AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮೆಟ್ರೋ ಟಿಕೆಟ್ ದರ ಓನ್​ ಟು ಡಬಲ್ ಏರಿಕೆ ಮಾಡಲಾಗಿದ್ಯಾ? ಭುಗಿಲೆದ್ದ ಆಕ್ರೋಶ

ಹಾಲಿನ ದರ, ವಿದ್ಯುತ್ ದರ, 3. ಪೆಟ್ರೋಲ್‌–ಡೀಸೆಲ್‌ ದರ, 4. ಮುದ್ರಾಂಕ ಶುಲ್ಕ, 5. ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸಾ ಶುಲ್ಕ.. ಈಗ ಮೆಟ್ರೋ ಸರದಿ.. ಬಸ್ ದರ ಏರಿಕೆ ಬೆನ್ನಲ್ಲೇ ಈಗ ನಮ್ಮ ಮೆಟ್ರೊ ಪ್ರಯಾಣ ದರವೂ ದುಬಾರಿ ಆಗಿದೆ. ಇವತ್ತಿನಿಂದಲೇ ನಮ್ಮ ಮೆಟ್ರೋ ದರವೂ ಜಾರಿಗೆ ಬಂದಿದ್ದು, ಟಿಕೆಟ್ ದರ ಒಂದಕ್ಕೆ ಎರಡರಷ್ಟು ಏರಿಕೆಯಾಗಿದೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಹಾಗಾದ್ರೆ, ಯಾವ ಸ್ಟೇಜ್​ಗೆ ಎಷ್ಟು ದರ ಏರಿಕೆ ಆಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ನಮ್ಮ ಮೆಟ್ರೋ ಟಿಕೆಟ್ ದರ ಓನ್​ ಟು ಡಬಲ್ ಏರಿಕೆ ಮಾಡಲಾಗಿದ್ಯಾ? ಭುಗಿಲೆದ್ದ ಆಕ್ರೋಶ
ನಮ್ಮ ಮೆಟ್ರೋ (ಸಾಂದರ್ಭಿಕ ಚಿತ್ರ)
ರಮೇಶ್ ಬಿ. ಜವಳಗೇರಾ
| Edited By: |

Updated on:Feb 09, 2025 | 7:30 PM

Share

ಬೆಂಗಳೂರು, (ಫೆಬ್ರವರಿ 09): ನಿನ್ನೆಯಷ್ಟೇ (ಫೆಬ್ರವರಿ 08) ಮೆಟ್ರೋ ದರ ಏರಿಕೆ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿತ್ತು. ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ಬರುತ್ತಿದ್ದಂತೆಯೇ ಬಿಎಂಆರ್‌ಸಿಎಲ್ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಶಾಕ್ ಕೊಟ್ಟಿದೆ. ಇಂದು (ಫೆಬ್ರವರಿ 09) ಬೆಳಗ್ಗೆ 7 ಗಂಟೆಯಿಂದಲೇ ಅನ್ವಯವಾಗುವಂತೆ ಪರಿಷ್ಕೃತ ದರ ಜಾರಿಗೊಳಿಸಿದೆ. ಟೋಕನ್ ಮೂಲಕ ಪ್ರಯಾಣ ಮಾಡುವ ಪ್ರಯಾಣಿಕರಿಗೆ 50% ರಷ್ಟು ದರ ಹೆಚ್ಚಳವಾದ್ರೆ, ಸ್ಮಾರ್ಟ್ ಕಾರ್ಡ್ ಮೂಲಕ ಪ್ರಯಾಣ ಮಾಡುವ ಪ್ರಯಾಣಿಕರಿಗೆ 45% ರಷ್ಟು ಹೆಚ್ಚಳವಾಗಲಿದೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ. ಆದ್ರೆ, ಟಿಕೆಟ್ ದರ ಒಂದಕ್ಕೆ ಎರಡರಷ್ಟು ಏರಿಕೆಯಾಗಿದೆ ಎಂದು ಪ್ರಯಾಣಿಕರು ಗರಂ ಆಗಿದ್ದಾರೆ.

0 ಯಿಂದ 2 ಕಿಲೋ ಮೀಟರ್​ವರೆಗಿನ ಪ್ರಯಾಣದ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಹಿಂದೆ ಇದ್ದ 10ರೂಪಾಯಿಯೇ ಮುಂದುವರಿಯಲಿದೆ. 2 ರಿಂದ 40 ಕಿಲೋ ಮೀಟರ್​ಗೆ ಹಿಂದೆ 15 ರೂಪಾಯಿ ಇದ್ದ ದರ ಇದೀಗ 20 ರೂ. ಆಗಿದೆ. 4ರಿಂದ 6 ಕಿಲೋ ಮೀಟರ್​ಗೆ 25 ಇದ್ದ ದರ 30ಕ್ಕೆ ಏರಿಕೆಯಾಗಿದೆ. 6 ರಿಂದ 8 ಕಿಲೋ ಮೀಟರ್​ಗೆ ಹಿಂದೆ 30 ಇದ್ದದ್ದು, ಇದೀಗ 40ರೂಪಾಯಿ ಆಗಿದೆ. 8 ರಿಂದ 10 ಕಿಲೋ ಮೀಟರ್ ಪ್ರಯಾಣಿಸುವವರಿಗೆ 40 ರೂಪಾಯಿ ಇದ್ದ ಟಿಕೆಟ್ ದರ 50ಕ್ಕೆ ತಲುಪಿದೆ.

10 ರಿಂದ 15 ಕಿಲೋ ಮೀಟರ್​ಗೆ 45 ರೂಪಾಯಿ ಪಾವತಿಸ್ತಿದ್ದವರು ಇದೀಗ 60 ರೂಪಾಯಿ ಪೇ ಮಾಡ್ಬೇಕಿದೆ. 15 ರಿಂದ 20 ಕಿಲೋ ಮೀಟರ್​ಗೆ 50 ರೂಪಾಯಿಗೆ ಸಿಗ್ತಿದ್ದ ಟಿಕೆಟ್ 70 ರೂಪಾಯಿಗೆ ಕೊಂಡುಕೊಳ್ಳಬೇಕಿದೆ. 20 ರಿಂದ 25 ಕಿಲೋ ಮೀಟರ್​ನ ಹೊಸ ದರ 80 ರೂಪಾಯಿ ಆದ್ರೆ, ಹಳೇ ದರ 60 ರೂಪಾಯಿ ಇತ್ತು. 25 ರಿಂದ 30 ಕಿಲೋ ಮೀಟರ್​ ಪ್ರಯಾಣಕ್ಕೆ 60ರೂಪಾಯಿ ಇದ್ದದ್ದು ಇದೀಗ 90 ರೂಪಾಯಿಗೆ ಏರಿಕೆಯಾಗಿದೆ.

ಎಲ್ಲಿಂದ ಎಲ್ಲಿಗೆ ಎಷ್ಟು ರೂಪಾಯಿ?

  • ವೈಟ್ ಫೀಲ್ಡ್ To ಚಲ್ಲಘಟ್ಟ- 60ರೂ. ರಿಂದ 90ರೂ.ಗೆ ಏರಿಕೆ
  • ಮಾದಾವರ To ರೇಷ್ಮೆ ಸಂಸ್ಥೆ- 60ರಿಂದ 90 ಕ್ಕೆ ಏರಿಕೆ
  • ಸ್ಮಾರ್ಟ್​​ ಕಾರ್ಡ್ ಮಿನಿಮಮ್ ಬ್ಯಾಲೆನ್ಸ್ 50 ರಿಂದ 90ಕ್ಕೆ ಏರಿಕೆ
  • ಸ್ಮಾರ್ಟ್ ಕಾರ್ಡ್​​ಗಳಿಗೆ ಶೇ.5ರಷ್ಟು ರಿಯಾಯಿತಿ ಮುಂದುವರಿಕೆ
  • ಒಂದು ದಿನದ ಮೆಟ್ರೋ ಟ್ರೈನ್ ಕಾರ್ಡ್ 200 ರಿಂದ 300ಕ್ಕೆ ಏರಿಕೆ
  • 3 ದಿನಗಳ ಮೆಟ್ರೋ ಟ್ರೈನ್ ಕಾರ್ಡ್ ಗೆ 400ರಿಂದ 600 ಕ್ಕೆ ಏರಿಕೆ
  • 5 ದಿನಗಳ ಮೆಟ್ರೋ ಟ್ರೈನ್ ಕಾರ್ಡ್ ಗೆ 600 ರಿಂದ 800ಕ್ಕೆ ಏರಿಕೆ

ದರ ಓನ್ ಟು ಡಬಲ್ ಏರಿಕೆ

ಮೆಟ್ರೋ ಟಿಕೆಟ್ ದರ ಒಂದಕ್ಕೆ ಎರಡರಷ್ಟು ಏರಿಕೆಯಾಗಿದೆ ಎಂದು ಪ್ರಯಾಣಿಕರು ಗರಂ ಆಗಿದ್ದಾರೆ. ನಾನು ಪ್ರತಿದಿನ ಮೂರ್ನಾಲ್ಕು ಬಾರಿ ಮೆಟ್ರೋದಲ್ಲಿ ಪ್ರಯಾಣಿಸುತ್ತೇನೆ. ದರ ಏರಿಕೆ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದ ಆಕ್ರೋಶ ವ್ಯಕ್ತಪಡಿಸಿದರು.

ಬೆನ್ನಿಗಾನಹಳ್ಳಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ನಿಲ್ದಾಣ ( ವಿಧಾನಸೌಧಕ್ಕೆ ) ಕಳೆದ ಭಾನುವಾರ 26.6 ರುಪಾಯಿ ಇತ್ತು. ಈ ವಾರ ಬರೋಬ್ಬರಿ 60 ರುಪಾಯಿ ಆಗಿದೆ ಎಂದು ದಾಖಲೆ ಸಮೇತ ಪ್ರಯಾಣಿಕ ಅರ್ಜುನ್ ಎನ್ನುವರು ಮೆಟ್ರೋ ವಿರುದ್ಧ ಆಕ್ರೋಶ ಹೊರಹಾಕಿದರು.

ಓನ್ ಟು ಡಬಲ್ ದರ ಹೆಚ್ಚಳ ಮಾಡಿದ್ದಾರೆ. ನಾನು ಪ್ರತಿವಾರ ಬೆನ್ನಿಗಾನಹಳ್ಳಿಯಿಂದ ಕಬ್ಬನ್ ಪಾರ್ಕ್ ಗೆ ಬರುತ್ತೇನೆ. ಕಳೆದ ಭಾನುವಾರ ಆನ್ಲೈನ್ ಮೂಲಕ ಟಿಕೆಟ್ ತಗೊಂಡಿದ್ದೆ 26 ರುಪಾಯಿ ಇತ್ತು. ಈ ವಾರ 60 ರುಪಾಯಿ ತಗೊಂಡ್ರು .ಇದು ಸರಿಯಲ್ಲ. ಇಷ್ಟೊಂದು ಏರಿಕೆ ಮಾಡಿದ್ರೆ ಕಷ್ಟ ಆಗುತ್ತದೆ ಎಂದು ಕಿಡಿಕಾರಿದರು.

Published On - 1:48 pm, Sun, 9 February 25

Follow Us
Ramesh B Jawalagera
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!