ಗಾನ ಗಾರುಡಿಗನಿಗೆ ವಿದ್ಯಾರ್ಥಿ ಭವನ್ ಮಸಾಲೆ ದೋಸೆ ಅಂದ್ರೆ ಬಲು ಪ್ರೀತಿ

ಬೆಂಗಳೂರು: ಸ್ವರ ಸಾಮ್ರಾಟ ಎಸ್.ಪಿ. ಬಾಲಸುಬ್ರಹ್ಮಣ್ಯಂ ಜನರ ಎದೆಯಾಳದಲ್ಲಿ ನೂರೊಂದು ನೆನೆಪುಗಳನ್ನು ಬಿಟ್ಟು ಹೋಗಿದ್ದಾರೆ. ತೆಲುಗಿನವರಾದ್ರೂ ಕನ್ನಡಾಂಬೆಗೆ ದತ್ತು ಪುತ್ರನಂತೆ ಕನ್ನಡಕ್ಕೆ ಇವರ ಸೇವೆ ಅಪಾರ. SPBಗೆ ಸಿಲಿಕಾನ್ ಸಿಟಿ ಬೆಂಗಳೂರು ಅಂದ್ರೆ ಪ್ರಾಣ. ಬೆಂಗಳೂರಿಗೆ ಬಂದ್ರೆ ಮಸಾಲೆ ದೋಸೆ ಸವಿಯದೆ ಇರ್ತಿರಲಿಲ್ಲ. ಬೆಂಗಳೂರಿನ ತಾಜ್, ಮೌರ್ಯ, ಚಾಲುಕ್ಯ, ವುಡ್ ಲ್ಯಾಂಡ್ ಹೋಟೆಲ್​ಗಳಲ್ಲಿ ಹೆಚ್ಚು ವಾಸ್ತವ್ಯ ಹೂಡುತ್ತಿದ್ದರು. ಅದರಲ್ಲೂ ಗಾನ ಗಾರುಡಿಗನಿಗೆ ವಿದ್ಯಾರ್ಥಿ ಭವನ್ ಮಸಾಲೆ ದೋಸೆ ಅಂದ್ರೆ ಬಲು ಪ್ರೀತಿ. ಬೆಂಗಳೂರಿಗೆ ಬಂದ್ರೆ ವಿದ್ಯಾರ್ಥಿ ಭವನ್​ಗೆ […]

ಗಾನ ಗಾರುಡಿಗನಿಗೆ ವಿದ್ಯಾರ್ಥಿ ಭವನ್ ಮಸಾಲೆ ದೋಸೆ ಅಂದ್ರೆ ಬಲು ಪ್ರೀತಿ
Edited By:

Updated on: Sep 26, 2020 | 10:00 AM

ಬೆಂಗಳೂರು: ಸ್ವರ ಸಾಮ್ರಾಟ ಎಸ್.ಪಿ. ಬಾಲಸುಬ್ರಹ್ಮಣ್ಯಂ ಜನರ ಎದೆಯಾಳದಲ್ಲಿ ನೂರೊಂದು ನೆನೆಪುಗಳನ್ನು ಬಿಟ್ಟು ಹೋಗಿದ್ದಾರೆ. ತೆಲುಗಿನವರಾದ್ರೂ ಕನ್ನಡಾಂಬೆಗೆ ದತ್ತು ಪುತ್ರನಂತೆ ಕನ್ನಡಕ್ಕೆ ಇವರ ಸೇವೆ ಅಪಾರ. SPBಗೆ ಸಿಲಿಕಾನ್ ಸಿಟಿ ಬೆಂಗಳೂರು ಅಂದ್ರೆ ಪ್ರಾಣ. ಬೆಂಗಳೂರಿಗೆ ಬಂದ್ರೆ ಮಸಾಲೆ ದೋಸೆ ಸವಿಯದೆ ಇರ್ತಿರಲಿಲ್ಲ. ಬೆಂಗಳೂರಿನ ತಾಜ್, ಮೌರ್ಯ, ಚಾಲುಕ್ಯ, ವುಡ್ ಲ್ಯಾಂಡ್ ಹೋಟೆಲ್​ಗಳಲ್ಲಿ ಹೆಚ್ಚು ವಾಸ್ತವ್ಯ ಹೂಡುತ್ತಿದ್ದರು.

ಅದರಲ್ಲೂ ಗಾನ ಗಾರುಡಿಗನಿಗೆ ವಿದ್ಯಾರ್ಥಿ ಭವನ್ ಮಸಾಲೆ ದೋಸೆ ಅಂದ್ರೆ ಬಲು ಪ್ರೀತಿ. ಬೆಂಗಳೂರಿಗೆ ಬಂದ್ರೆ ವಿದ್ಯಾರ್ಥಿ ಭವನ್​ಗೆ ಬಂದು ದೋಸೆ ಸವಿಯುತ್ತಿದ್ರು. ಹೋಟೆಲ್ ಸಿಬ್ಬಂದಿಗಳ ಜೊತೆ ಸರಳವಾಗಿ ಸಮಯ ಕಳೆಯುತ್ತಿದ್ರಂತೆ.

ಶುಗುರ್ ಇದ್ರೂ ವಿದ್ಯಾರ್ಥಿ ಭವನ್​ನ ಕೇಸರಿಬಾತ್ ರುಚಿ ಸವಿಯುತ್ತಿದ್ರು. ವಿದ್ಯಾರ್ಥಿ ಭವನ್ ಹಾಗೂ ಚಾಲುಕ್ಯ ಹೋಟೆಲ್ ಉದ್ದಿನ ವಡೆಯನ್ನ ತುಂಬಾ ಇಷ್ಟ ಪಟ್ಟು ತಿನ್ನುತ್ತಿದ್ದರು. ಜೊತೆಗೆ ಬೆಂಗಳೂರಿನಲ್ಲಿ ಶಾಂಪಿಂಗ್ ಮಾಡೋದಕ್ಕೆ ತುಂಬಾ ಇಷ್ಟಾಪಡ್ತಾ ಇದ್ರು.

ಬೆಂಗಳೂರಿಗೆ ಬಂದಾಗ ಫ್ರೀ ಟೈಮ್ ಸಿಕ್ರೆ ಕಾರ್​ನಲ್ಲಿ ಕಬ್ಬನ್ ಪಾರ್ಕ್ ಒಂದು ರೌಡ್ ಹಾಕುತ್ತಿದ್ರು. ನಟರಾಜ್ ಚಿತ್ರಮಂದಿರದ  ಎದುರಿಗಿರುವ ಸಾಮ್ರಾಟ್ ಹೋಟೆಲ್ ‌ಊಟ ಚಪ್ಪರಿಸಿ ಸವಿಯುತ್ತಿದ್ದರು.



ಇದನ್ನೂ ಓದಿ: ರಾಗದ ಅರಿಶಿನಕ್ಕೆ ಗಾಯನದ ಕುಂಕುಮ ಬೆರೆಸಿ, ಕನ್ನಡಮ್ಮನ ಹಣೆಗೆ ಹಚ್ಚಿದ್ರು ಬಾಲು..

Published On - 9:59 am, Sat, 26 September 20