ಎಂತಹ ಪರಿಸ್ಥಿತಿಯಲ್ಲೂ ನಾನು‌ ಧರ್ಮ ಬಿಟ್ಟು ಹೋಗಲ್ಲ: ತಮ್ಮ ಪಿಎ ರಾಜಣ್ಣ ಬಂಧನದ ಬಗ್ಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ

| Updated By: guruganesh bhat

Updated on: Jul 05, 2021 | 7:22 PM

ನಾನು ಪ್ರಮಾಣ ವಚನ ಸ್ವೀಕಾರ ವೇಳೆಯೂ ಧರ್ಮ ಪಾಲಿಸಿದ್ದೇನೆ. ಎಂಥಾ ಪರಿಸ್ಥಿತಿಯಲ್ಲೂ ನಾನು‌ ಧರ್ಮ ಬಿಟ್ಟು ಹೋಗಲ್ಲ. ಕಾನೂನು ಚೌಕಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ. ರಾಜಣ್ಣ ಪ್ರಕರಣದ ಬಗ್ಗೆ ವಿಚಾರಣೆ ನಡೆಯುತ್ತಿದೆ, ಹೀಗಾಗಿ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಎಂತಹ ಪರಿಸ್ಥಿತಿಯಲ್ಲೂ ನಾನು‌ ಧರ್ಮ ಬಿಟ್ಟು ಹೋಗಲ್ಲ: ತಮ್ಮ ಪಿಎ ರಾಜಣ್ಣ ಬಂಧನದ ಬಗ್ಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ
ಮಾಜಿ ಸಚಿವ ಬಿ.ಶ್ರೀರಾಮುಲು
Follow us on

ಚಿತ್ರದುರ್ಗ: ಯಾವುದೇ ಸಂದರ್ಭದಲ್ಲಿ ಯಾರೂ ಧರ್ಮ ಬಿಡಬಾರದು. ಧರ್ಮ ಬಿಟ್ರೆ ಅಪಾಯ, ಗಂಡಾಂತರ ಎಂದು ತಿಳಿಯಬೇಕು. ಸತ್ಯದ ಮಾರ್ಗದಲ್ಲಿ ನಡೆಯುವವರಿಗೆ ಒಳ್ಳೆಯದೇ ಆಗುತ್ತದೆ. ರಾಜಣ್ಣ ಬಂಧನ ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಪ್ರಕರಣದ ಬಗ್ಗೆ ಸಿಎಂ ಯಡಿಯೂರಪ್ಪ, ಅವರ ಪುತ್ರ ಬಿ.ವೈ. ವಿಜಯೇಂದ್ರ ಬಳಿ ಮಾತಾಡಿದ್ದೇನೆ. ಅಧಿಕಾರಿಗಳು ವಿಚಾರಣೆ ಮಾಡಿ ರಿಲೀಸ್ ಸಹ ಮಾಡಿದ್ದಾರೆ. ಸತ್ಯ ಏನೆಂದು ಇದರಿಂದ ಗೊತ್ತಾಗುತ್ತದೆ ಎಂದು ರಾಮಗಿರಿ ಗ್ರಾಮದಲ್ಲಿ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ.

ನಾನು ಪ್ರಮಾಣ ವಚನ ಸ್ವೀಕಾರ ವೇಳೆಯೂ ಧರ್ಮ ಪಾಲಿಸಿದ್ದೇನೆ. ಎಂಥಾ ಪರಿಸ್ಥಿತಿಯಲ್ಲೂ ನಾನು‌ ಧರ್ಮ ಬಿಟ್ಟು ಹೋಗಲ್ಲ. ಕಾನೂನು ಚೌಕಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ. ರಾಜಣ್ಣ ಪ್ರಕರಣದ ಬಗ್ಗೆ ವಿಚಾರಣೆ ನಡೆಯುತ್ತಿದೆ, ಹೀಗಾಗಿ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಆಪ್ತನ ಬಂಧನ ಹಿನ್ನೆಲೆ ಬೇಸರದಲ್ಲಿರುವ ಸಚಿವ ರಾಮುಲು ರಾಜಣ್ಣ ನನ್ನ ಪಿಎ ಅಲ್ಲ, ನನ್ನ ಹತ್ತಿರ ಕೆಲಸ ಮಾಡ್ತಿದ್ದ. ರಾಜಣ್ಣ ನನಗೆ ಗೊತ್ತಿರುವ ಹುಡುಗ ಅಷ್ಟೇ ಎಂದು ಈಮುನ್ನವೂ ಹೇಳಿದ್ದರು. ಯಾರ ಹೆಸರನ್ನೂ ದುರ್ಬಳಕೆ ಮಾಡಿಕೊಳ್ಳಬಾರದು. ಈ ಸಂಬಂಧ ವಿಜಯೇಂದ್ರ ನನ್ನ ಗಮನಕ್ಕೆ ತಂದಿಲ್ಲ. ಹೀಗಾಗಿ ನಾನು ವಿಜಯೇಂದ್ರ ಜತೆ ಚರ್ಚಿಸುತ್ತೇನೆ. ಪ್ರಕರಣ ಸಂಬಂಧ ಎಲ್ಲೋ ಮಿಸ್ ಕಮ್ಯೂನಿಕೇಷನ್ ಆಗಿದೆ. ಸಿಎಂ ಮತ್ತು ವಿಜಯೇಂದ್ರ ಜೊತೆ ನಾನು ಚರ್ಚಿಸುತ್ತೇನೆ. ರಾಜು ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ತನಿಖೆಯ ನಂತರ ಸತ್ಯಾಂಶ ಬಯಲಾಗುತ್ತದೆ. ಕಾನೂನು ರೀತಿಯಲ್ಲಿ ಕ್ರಮ ಆಗಲಿ ಎಂದು ವಿಧಾನಸೌಧದಲ್ಲಿ ಸಚಿವ ಬಿ.ಶ್ರೀರಾಮುಲು ಈ ಮುನ್ನವೂ ಹೇಳಿದ್ದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಹೆಸರು ದುರ್ಬಳಕೆ ಮಾಡಿಕೊಂಡು ಸರ್ಕಾರದ ಮಟ್ಟದಲ್ಲಿ ಆಯಕಟ್ಟಿನ ಜಾಗಗಳನ್ನು ಕೊಡಿಸುವುದಾಗಿ ಆಮಿಷವೊಡ್ಡಿ ಜನರನ್ನು ಸುಲಿಗೆ ಮಾಡುತ್ತಿದ್ದ ಆರೋಪದ ಮೇರೆಗೆ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರ ಆಪ್ತ ಸಹಾಯಕ, ಬಳ್ಳಾರಿ ನಿವಾಸಿ ರಾಜಣ್ಣನನ್ನು ಸಿಸಿಬಿ ಪೊಲೀಸರು ಬಂಧಿಸಿಲ್ಲವಾದರೂ, ವಿಚಾರಣೆಯನ್ನಷ್ಟೇ ನಡೆಸುತ್ತಿದ್ದರು.

ವಿಜಯೇಂದ್ರ ನೀಡಿದ ದೂರಿನಲ್ಲಿ ಉಲ್ಲೇಖಿಸಿರುವ ಮೂವರಲ್ಲದೆ ಇನ್ನೂ ಹಲವರಿಗೆ ರಾಜಣ್ಣ ಹಣ ಕೇಳಿದ್ದಾರೆ. ಕೇವಲ ವಿಜಯೇಂದ್ರ ಅಲ್ಲದೆ ಇನ್ನೂ ಹಲವು ರಾಜಕಾರಣಿಗಳ ಹೆಸರನ್ನು ಉಲ್ಲೇಖ ಮಾಡಿರುವುದರ ಬಗ್ಗೆ ಸಿಸಿಬಿಗೆ ಸಾಕ್ಷ್ಯ ಲಭ್ಯವಾಗಿತ್ತು.

ಇದನ್ನೂ ಓದಿ:  

ಸುಮಲತಾ ಅಂಬರೀಶ್ ನನ್ನ ಸ್ನೇಹಿತನ ಅಗಲುವಿಕೆಯನ್ನು ದುರ್ಬಳಕೆ ಮಾಡಿಕೊಂಡು ಗೆದ್ದಿದ್ದಾರೆ: ಮಾಜಿ ಸಿಎಂ ಎಚ್​ ಡಿ ಕುಮಾರಸ್ವಾಮಿ

ಬಿ ಎಸ್ ಯಡಿಯೂರಪ್ಪ ಭೇಟಿಯಾದ ಸಂಸದೆ ಸುಮಲತಾ; ಮೈಶುಗರ್ ಕಾರ್ಖಾನೆ, ಅಕ್ರಮ ಗಣಿಗಾರಿಕೆ ವಿಚಾರ ಚರ್ಚೆ

(Social Welfare minister B Sriramulu reacts on his PA Rajannas arrest and release)