ ತಾಲೂಕಾ ಆಸ್ಪತ್ರೆ ಸಿಬ್ಬಂದಿಯ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

(snake bite in ingalagundi harihara taluk teenager died)

ಬೀದರ್ ಜಿಲ್ಲೆಯಲ್ಲಿ ಹಾವು ಕಚ್ಚಿ ರೈತರ ಸಾವು: ಸಾವಿನ ಸಂಖ್ಯೆ ಹೆಚ್ಚಳಕ್ಕೆ ಔಷಧಿಯ ಕೊರತೆ; ಜೊತೆಗೆ ಮೌಢ್ಯವೂ ಹೆಚ್ಚಾಗಿದೆ!

Published On - 11:42 am, Tue, 8 June 21