- Kannada News Photo gallery Good news for our metro passengers: driver less metro to reach Bangaluru today, taja suddi
ಟಿಕೆಟ್ ದರ ಏರಿಕೆ ಬೆನ್ನಲ್ಲೇ ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರಿಗೆ ಬಂತು ಡ್ರೈವರ್ ಲೆಸ್ ಮೆಟ್ರೋ
ಬೆಂಗಳೂರಿನ ಮೆಟ್ರೋ ರೈಲು ಸೇವೆಗೆ ಒಂದು ಸಂತಸದ ಸುದ್ದಿ ನೀಡಿದೆ. ಎರಡನೇ ಚಾಲಕರಹಿತ ಮೆಟ್ರೋ ರೈಲು ಹೆಬ್ಬಗೋಡಿ ಡಿಪೋ ತಲುಪಿದೆ. ಇದು ಸಂವಹನ ಆಧಾರಿತ (CBTC) ತಂತ್ರಜ್ಞಾನವನ್ನು ಹೊಂದಿದ್ದು, ಹಳದಿ ಮಾರ್ಗದಲ್ಲಿ ಸಂಚರಿಸಲಿದೆ. ಕನಿಷ್ಠ ಐದು ಚಾಲಕರಹೀನ ರೈಲುಗಳು ವಾಣಿಜ್ಯ ಕಾರ್ಯಾಚರಣೆಗೆ ಅಗತ್ಯ.
Updated on:Feb 09, 2025 | 12:48 PM

ಟಿಕೆಟ್ ದರ ಏರಿಕೆ ಮಾಡುವ ಮೂಲಕ ನಮ್ಮ ಮೆಟ್ರೋ ಒಂದು ಕಡೆ ಶಾಕ್ ನೀಡಿದ್ದರೆ, ಮತ್ತೊಂಡೆದೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಅದೇನೆಂದರೆ 2ನೇ ಡ್ರೈವರ್ ಲೆಸ್ ಮೆಟ್ರೋ ಬೆಂಗಳೂರಿಗೆ ತಲುಪಿದೆ.

ಹೌದು.. ಇಂದು ಬೆಳ್ಳಿಗ್ಗೆ 8.30ಕ್ಕೆ ಟಿಟಾಗರ್ನಿಂದ 1900 ಕಿಲೋಮೀಟರ್ ದೂರದಿಂದ ಹೆಬ್ಬಗೋಡಿ ಡಿಪೋಗೆ ಡ್ರೈವರ್ ಲೆಸ್ ಮೆಟ್ರೋ ಬಂದು ತಲುಪಿದೆ.

ಇನ್ನು ಬೆಂಗಳೂರಿಗೆ ಬಂದು ತಲುಪಿರುವ ಡ್ರೈವರ್ ಲೆಸ್ ಮೆಟ್ರೋ ಸಿಬಿಟಿಸಿ ಅಂದರೆ ಸಂವಹನ ಆಧಾರಿತ ರೈಲಾಗಿದೆ.

ಯೆಲ್ಲೋ ಲೈನ್ನಲ್ಲಿ ಈ ಡ್ರೈವರ್ ಲೆಸ್ ಮೆಟ್ರೋ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೂ ಕಾರ್ಯನಿರ್ವಹಿಸಲಿರುವ ಯೆಲ್ಲೋ ಲೈನ್ ಮೆಟ್ರೋ ಒಟ್ಟು 19.15 ಕಿಮೀ ಸಂಚಾರ ನಡೆಸಲಿವೆ.

ಮೆಟ್ರೋದ ವಾಣಿಜ್ಯ ಕಾರ್ಯಚರಣೆ ಆರಂಭಿಸಲು ಕನಿಷ್ಟ 5 ಡ್ರೈವರ್ ಲೇಸ್ ಮೆಟ್ರೋ ಬೇಕಾಗುತ್ತದೆ. ಸದ್ಯ ಬೆಂಗಳೂರಿಗೆ ಎರಡು ಡ್ರೈವರ್ ಲೇಸ್ ಮೆಟ್ರೋ ಬಂದಿದ್ದು, ಕೆಲ ತಿಂಗಳ ಹಿಂದೆ ಒಂದು ಡ್ರೈವರ್ ಲೇಸ್ ಮೆಟ್ರೋ ಬೆಂಗಳೂರಿಗೆ ಆಗಮಿಸಿತ್ತು.
Published On - 12:19 pm, Sun, 9 February 25



















