ರಾಜಸ್ಥಾನಕ್ಕೆ ಚಿಕ್ಕಬಾಣಾವರ ಸ್ಟೇಷನ್​ನಿಂದ ಹೊರಟ 1200 ಮಂದಿ

ಬೆಂಗಳೂರು: ಕೊರೊನಾ ಲಾಕ್​ಡೌನ್​ಗೆ ಸಿಲುಕಿರುವ ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಕಳುಹಿಸಲು ರಾಜಧಾನಿ ಬೆಂಗಳೂರಿನಲ್ಲೂ ವಿಶೇಷ ರೈಲು ಸಿದ್ಧವಾಗಿದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ವಲಸೆ ಕಾರ್ಮಿಕರನ್ನ ರೈಲುಗಳ ಮುಖಾಂತರ ಕಳುಹಿಸಿಕೊಡಲಾಗಿದೆ. ನಗರದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದ 1,200 ರಾಜಸ್ಥಾನಿ ಕಾರ್ಮಿಕರನ್ನು ವಿಶೇಷ ರೈಲಿನ ಮುಖಾಂತರ ವಾಪಸ್ ಊರಿಗೆ ಕಳುಹಿಸಿಕೊಡಲಾಗುತ್ತೆ. ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಚಿಕ್ಕಬಾಣಾವರದಿಂದ ‘ಶ್ರಮಿಕ‌ ವಿಶೇಷ ರೈಲು’ ಹೊರಡಲಿದೆ. ಬಿಬಿಎಂಪಿ ಸರ್ವೆ ರಿಪೋರ್ಟ್ ಇರೋರಿಗೆ ಮಾತ್ರ ಊರಿಗೆ ತೆರಳಲು ಅವಕಾಶ ನೀಡಲಾಗಿದೆ. ಸರ್ವೆ […]

ರಾಜಸ್ಥಾನಕ್ಕೆ ಚಿಕ್ಕಬಾಣಾವರ ಸ್ಟೇಷನ್​ನಿಂದ ಹೊರಟ 1200 ಮಂದಿ

Updated on: May 04, 2020 | 6:09 PM

ಬೆಂಗಳೂರು: ಕೊರೊನಾ ಲಾಕ್​ಡೌನ್​ಗೆ ಸಿಲುಕಿರುವ ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಕಳುಹಿಸಲು ರಾಜಧಾನಿ ಬೆಂಗಳೂರಿನಲ್ಲೂ ವಿಶೇಷ ರೈಲು ಸಿದ್ಧವಾಗಿದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ವಲಸೆ ಕಾರ್ಮಿಕರನ್ನ ರೈಲುಗಳ ಮುಖಾಂತರ ಕಳುಹಿಸಿಕೊಡಲಾಗಿದೆ.

ನಗರದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದ 1,200 ರಾಜಸ್ಥಾನಿ ಕಾರ್ಮಿಕರನ್ನು ವಿಶೇಷ ರೈಲಿನ ಮುಖಾಂತರ ವಾಪಸ್ ಊರಿಗೆ ಕಳುಹಿಸಿಕೊಡಲಾಗುತ್ತೆ. ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಚಿಕ್ಕಬಾಣಾವರದಿಂದ ‘ಶ್ರಮಿಕ‌ ವಿಶೇಷ ರೈಲು’ ಹೊರಡಲಿದೆ.

ಬಿಬಿಎಂಪಿ ಸರ್ವೆ ರಿಪೋರ್ಟ್ ಇರೋರಿಗೆ ಮಾತ್ರ ಊರಿಗೆ ತೆರಳಲು ಅವಕಾಶ ನೀಡಲಾಗಿದೆ. ಸರ್ವೆ ರಿಪೋರ್ಟ್ ಇಲ್ಲದ ಕಾರ್ಮಿಕರು ರೈಲಿನಲ್ಲಿ ಹೊರಡದಂತೆ ನಿಲ್ದಾಣದಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಊಟವಿಲ್ಲದೆ ಮಹಿಳೆಯರು, ಮಕ್ಕಳ ಪರದಾಟ:
ಅದ್ರೆ ಮಧ್ಯಾಹ್ನ 3ಗಂಟೆಗೆ ಇರುವ ರೈಲಿಗೆ ಬೆಳಗ್ಗೆ 9ಗಂಟೆಗೆ ರೈಲ್ವೆ ನಿಲ್ದಾಣಕ್ಕೆ ಬಸ್ಸಿನಲ್ಲಿ ಕಾರ್ಮಿಕರನ್ನ ಬಿಬಿಎಂಪಿ ಕರೆತಂದಿದೆ. ಕಾರ್ಮಿಕರಿಗೆ ಉಪಹಾರ, ಊಟ ವ್ಯವಸ್ಥೆ ಮಾಡದೆ ಬಿಬಿಎಂಪಿ ನಿರ್ಲಕ್ಷ್ಯವಹಿಸಿದೆ. ಮಹಿಳೆಯರು ಮತ್ತು ಮಕ್ಕಳು ಊಟವಿಲ್ಲದೆ ಇತ್ತ ಬಸ್ಸಿನಿಂದ ಕೆಳಗೆ ಇಳಿಯಲಾರದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.


Published On - 1:40 pm, Mon, 4 May 20