ನೈರುತ್ಯ ರೈಲ್ವೆ ವಲಯದ ಟ್ರೇನ್​​ಗಳಲ್ಲಿ ಟಿಕೆಟ್​ ರಹಿತ ಪ್ರಯಾಣ: 46 ಕೋಟಿ ರೂ. ದಂಡ ಸಂಗ್ರಹ

|

Updated on: Jan 22, 2024 | 7:37 AM

ಟಿಕೆಟ್​ ರಹಿತ ಪ್ರಯಾಣ ದಂಡಕ್ಕೆ ಆಹ್ವಾನವೆಂದು ಸಾವರ್ಜನಿಕ ವಾಹನಗಳಲ್ಲಿ ಫಲಕಗಳನ್ನು ಹಾಕಿರುತ್ತಾರೆ. ಆದರೂ ಕೂಡ ನೈಋತ್ಯ ರೈಲ್ವೆ ವಲಯದ ಟ್ರೇನ್​​​ಗಳಲ್ಲಿ ಟಿಕೆಟ್​ ರಹಿತವಾಗಿ ಸಂಚರಿಸಿದ ಪ್ರಯಾಣಿಕರಿಗೆ ಅಧಿಕಾರಿಗಳು ದಂಡ ವಿಧಿಸಿದ್ದು, ಕಳೆದ ವರ್ಷ 2023ರ ಡಿಸೆಂಬರ್​​ ವರೆಗೆ​ 46.31 ಕೋಟಿ ರೂ. ಸಂಗ್ರಹವಾಗಿದೆ.

ನೈರುತ್ಯ ರೈಲ್ವೆ ವಲಯದ ಟ್ರೇನ್​​ಗಳಲ್ಲಿ ಟಿಕೆಟ್​ ರಹಿತ ಪ್ರಯಾಣ: 46 ಕೋಟಿ ರೂ. ದಂಡ ಸಂಗ್ರಹ
ಭಾರತೀಯ ರೈಲ್ವೆ
Follow us on

ಬೆಂಗಳೂರು, ಜನವರಿ 22: ಟಿಕೆಟ್​ ರಹಿತ ಪ್ರಯಾಣ ದಂಡಕ್ಕೆ ಆಹ್ವಾನವೆಂದು ಸಾವರ್ಜನಿಕ ವಾಹನಗಳಲ್ಲಿ ಫಲಕಗಳನ್ನು ಹಾಕಿರುತ್ತಾರೆ. ಆದರೂ ಕೂಡ ನೈಋತ್ಯ ರೈಲ್ವೆ (South Western Railway) ವಲಯದ ಟ್ರೇನ್​​​ಗಳಲ್ಲಿ (Train) ಟಿಕೆಟ್​ ರಹಿತವಾಗಿ ಸಂಚರಿಸಿದ ಪ್ರಯಾಣಿಕರಿಗೆ ಅಧಿಕಾರಿಗಳು ದಂಡ ವಿಧಿಸಿದ್ದು, ಕಳೆದ ವರ್ಷ 2023ರ ಡಿಸೆಂಬರ್​​ ವರೆಗೆ​ 46.31 ಕೋಟಿ ರೂ. ಸಂಗ್ರಹವಾಗಿದೆ. 2023ರಲ್ಲಿ ಒಟ್ಟು 6,27,014 ಟಿಕೆಟ್ ರಹಿತ ಪ್ರಯಾಣದ ಪ್ರಕರಣಗಳು ದಾಖಲಾಗಿವೆ.

2023ರಲ್ಲಿ ಬೆಂಗಳೂರು ವಿಭಾಗವು 3,68,205 ಪ್ರಯಾಣಿಕರಿಗೆ ದಂಡ ವಿಧಿಸಿದ್ದು, 28.26 ಕೋಟಿ ರೂ. ಸಂಗ್ರಹವಾಗಿದೆ. ಈ ಹಿಂದೆ ಸಂಗ್ರಹವಾಗಿದ್ದ ದಂಡದ ಹಣಕ್ಕಿಂತ ಇದು ಅತ್ಯಧಿಕವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸುವುದಾದರೇ ಶೇ9.95 ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: ಭಾರತದಾದ್ಯಂತ ರೈಲು ನಿಲ್ದಾಣಗಳಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭ ನೇರ ಪ್ರಸಾರ

ಕೇವಲ 2023ರ ಡಿಸೆಂಬರ್​ನಲ್ಲಿ, ನೈಋತ್ಯ ರೈಲ್ವೆ ಇಲಾಖೆಯು 72,041 ಪ್ರಕರಣಗಳನ್ನು ದಾಖಲಿಸಿದ್ದು, 5.13 ಕೋಟಿ ರೂ. ದಂಡವನ್ನು ಸಂಗ್ರಹಿಸಿದೆ. ರೈಲ್ವೇ ಕಾಯಿದೆ 1989 ರ ಸೆಕ್ಷನ್ 138 ರ ಪ್ರಕಾರ, ಯಾವುದೇ ಪ್ರಯಾಣಿಕರು ಸರಿಯಾದ ಪಾಸ್/ಟಿಕೆಟ್ ಇಲ್ಲದೆ ಪ್ರಯಾಣಿಸುವುದು ಕಂಡುಬಂದಲ್ಲಿ, 250 ರೂ. ದಂಡ ಅಥವಾ ಶುಲ್ಕಕ್ಕೆ​ ಸಮಾನವಾಗಿರುತ್ತದೆ. (ಅವರು ಪ್ರಯಾಣಿಸಿದ ದೂರಕ್ಕೆ ಅಥವಾ ರೈಲು ಪ್ರಾರಂಭವಾದ ನಿಲ್ದಾಣದಿಂದ ಸಾಮಾನ್ಯ ಏಕ ಶುಲ್ಕ ಮತ್ತು ಹೆಚ್ಚುವರಿ ಶುಲ್ಕಗಳು ಅಂದರೆ ₹ 250) ಯಾವುದು ಹೆಚ್ಚಿದೆಯೋ ಅದನ್ನು ವಿಧಿಸಲಾಗುತ್ತದೆ.

ಈ ಆರ್ಥಿಕ ವರ್ಷದಲ್ಲಿ ಅಂದರೆ ಏಪ್ರಿಲ್ 1 ರಿಂದ ಡಿಸೆಂಬರ್ 31, 2023 ರವರೆಗೆ ಟಿಕೆಟ್ ತಪಾಸಣೆ ಸಿಬ್ಬಂದಿ ಶ್ಲಾಘನೀಯ ಕೆಲಸ ಮಾಡಿದ್ದಾರೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ