ಮಂಡ್ಯ: ದೇಗುಲದ ಬೀಗ ಒಡೆದು ಹುಂಡಿಯನ್ನೇ ಹೊತ್ತೊಯ್ದ ಘಟನೆ ಕೆ.ಆರ್.ಪೇಟೆ ತಾಲೂಕಿನ ಸಾಸಲು ಗ್ರಾಮದಲ್ಲಿ ನಡೆದಿದೆ.
ಸಾಸಲು ಗ್ರಾಮದಲ್ಲಿರುವ ಸೋಮೇಶ್ವರ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದಾಗಿದೆ. ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದ ದೇವಾಲಯವದು. ಬಾಗಿಲ ಬೀಗ ಒಡೆದು ಕಳ್ಳರು ದೇವಾಲಯದ ಒಳಗೆ ನುಗ್ಗಿದ್ದು, ಹುಂಡಿಯನ್ನು ಕದ್ದು ಪರಾರಿಯಾಗಿದ್ದಾರೆ. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲೂ ಕಳ್ಳತನಕ್ಕೆ ಯತ್ನ:
ಹಾಡಹಗಲೇ ಕಾರಿನ ಗಾಜು ಒಡೆದು ಕಳ್ಳತನಕ್ಕೆ ಕೈಹಾಕಿದ್ದ ಕಳ್ಳರ ಯತ್ನ ವಿಫಲವಾಗಿದೆ. ಕಾರಿನಲ್ಲಿದ್ದ ಕ್ಯಾಮರಾ ಬ್ಯಾಗ್ ನೋಡಿದ ಕಳ್ಳರು ಕದ್ದೊಯ್ಯವುಂತೆ ಉಪಾಯ ಹೂಡಿದ್ದರು. ಕಾರಿನ ಗಾಜು ಒಡೆದು ಬ್ಯಾಗ್ ತೆಗೆಯುವಷ್ಟರಲ್ಲಿ ಖಾಲಿ ಬ್ಯಾಗ್ ಕಳ್ಳರ ಪಾಲಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.