ಮಳೆ ಅವಾಂತರಕ್ಕೆ ಮನೆಗಳಿಗೆ ನುಗ್ಗಿದ ನೀರು, ಕಲಬುರಗಿ ಉದನೂರು ರಸ್ತೆ ಸಂಪರ್ಕ ಕಡಿತ
ಕಲಬುರಗಿ: ಜಿಲ್ಲೆಯಲ್ಲಿ ಇಡೀ ರಾತ್ರಿ ಸುರಿದ ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ವರ್ಷಧಾರೆ ತನ್ನ ಪ್ರತಾಪವನ್ನು ತೋರಿದ್ದಾಳೆ. ಉದನೂರು ಗ್ರಾಮದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಉದನೂರು ಗ್ರಾಮದ ಹಳ್ಳ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿ-ಉದನೂರು ಗ್ರಾಮದ ಮಧ್ಯೆ ಸಂಪರ್ಕ ಕಡಿತಗೊಂಡಿದೆ. ಹಾಗೂ ಮನೆಗಳೀಗೆ ನೀರು ನುಗ್ಗಿದೆ. ಇದರಿಂದ ಜನ ಸಂಕಷ್ಟ ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿದ್ದ ಸಾಮಾನುಗಳು ನೀರು ಪಾಲಾಗಿವೆ. ರಾತ್ರಿ ಸುರಿದ ಮಳೆಯ ಆರ್ಭಟ ಗ್ರಾಮದ ಜನರಿಗೆ ಆತಂಕವನ್ನೂ ಹೆಚ್ಚಿಸಿದೆ. ಗ್ರಾಮದ ರಸ್ತೆಗಳೆಲ್ಲ ಕೆರೆಯಂತಾಗಿವೆ. […]
ಕಲಬುರಗಿ: ಜಿಲ್ಲೆಯಲ್ಲಿ ಇಡೀ ರಾತ್ರಿ ಸುರಿದ ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ವರ್ಷಧಾರೆ ತನ್ನ ಪ್ರತಾಪವನ್ನು ತೋರಿದ್ದಾಳೆ. ಉದನೂರು ಗ್ರಾಮದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ.
ಉದನೂರು ಗ್ರಾಮದ ಹಳ್ಳ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿ-ಉದನೂರು ಗ್ರಾಮದ ಮಧ್ಯೆ ಸಂಪರ್ಕ ಕಡಿತಗೊಂಡಿದೆ. ಹಾಗೂ ಮನೆಗಳೀಗೆ ನೀರು ನುಗ್ಗಿದೆ. ಇದರಿಂದ ಜನ ಸಂಕಷ್ಟ ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿದ್ದ ಸಾಮಾನುಗಳು ನೀರು ಪಾಲಾಗಿವೆ. ರಾತ್ರಿ ಸುರಿದ ಮಳೆಯ ಆರ್ಭಟ ಗ್ರಾಮದ ಜನರಿಗೆ ಆತಂಕವನ್ನೂ ಹೆಚ್ಚಿಸಿದೆ. ಗ್ರಾಮದ ರಸ್ತೆಗಳೆಲ್ಲ ಕೆರೆಯಂತಾಗಿವೆ. ರಸ್ತೆ ಮೇಲೆ ಮಳೆ ನೀರು ಹರಿಯುತ್ತಿದೆ.



