ಪ್ರಯಾಣಿಕರ ಬೇಡಿಕೆಯ ಮೇರೆಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಾರವಾರ ನಿಲ್ದಾಣಗಳ (Bengaluru-Karwar) ನಡುವೆ ಎರಡು ಟ್ರಿಪ್ ವಿಶೇಷ ರೈಲುಗಳನ್ನು (Train) ಓಡಿಸಲಾಗುವುದು ಎಂದು ನೈಋತ್ಯ ರೈಲ್ವೆ ವಲಯ (South Western Railway Zone) ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಜುಲೈ 26 ಮತ್ತು 28 ರಂದು ರೈಲು ಸಂಖ್ಯೆ 06567 ಸರ್ ಎಂ. ವಿಶ್ವೇಶ್ವರಯ್ಯ ಬೆಂಗಳೂರು-ಕಾರವಾರ ವಿಶೇಷ ಎಕ್ಸ್ಪ್ರೆಸ್ ರೈಲು ಸರ್ ಎಂ. ವಿಶ್ವೇಶ್ವರಯ್ಯ ಬೆಂಗಳೂರಿನಿಂದ ಮಧ್ಯರಾತ್ರಿ 12:30 ಗಂಟೆಗೆ ಹೊರಟು, ಅದೇ ದಿನ ಸಂಜೆ 4 ಗಂಟೆಗೆ ಕಾರವಾರ ನಿಲ್ದಾಣ ತಲುಪಲಿದೆ.
ಪುನಃ ಇದೇ ರೈಲು (06568) ಜುಲೈ 26 ಮತ್ತು 28 ರಂದು ಕಾರವಾರ ನಿಲ್ದಾಣದಿಂದ ರಾತ್ರಿ 11:30 ಗಂಟೆಗೆ ಹೊರಟು, ಮರುದಿನ ಸಂಜೆ 3:30 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಜುಲೈ, ಆಗಸ್ಟ್ ತಿಂಗಳಲ್ಲಿ ಈ ದಿನದಂದು ಬೆಂಗಳೂರು-ಚೆನ್ನೈ ರೈಲು ರದ್ದು
ಈ ವಿಶೇಷ ರೈಲು ಬಾಣಸವಾಡಿ, ಚಿಕ್ಕಬಾಣಾವರ, ಕುಣಿಗಲ್, ಚನ್ನಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್ ಮತ್ತು ಅಂಕೋಲಾ ನಿಲ್ದಾಣಗಳಲ್ಲಿ ನಿಲುಗಡೆ ಇರಲಿವೆ.
ಈ ವಿಶೇಷ ರೈಲು ಎಸಿ-ಟು ಟೈಯರ್-2 ಎಸಿ-ತ್ರಿ ಟೈಯರ್-2, ಸ್ವೀಪರ್ ಕ್ಲಾಸ್-6, ಸಾಮಾನ್ಯ ದ್ವಿತೀಯ ದರ್ಜೆ-6 ಮತ್ತು ಎಸ್ಎಲ್‌ಆರ್/ಡಿ -2 ಸೇರಿದಂತೆ 18 ಬೋಗಿಗಳು ಒಳಗೊಂಡಿರುತ್ತವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ