ಮೈಸೂರು: ಕೃತಕ ಕಾವು ಮೊಟ್ಟೆಯಿಂದ ಹೊರಬಂದ ಹಾವಿನ ಮರಿಗಳು; ಅಪರೂಪದ ದೃಶ್ಯ ಸೆರೆ

| Updated By: Digi Tech Desk

Updated on: May 18, 2021 | 9:19 AM

Mysore News: ಇದು ಹಾವುಗಳು ಮೊಟ್ಟೆಯಿಟ್ಡು ಮರಿಯಾಗುವ ಕಾಲ. ಹಾವು ಪಾಳುಬಿದ್ದ ಜಾಗ ಬೆಚ್ಚಗಿನ ಸ್ಥಳಗಳಲ್ಲಿ ಮೊಟ್ಟೆಯಿಡುತ್ತದೆ. ಮೊಟ್ಟೆಯಿಂದ ಹೊರ ಬಂದ ಹಾವಿನ ಮರಿ ಸಹಾ ವಿಷಪೂರಿತ ವಾಗಿರುತ್ತದೆ. ಜನರು ಹಾವಿನ ಮೊಟ್ಟೆ ಅಥವಾ ಮರಿಗಳನ್ನು ಮುಟ್ಟಬೇಡಿ.

ಮೈಸೂರು: ಕೃತಕ ಕಾವು ಮೊಟ್ಟೆಯಿಂದ ಹೊರಬಂದ ಹಾವಿನ ಮರಿಗಳು; ಅಪರೂಪದ ದೃಶ್ಯ ಸೆರೆ
ಹಾವಿನ ಜನನ
Follow us on

ಮೈಸೂರು: ಮೊಟ್ಟೆಗೆ ಕೃತಕವಾಗಿ ಕಾವನ್ನು ಕೊಟ್ಟು ಮರಿ ಮಾಡುವುದು ಹೇಳಿದಷ್ಟು ಸುಲಭವಲ್ಲ. ಕೃತಕವಾಗಿ ಕಾವನ್ನು ಕೊಡುವಾಗ ಹೆಚ್ಚು ವೈಜ್ಞಾನಿಕ ಜ್ಞಾನವೂ ಕೂಡ ಅಷ್ಟೇ ಅಗತ್ಯವಿರುತ್ತದೆ. ಇನ್ನು ಹಾವಿನ ಮೊಟ್ಟೆಗಳಿಗೆ ಕೃತಕ ಕಾವನ್ನು ಕೊಡುವುದು ಯೋಚಿಸುವಷ್ಟು ಸುಲಭವದ ಮಾತಲ್ಲ. ಆದರೆ ಮೈಸೂರು ಜಿಲ್ಲೆಯ ಉರುಗ ಸಂರಕ್ಷಕರೊಬ್ಬರು ಈ ಸಾಹಸಕ್ಕೆ ಕೈ ಹಾಕಿ ಯಶಸ್ಸು ಪಡೆದಿದ್ದಾರೆ. ಮೊಟ್ಟೆಗೆ ಕೃತಕವಾಗಿ ಕಾವನ್ನು ನೀಡಿದ ಪರಿಣಾಮ ಸುಮಾರು 20 ನಾಗರಹಾವಿನ ಮರಿಗಳು ಜನ್ಮ ತಾಳಿವೆ.

ಸೂರ್ಯಕೀರ್ತಿ ಎಂಬ ಉರುಗ ಸಂರಕ್ಷಕ ಎರಡು ತಿಂಗಳ ಹಿಂದೆ ಮೈಸೂರಿನಲ್ಲಿ ಮೊಟ್ಟೆಗಳನ್ನು ಸಂರಕ್ಷಣೆ ಮಾಡಿದ್ದರು. ಮೊಟ್ಟೆಗಳಿಗೆ ಕೃತಕ ಕಾವು ನೀಡಲಾಗಿತ್ತು. ಇದೀಗ 20 ನಾಗರಹಾವಿನ ಮರಿಗಳು ಜನಿಸಿವೆ. ನಾಗರಹಾವಿನ ಮರಿ ಜನನದ ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಷ್ಟು ಹಾವಿನ ಮರಿಗಳಿಗೆ ಪ್ರಾಥಮಿಕ ಆರೈಕೆ ನೀಡಿದರು. ನಂತರ ಎಲ್ಲಾ ಹಾವುಗಳನ್ನು ಸೂರ್ಯಕೀರ್ತಿ ಸುರಕ್ಷಿತ ತಾಣಕ್ಕೆ ಬಿಟ್ಟಿದ್ದಾರೆ.

ಇದು ಹಾವುಗಳು ಮೊಟ್ಟೆಯಿಟ್ಡು ಮರಿಯಾಗುವ ಕಾಲ. ಹಾವು ಪಾಳುಬಿದ್ದ ಜಾಗ ಬೆಚ್ಚಗಿನ ಸ್ಥಳಗಳಲ್ಲಿ ಮೊಟ್ಟೆಯಿಡುತ್ತದೆ. ಮೊಟ್ಟೆಯಿಂದ ಹೊರ ಬಂದ ಹಾವಿನ ಮರಿ ಸಹಾ ವಿಷಪೂರಿತ ವಾಗಿರುತ್ತದೆ. ಜನರು ಹಾವಿನ ಮೊಟ್ಟೆ ಅಥವಾ ಮರಿಗಳನ್ನು ಮುಟ್ಟಬೇಡಿ. ಮೊಟ್ಟೆ ಅಥವಾ ಹಾವಿನ ಮರಿಗಳು ಕಾಣಿಸಿದರೆ ನನಗೆ ಮಾಹಿತಿ ನೀಡಿ ಎಂದು ಉರುಗ ಸಂರಕ್ಷಕ ಸೂರ್ಯಕೀರ್ತಿ ಮನವಿ ಮಾಡಿದ್ದಾರೆ.

ಮೂಕ ಪ್ರಾಣಿಗಳಿಗೂ ತಟ್ಟಿದ ಲಾಕ್​ಡೌನ್​ ಬಿಸಿ
ಗದಗ: ಕೊರೊನಾ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ರಾಜ್ಯದಾದ್ಯಂತ ಲಾಕ್​ಡೌನ್​ ಜಾರಿಗೊಳಿಸಿದೆ. ಲಾಕ್​ಡೌನ್​ ಜಾರಿಯಾದ ಕಾರಣ ಆಹಾರ ಇಲ್ಲದೇ ಬೀದಿ ನಾಯಿಗಳ ಹಸಿವಿನಿಂದ ಪರದಾಟ ಪಡುತ್ತಿವೆ. ಈ ನಡುವೆ ಹಳೇ ಬಸ್ ನಿಲ್ದಾಣ ಸೇರಿ ಗದಗ ನಗರದ ನಾಯಿಗಳಿಗೆ ಗೋವಿಂದಗೌಡ್ರ ಎಂಬುವವರು ಆಹಾರ ಹಾಕಿ ಮಾನವೀಯತೆ ಮೆರೆದಿದ್ದಾರೆ.

ಇದನ್ನೂ ಓದಿ

ಲಾಕ್‌ಡೌನ್‌ನಲ್ಲಿ ಹಲವು ಬಡಾವಣೆಗಳಲ್ಲಿ ಹೆಚ್ಚಾಯ್ತು ಹಾವುಗಳ‌ ಕಾಟ

ಚಲಿಸುತ್ತಿರುವ ಬೈಕ್​ ಹ್ಯಾಂಡಲ್​ಗೆ ಸುತ್ತಿಕೊಂಡ ಹಸಿರು ಹಾವು; ಕಂಗಾಲಾಗಿ ಕಿರುಚಾಡಿದ ಮಹಿಳೆ! ಇಲ್ಲಿದೆ ವೈರಲ್ ವಿಡಿಯೋ

(Snake chicks are born with an artificial incubation egg and rare visual capture in camera at mysuru)

Published On - 8:59 am, Tue, 18 May 21