ಹುಬ್ಬಳ್ಳಿ ಕಿಮ್ಸ್‌ನ ಕೆಲಸಗಳ್ಳ ವೈದ್ಯರಿಗೆ ಕಿಮ್ಸ್‌ನ ನಿರ್ದೇಶಕರಿಂದ ಶೋಕಾಸ್ ನೋಟಿಸ್
ಹುಬ್ಬಳ್ಳಿಯ ಕಿಮ್ಸ್ನಲ್ಲಿ 11 ವೈದ್ಯರು ಈ ರೀತಿ ಕಳ್ಳಾಟ ಆಡ್ತಿದ್ದಾರೆ ಅನ್ನೋದು ಟಿವಿ9ಗೆ ಗೊತ್ತಾಗುತ್ತಿದ್ದಂತೆ. 1 ವಾರ ಹೀಗೆ ಕಳ್ಳಾಟ ಆಡ್ತಿದ್ದ 11 ವೈದ್ಯರ ಮೇಲೆ ಟಿವಿ9 ಕಣ್ಣಿಟ್ಟಿತ್ತು. ಟಿವಿ9 ಸತತ 1 ವಾರ ರಹಸ್ಯ ಕಾರ್ಯಾಚರಣೆ ನಡೆಸಿ 11 ಜನರ ಅಸಲಿಯತ್ತು ಬಯಲು ಮಾಡಿತ್ತು. ಯಾವಾಗ ಟಿವಿ9ನಲ್ಲಿ 11 ವೈದ್ಯರ ಮುಖವಾಡ ಬಯಲಾಯ್ತೋ ತಕ್ಷಣ ಎಚ್ಚೆತ್ತಿರೋ ಕಿಮ್ಸ್ ಆಡಳಿತ ಮಂಡಳಿ 11 ವೈದ್ಯರಿಗೆ ಶೋಕಾಸ್ ನೋಟಿಸ್ ನೀಡಿದೆ.
ಹುಬ್ಬಳ್ಳಿ: ಸರ್ಕಾರದ ಕೆಲಸ ಅಂದ್ರೆ ದೇವರ ಕೆಲಸ ಅಂತಾರೆ. ಅದ್ರಲ್ಲೂ ವೈದ್ಯರನ್ನ ದೇವರಿಗೆ ಹೋಲಿಸ್ತಾರೆ. ಆದ್ರೆ, ಇದಕ್ಕೆ ಅಪವಾದ ಅನ್ನೋ ರೀತಿ ಇದ್ದ ಹುಬ್ಬಳ್ಳಿಯ ಕಿಮ್ಸ್ ವೈದ್ಯರ ಮುಖವಾಡವನ್ನ ಟಿವಿ9 ನಿನ್ನೆ ಬಯಲು ಮಾಡಿತ್ತು. ಕೊರೊನಾ ಅನ್ನೋ ಮಹಾಮಾರಿ ಅಬ್ಬರಿಸ್ತಿದ್ರೆ. ಕರ್ತವ್ಯ ಮರೆತು ಖಾಸಗಿ ಕ್ಲಿನಿಕ್ನಲ್ಲಿ ಪ್ರಾಕ್ಟೀಸ್ ಮಾಡ್ತಿದ್ದವರ ಅಸಲಿಯತ್ತು ಹೊರ ಬಂದಿತ್ತು. ಈಗ ಸರ್ಕಾರ, ಧಾರವಾಡ ಜಿಲ್ಲಾಡಳಿತ ಎಚ್ಚೆತ್ತಿದ್ದು.. ಕಳ್ಳಾಟ ಆಡ್ತಿದ್ದವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಹುಬ್ಬಳ್ಳಿ ಕಿಮ್ಸ್‌ನ ಕೆಲಸಗಳ್ಳ ವೈದ್ಯರಿಗೆ ಕಾರಣ ಕೇಳಿ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ನೋಟಿಸ್ ಜಾರಿಗೊಳಿಸಿದ್ದಾರೆ. ತಕ್ಷಣವೇ ನೋಟಿಸ್‌ಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ. ಹುಬ್ಬಳ್ಳಿ ಕಿಮ್ಸ್‌ನ ರವೀಂದ್ರ ಖಾಸ್ನಿಸ್, ನರೇಂದ್ರ ಹಿರೇಗೌಡ್ರ, ಎಸ್.ಎಂ.ಚೌಕಿಮಠ, ಪ್ರಕಾಶ್ ವಾರಿ, ವೆಂಕಟೇಶ ಮೂಲಿಮನಿ, ಡಾ.ಅಶೋಕ್ ಬಂಗಾರಶೆಟ್ಟರ್, ದತ್ತಾತ್ರೇಯ ಬಂಟ್, ಡಾ.ಪಿ.ವಿ.ಭಗವತ್, ಜಿ.ಸಿ.ಪಾಟೀಲ್, ವಿದ್ಯಾ ಹಸಬಿ, ಪಾರ್ವತಿ ಜಿಗಳೂರಗೆ ನಿರ್ದೇಶಕರಿಂದ ಶೋಕಾಸ್ ನೋಟಿಸ್ ಜಾರಿಯಾಗಿದೆ.
ಕೊರೊನಾ ರಾಜ್ಯದ ಜನರ ಜೀವವನ್ನ ಹಿಂಡಿ ಹಿಪ್ಪೆ ಮಾಡ್ತಿದೆ. ಇದರ ನಡುವೆ ವೈದ್ಯೋ ನಾರಾಯಣೋ ಹರಿ ಅನ್ನೋ ಮಾತಿಗೆ ಪರ್ಯಾಯ ಅನ್ನೋ ರೀತಿ ರಾಜ್ಯದ ಬಹುತೇಕ ವೈದ್ಯರು ಹಗಲು ರಾತ್ರಿ ಜನರ ಸೇವೆ ಮಾಡ್ತಿದ್ದಾರೆ. ಹಲವಾರು ಜೀವಗಳನ್ನ ಉಳಿಸಲು ಯುದ್ಧೋಪಾದಿಯಲ್ಲಿ ಕಾರ್ಯ ನಿರ್ವಹಿಸ್ತಿದ್ದಾರೆ. ಆದ್ರೆ, ಇದಕ್ಕೆ ತದ್ವಿರುದ್ಧವಾಗಿ ಹುಬ್ಬಳ್ಳಿಯ ಕಿಮ್ಸ್ನ 11 ಜನ ವೈದ್ಯರು ಸರ್ಕಾರ ನೀಡೋ ಲಕ್ಷ ಲಕ್ಷ ಸಂಬಳ ಎಣಿಸಿ ಖಾಸಗಿ ಕ್ಲಿನಿಕ್ಗಳಲ್ಲಿ ಕಾರ್ಯ ನಿರ್ವಹಿಸುತ್ತಾ ತಮ್ಮ ವೃತ್ತಿಗೆ ದ್ರೋಹ ಬಗೆಯುತ್ತಿದ್ರು.
ಹುಬ್ಬಳ್ಳಿಯ ಕಿಮ್ಸ್ನಲ್ಲಿ 11 ವೈದ್ಯರು ಈ ರೀತಿ ಕಳ್ಳಾಟ ಆಡ್ತಿದ್ದಾರೆ ಅನ್ನೋದು ಟಿವಿ9ಗೆ ಗೊತ್ತಾಗುತ್ತಿದ್ದಂತೆ. 1 ವಾರ ಹೀಗೆ ಕಳ್ಳಾಟ ಆಡ್ತಿದ್ದ 11 ವೈದ್ಯರ ಮೇಲೆ ಟಿವಿ9 ಕಣ್ಣಿಟ್ಟಿತ್ತು. ಟಿವಿ9 ಸತತ 1 ವಾರ ರಹಸ್ಯ ಕಾರ್ಯಾಚರಣೆ ನಡೆಸಿ 11 ಜನರ ಅಸಲಿಯತ್ತು ಬಯಲು ಮಾಡಿತ್ತು. ಯಾವಾಗ ಟಿವಿ9ನಲ್ಲಿ 11 ವೈದ್ಯರ ಮುಖವಾಡ ಬಯಲಾಯ್ತೋ ತಕ್ಷಣ ಎಚ್ಚೆತ್ತಿರೋ ಕಿಮ್ಸ್ ಆಡಳಿತ ಮಂಡಳಿ 11 ವೈದ್ಯರಿಗೆ ಶೋಕಾಸ್ ನೋಟಿಸ್ ನೀಡಿದೆ.
ಟಿವಿ9 ವರದಿಯನ್ನ ಸರ್ಕಾರ ಕೂಡ ಗಮನಿಸಿದೆ. ಇದೇ ಕಾರಣಕ್ಕೆ ನಿನ್ನೆ ಡಿಸಿಎಂ ಅಶ್ವತ್ಥ್ನಾರಾಯಣ, ಆರೋಗ್ಯ ಸಚಿವ ಸುಧಾಕರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೂಕ್ತ ಕ್ರಮ ತೆಗೆದುಕೊಳ್ತೀವಿ ಅಂತಾ ಹೇಳಿದ್ರು. ಹೀಗಾಗಿ ಸರ್ಕಾರದ ವತಿಯಿಂದಲೂ ಈ ವೈದ್ಯರಿಗೆ ಇವತ್ತು ನೋಟಿಸ್ ನೀಡಬಹುದು. ಇದರ ಜೊತೆಗೆ ಸ್ವತಃ ಜಿಲ್ಲಾಧಿಕಾರಿಗಳೇ ಅಖಾಡಕ್ಕೆ ಇಳಿಯಬಹುದು. ಯಾಕಂದ್ರೆ, ಕಿಮ್ಸ್ನಲ್ಲಿ ಬಹುತೇಕ ವೈದ್ಯರಿಗೆ ಸ್ವತಃ ಡಿಸಿ ಡ್ಯೂಟಿ ನಿಯೋಜನೆ ಮಾಡಿದ್ದಾರೆ. ಸ್ವತಃ ಡಿಸಿ ವೈದ್ಯರನ್ನ ನಿಯೋಜಿಸಿದ್ರೂ. 11 ವೈದ್ಯರು ಕಳ್ಳಾಟ ಆಡಿರೋದ್ರಿಂದ ಸೂಕ್ತ ಕ್ರಮ ತೆಗೆದುಕೊಳ್ಳದೇ ಇದ್ರೆ ತಪ್ಪು ಸಂದೇಶ ರವಾನೆಯಾಗಲಿದೆ. ಹೀಗಾಗಿ ಡಿಸಿ ಕ್ರಮ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
11 ಜನ ವೈದ್ಯರ ವಿರುದ್ಧ ಟಿವಿ9ನಲ್ಲಿ ವರದಿ ಪ್ರಸಾರವಾದ ಬಳಿಕ ಕಿಮ್ಸ್ ಕ್ಯಾಂಪಸ್ನಲ್ಲಿ ಹಲವರು ಪ್ರತಿಭಟನೆ ಮಾಡ್ತಿದ್ರು. ತಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಲಾಗಿದೆ. ನಾವು ಆ ರೀತಿ ಕಳ್ಳಾಟ ಆಡಿಯೇ ಇಲ್ಲ ಅಂತಾ ಪ್ರೊಟೆಸ್ಟ್ಗೆ ಇಳಿದಿದ್ರು. ಆದ್ರೆ, ಯಾರೂ ಸಹ ಅವರನ್ನ ಕೇರ್ ಕೂಡ ಮಾಡ್ಲಿಲ್ಲ. ಯಾವಾಗ ತಮ್ಮ ಪ್ರತಿಭಟನೆಗೆ ಕಿಮ್ಮತ್ತಿಲ್ಲ ಅಂತಾ ಗೊತ್ತಾಯ್ತೋ.. ಯಾರೂ ತಮ್ಮ ಮನವಿಯನ್ನ ಆಲಿಸಲು ಬರ್ತಿಲ್ಲ ಅಂತಾ ಗೊತ್ತಾಯ್ತೋ.. ಕೊನೆಗೆ ಒಂದು ಮನವಿ ಪತ್ರವನ್ನ ಕೊಟ್ಟು.. ಪ್ರತಿಭಟನೆಯನ್ನ ಅಂತ್ಯಗೊಳಿಸಿದ್ದಾರೆ.
ಪ್ರತಿಷ್ಠಿತ ಕಿಮ್ಸ್ ಅಸ್ಪತ್ರೆಯಲ್ಲಿ, ಎಲ್ಲಾ ವೈದ್ಯರು ಕಳ್ಳಾಟ ಆಡ್ತಿದ್ದಾರೆ ಅಂತಾ ಟಿವಿ9 ಹೇಳಿಲ್ಲ. ಕಿಮ್ಸ್‌ನ ವೈದ್ಯರು ಈ ಹಿಂದೆ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಅದನ್ನೂ ಟಿವಿ9 ತೋರಿಸಿದೆ. ಈಗಲೂ ಜೀವ ಒತ್ತೆ ಇಟ್ಟು ಜನರ ಜೀವ ಕಾಪಾಡುವ ಕೆಲಸದಲ್ಲಿ ಹಲವರು ತೊಡಗಿದ್ದಾರೆ. ಆದ್ರೆ, ಇನ್ನೂ ಕೆಲವರು ಇದೇ ಕಿಮ್ಸ್‌ನಲ್ಲಿ ಸರ್ಕಾರಿ ಸಂಬಳಕ್ಕೆ ದಂಡವಾಗಿ ಬದುಕ್ತಿದ್ದಾರೆ. ಸರ್ಕಾರಕ್ಕೆ ಮೋಸ ಮಾಡ್ತಿದ್ದಾರೆ. ತಾಯಿ ಸಮಾನವಾದ ಕಿಮ್ಸ್ ಸಂಸ್ಥೆಗೆ ಅನ್ಯಾಯ ಮಾಡ್ತಿದ್ದಾರೆ. ಅಂತಹವರ ಬಂಡವಾಳ ಬಯಲು ಮಾಡಿದೆ ಟಿವಿ9. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಆಗಬೇಕು ಅಂತಾ ರಾಜ್ಯದ ಜನರ ಪರವಾಗಿ ಟಿವಿ9 ಒತ್ತಾಯ ಮಾಡ್ತಿದೆ.
ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಪ್ರಕರಣ; ಟಿವಿ9 ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ.ಕೆ.ಸುಧಾಕರ್