ಸುಬ್ರಹ್ಮಣ್ಯ ಷಷ್ಠಿಯಂದು ಶ್ರೀರಾಂಪುರಕ್ಕೆ ಎಂಟ್ರಿಕೊಟ್ಟ ಹಾವುಗಳು.. ಜನರಲ್ಲಿ ಮನೆಮಾಡಿದ ಆತಂಕ
ಸುಬ್ರಹ್ಮಣ್ಯ ಷಷ್ಠಿಯಂದು ಭಕ್ತರು ಕುಮಾರಸ್ವಾಮಿಯ ಮೊರೆಹೋಗಿ ಪೂಜೆ ಸಲ್ಲಿಸುತ್ತಾರೆ. ಜೊತೆಗೆ, ನಾಗದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುವುದು ಉಂಟು. ಆದರೆ ಇತ್ತ, ಅರಮನೆ ನಗರಿಯಲ್ಲಿ ಹಾವುಗಳೇ ಭಕ್ತರ ಮನೆಗೆ ವಿಸಿಟ್ ಹಾಕಿದ ಬೆನ್ನಲ್ಲೇ ಆತಂಕದ ವಾತಾವರಣ ಉಂಟಾದ ಸಂಗತಿ ಬೆಳಕಿಗೆ ಬಂದಿದೆ.
ಮೈಸೂರು: ಸುಬ್ರಹ್ಮಣ್ಯ ಷಷ್ಠಿಯಂದು ಭಕ್ತರು ಕುಮಾರಸ್ವಾಮಿಯ ಮೊರೆಹೋಗಿ ಪೂಜೆ ಸಲ್ಲಿಸುತ್ತಾರೆ. ಜೊತೆಗೆ, ನಾಗದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುವುದು ಉಂಟು. ಆದರೆ ಇತ್ತ, ಅರಮನೆ ನಗರಿಯಲ್ಲಿ ಹಾವುಗಳೇ ಭಕ್ತರ ಮನೆಗೆ ವಿಸಿಟ್ ಹಾಕಿದ ಬೆನ್ನಲ್ಲೇ ಆತಂಕದ ವಾತಾವರಣ ಉಂಟಾದ ಸಂಗತಿ ಬೆಳಕಿಗೆ ಬಂದಿದೆ.
ಹೌದು, ಷಷ್ಠಿ ದಿನದಂದು ಮೈಸೂರಿನ ಜನವಸತಿ ಪ್ರದೇಶಕ್ಕೆ ಬಂದಿದ್ದ ಎರಡು ಹಾವುಗಳನ್ನು ರಕ್ಷಣೆ ಮಾಡಲಾಗಿದೆ. ಅಂದ ಹಾಗೆ, ಎರಡೂ ಹಾವುಗಳನ್ನು ಖ್ಯಾತ ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಪುತ್ರ ಸೂರ್ಯಕೀರ್ತಿ ರಕ್ಷಣೆ ಮಾಡಿದ್ದಾರೆ.
ಬಂಬೂ ಬಜಾರ್ ಬಡಾವಣೆಗೆ ಫಸ್ಟ್ ಭೇಟಿಕೊಟ್ಟ ಸೂರ್ಯಕೀರ್ತಿ ಕಟ್ ಹಾವು ಒಂದನ್ನು ರಕ್ಷಿಸಿದರು. ನಂತರ, ಶ್ರೀರಾಂಪುರ ಬಡಾವಣೆಯಲ್ಲಿ ಕೇರೆ ಹಾವೊಂದನ್ನು ರಕ್ಷಣೆ ಮಾಡಿದರು. ಷಷ್ಠಿಯ ದಿನದಂದು ಹಾವುಗಳು ಕಾಣಿಸಿಕೊಂಡಿದ್ದರಿಂದ ಆತಂಕಗೊಂಡಿದ್ದ ಜನರು ನಂತರ ಸೂರ್ಯಕೀರ್ತಿಯವರ ಕೈಯಲ್ಲಿದ್ದಾಗ ಅವುಗಳ ಮೃದು ಸ್ವಭಾವವನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದರು. ಅಂದ ಹಾಗೆ, ಕೆಲವರು ನಾಗಪ್ಪನಿಗೆ ಕೈಮುಗಿದಿದ್ದೂ ಉಂಟು! ಸದ್ಯ, ಹಾವುಗಳನ್ನು ಸೂರ್ಯಕೀರ್ತಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟುಬಂದರು.
ಸುಬ್ರಮಣ್ಯ ಷಷ್ಠಿ: ಸಕ್ಕರೆ ನಾಡಲ್ಲಿ ಹುತ್ತಕ್ಕೆ ಹಾಲೆರೆದಿದ್ದಕ್ಕೆ.. ಬೈಕ್ ಹತ್ತಿದ ನಾಗಪ್ಪ