ಬೆಂಗಳೂರು, ಮಧುರೈ, ವಿಜಯಪುರ ಮತ್ತು ಬೆಳಗಾವಿಗೆ ವಿಶೇಷ ರೈಲು ಸಂಚಾರ: ದಿನಾಂಕ, ಸಮಯ ಇಲ್ಲಿದೆ

ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆ ಬೆಂಗಳೂರು, ಮಧುರೈ, ವಿಜಯಪುರ ಮತ್ತು ಬೆಳಗಾವಿ ಮಾರ್ಗಗಳ ಮಧ್ಯೆ ವಿಶೇಷ ರೈಲುಗಳನ್ನು ಸಂಚರಿಸಲು ನಿರ್ಧರಿಸಲಾಗಿದೆ. ಏಪ್ರಿಲ್ 30 ಮತ್ತು ಮೇ 1 ರಿಂದ ಈ ರೈಲುಗಳು ಸಂಚರಿಸಲಿವೆ. ಪ್ರತಿ ರೈಲಿನ ಸಂಚಾರ ಸಮಯ ಮತ್ತು ಎಲ್ಲೆಲ್ಲಿ ನಿಲುಗಡೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ಮಧುರೈ, ವಿಜಯಪುರ ಮತ್ತು ಬೆಳಗಾವಿಗೆ ವಿಶೇಷ ರೈಲು ಸಂಚಾರ: ದಿನಾಂಕ, ಸಮಯ ಇಲ್ಲಿದೆ
ಪ್ರಾತಿನಿಧಿಕ ಚಿತ್ರ

Updated on: Apr 30, 2025 | 8:21 AM

ಬೆಂಗಳೂರು, ಏಪ್ರಿಲ್​ 30: ಬೇಸಿಗೆ ರಜೆ (summer holidays) ಹಿನ್ನೆಲೆ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆ (South Western Railway) ಹಲವು ವಿಶೇಷ ರೈಲುಗಳ ಸಂಚಾರಕ್ಕೆ ಮುಂದಾಗಿದೆ. ಬೆಂಗಳೂರು ಟು ಮಧುರೈ, ಯಶವಂತಪುರ ಟು ವಿಜಯಪುರ ಮತ್ತು ಬೆಂಗಳೂರು ಟು ಬೆಳಗಾವಿ ಮಧ್ಯೆ ಈ ವಿಶೇಷ ರೈಲುಗಳು ಸಂಚರಿಸಲಿವೆ. ಹಾಗಾದರೆ ಈ ವಿಶೇಷ ರೈಲುಗಳು ಯಾವಾಗಿನಿಂದ ಸಂಚರಿಸಲಿವೆ, ಯಾವೆಲ್ಲಾ ಸ್ಟೇಷನ್​ಗಳಲ್ಲಿ ನಿಲುಗಡೆಯಾಗಲಿವೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು ಟು ಮಧುರೈ

  • ರೈಲು ಸಂಖ್ಯೆ 06521: ಎಸ್​ಎಂವಿಟಿ ಬೆಂಗಳೂರು ಟು ಮಧುರೈ ವಿಶೇಷ ಎಕ್ಸ್‌ಪ್ರೆಸ್ ರೈಲು​ ಏಪ್ರಿಲ್ 30 ​ ರಂದು SMVT ಬೆಂಗಳೂರಿನಿಂದ ಸಂಜೆ 7 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 06:15 ಗಂಟೆಗೆ ಮಧುರೈ ತಲುಪಲಿದೆ.

ನೈಋತ್ಯ ರೈಲ್ವೆ ಟ್ವೀಟ್​

  • ರೈಲು ಸಂಖ್ಯೆ 06522: ಮಧುರೈ ಟು ಎಸ್​ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಮೇ 1 ರಂದು ಮಧುರೈನಿಂದ ಬೆಳಿಗ್ಗೆ 09:10 ಗಂಟೆಗೆ ಹೊರಟು ಅದೇ ದಿನ ಸಂಜೆ 7:50 ಗಂಟೆಗೆ ಬೆಂಗಳೂರು ತಲುಪಲಿದೆ.

ಎಲ್ಲೆಲ್ಲಿ ನಿಲುಗಡೆ?

ಈ ರೈಲುಗಳು ಎರಡೂ ಮಾರ್ಗಗಳಲ್ಲಿ ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ನಾಮಕ್ಕಲ್, ಕರೂರು, ದಿಂಡಿಗಲ್ ಮತ್ತು ಕೊಡೈಕೆನಾಲ್ ರಸ್ತೆ ನಿಲುಗಡೆ ಹೊಂದಿವೆ.

ಯಶವಂತಪುರ ಟು ವಿಜಯಪುರ

  • ರೈಲು ಸಂಖ್ಯೆ 06561: ಯಶವಂತಪುರ-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 30 ರಂದು ಯಶವಂತಪುರದಿಂದ ರಾತ್ರಿ 10 ಗಂಟೆಗೆ ಹೊರಟು, ಮರುದಿನ ಮಧ್ಯ 02:05 ಗಂಟೆಗೆ ವಿಜಯಪುರ ತಲುಪುತ್ತದೆ.
  • ರೈಲು ಸಂಖ್ಯೆ 06562: ವಿಜಯಪುರ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್​ ರೈಲು ವಿಜಯಪುರದಿಂದ ಮೇ 1ರಂದು ಸಂಜೆ 07 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 11:15 ಗಂಟೆಗೆ ಯಶವಂತಪುರಕ್ಕೆ ಆಗಮಿಸಲಿದೆ.

ಎಲ್ಲೆಲ್ಲಿ ನಿಲುಗಡೆ?

ಈ ರೈಲುಗಳು ಎರಡೂ ಮಾರ್ಗಗಳಲ್ಲಿ ತುಮಕೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ಮೆಂಟ್, ತೋರಣಗಲ್, ಹೊಸಪೇಟೆ, ಕೊಪ್ಪಳ, ಗದಗ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿಯಲ್ಲಿ ನಿಲುಗಡೆ ಹೊಂದಿವೆ.

ಬೆಂಗಳೂರು ಟು ಬೆಳಗಾವಿ

  • ರೈಲು ಸಂಖ್ಯೆ 06551: SMVT ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 30 ಮತ್ತು ಮೇ 2ರಂದು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಸಂಜೆ 7 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 07:30 ಗಂಟೆಗೆ ಬೆಳಗಾವಿಗೆ ತಲುಪಲಿದೆ.
  • ರೈಲು ಸಂಖ್ಯೆ 06552: ಬೆಳಗಾವಿ-SMVT ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಬೆಳಗಾವಿಯಿಂದ ಮೇ 1ರಂದು ಮತ್ತು ಮೇ 3ರಂದು ಸಂಜೆ 05:30 ಗಂಟೆಗೆ ಹೊರಟು ಮರುದಿನ ಸಂಜೆ 04:30 ಗಂಟೆಗೆ SMVT ಬೆಂಗಳೂರಿಗೆ ಆಗಮಿಸಲಿದೆ.

ಎಲ್ಲೆಲ್ಲಿ ನಿಲುಗಡೆ?

ಈ ರೈಲುಗಳು ಎರಡೂ ಮಾರ್ಗಗಳಲ್ಲಿ ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರದಲ್ಲಿ ನಿಲುಗಡೆ ಹೊಂದಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.